ಸೋಲದೇವನಹಳ್ಳಿ ತೋಟದಲ್ಲಿ ನಟಿ ಲೀಲಾವತಿ ಅಂತ್ಯಕ್ರಿಯೆ

ಬೆಂಗಳೂರು : ಹಿರಿಯ ನಟಿ ಲೀಲಾವತಿ ಅವರ ಅಂತಿಮ ಸಂಸ್ಕಾರವನ್ನು ಅವರ ನೆಚ್ಚಿನ ತೋಟದಲ್ಲಿ ಶನಿವಾರ (ಡಿಸೆಂಬರ್‌ 9) ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ನೆಲಮಂಗಲ ಸಮೀಪದ ಸೋಲದೇವನಹಳ್ಳಿ (Soladevanahalli) ತೋಟದಲ್ಲಿ ಲೀಲಾವತಿ ಅವರ ಅಂತಿಮ ಸಂಸ್ಕಾರ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಶುಕ್ರವಾರದಿಂದ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಡಿಸೆಂಬರ್‌ 9ರಂದು ಮುಂಜಾನ 5:30ರಿಂದ ಮಧ್ಯಾಹ್ನ ೨:೩೦ಕರ ವರೆಗೆ ವ್ಯವಸ್ಥೆ ಮಾಡಲಾಗಿದೆ. ನಂತರ ಮೆರವಣಿಗೆ ಮೂಲಕ ಸೋಲದೇವನಹಳ್ಳಿಯ ತೋಟಕ್ಕೆ ತೆರಳಿ, ಅಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಲೀಲಾವತಿ ಅಂತಿಮ ದರ್ಶನದ ಭದ್ರತೆಗೆ 500 ಪೊಲೀಸರ ನಿಯೋಜನೆ ಮಾಡಲಾಗಿದೆ. ಎಸ್ಪಿ, ಹೆಚ್ಚವರಿ ಎಸ್ಪಿ ನೇತೃತ್ವದಲ್ಲಿ 6 ಮಂದಿ ಡಿವೈಎಸ್ಪಿ, 15 ಮಂದಿ ಇನ್ಸೆಪೆಕ್ಟರ್ಸ್ ಹೆಚ್ಚುವರಿಯಾಗಿ ಕೆಎಸ್ಆರ್‌ಪಿ ತುಕಡಿಗಳ ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಲೀಲಾವತಿ ಅವರು ಅಂತಿಮ ದರ್ಶನಕ್ಕೆ ವಿವಿಐಪಿಗಳಿಗೆ ಹಾಗೂ ಸಿನಿಮಾ ನಟ ನಟಿಯರಿಗೆ ದರ್ಶನಕ್ಕಾಗಿ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement