ಚಿಕ್ಕಮಗಳೂರು : ಬೆಟ್ಟದಿಂದ ಬೆಟ್ಟಕ್ಕೆ ಹಗ್ಗ ಕಟ್ಟಿ 4 ಸಾವಿರ ಅಡಿ ಪ್ರಪಾತದಿಂದ ಟೆಕ್ಕಿ ಮೃತದೇಹ ಹೊತ್ತು ತಂದ ತಂಡ

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿಝರಿ ಜಲಪಾತದ ಬಳಿ ಸುಮಾರು 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಂಗಳೂರು ಮೂಲದ ಟೆಕ್ಕಿ ಭರತ್ ಮೃತದೇಹವನ್ನ ಹರಸಾಹಸಪಟ್ಟು ಪ್ರಪಾತದಿಂದ ಮೇಲಕ್ಕೆ ತರಲಾಗಿದೆ ಎಂದು ವರದಿಯಾಗಿದೆ.
ಶನಿವಾರ ಸಂಜೆಗೆ ಮೃತದೇಹ ಪತ್ತೆಯಾಗಿದ್ದರೂ ಕತ್ತಲಲ್ಲಿ 4 ಸಾವಿರ ಅಡಿ ಕಡಿದಾದ ಪ್ರಪಾತದಿಂದ ಮೃತದೇಹ ಹೊರತರುವುದು ಕಷ್ಟಸಾಧ್ಯ ಎಂದು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆಯನ್ನ ನಿಲ್ಲಿಸಿದ್ದರು.
ಭಾನುವಾರ ರಾಣಿಝರಿ ಜಲಪಾತದ ಕಡೆಯಿಂದ ಪ್ರಪಾತಕ್ಕೆ ಇಳಿದ 25 ಜನರ ತಂಡ 4 ಸಾವಿರ ಅಡಿ ಕೆಳಗಿಂದ ಮೃತದೇಹವನ್ನು ಮೇಲಕ್ಕೆ ತಂದಿದೆ.

ರಾಣಿಝರಿ ವ್ಯೂ ಪಾಯಿಂಟ್‍ನಿಂದ ಮೃತದೇಹವಿದ್ದ 4 ಸಾವಿರ ಅಡಿ ಪ್ರಪಾತಕ್ಕೆ ಸುಮಾರು 14 ಕಿ.ಮೀ. ಆಗಲಿದೆ. ತಂಡ ಸುಮಾರು 5 ಕಿ.ಮೀ. ಮೃತದೇಹವನ್ನ ಹೊತ್ತು ತಂದಿದೆ.ಅಲ್ಲದೆ, 4 ಸಾವಿರ ಅಡಿ ಪ್ರಪಾತದಿಂದ ಬಿದ್ದ ರಭಸಕ್ಕೆ ಭರತ್ ಮೃತದೇಹ ಸಂಪೂರ್ಣ ಛಿದ್ರವಾಗಿತ್ತು. ತಂಡದ ಸದಸ್ಯರು ತೀರಾ ಕಡಿದಾದ ಪ್ರಪಾತದ ಸ್ಥಳದಲ್ಲಿ ಮರದಿಂದ ಮರಕ್ಕೆ ಹಗ್ಗ ಕಟ್ಟಿಕೊಂಡು ಮೃತದೇಹ ಹೊತ್ತುಕೊಂಡು ಹಗ್ಗದ ಮೂಲಕ ಬೆಟ್ಟ ಏರಿ ಬಂದಿದ್ದಾರೆ.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

ಡಿಸೆಂಬರ್ 6ರಂದು ಚಿಕ್ಕಮಗಳೂರು ಜಿಲ್ಲೆಯ ರಾಣಿಝರಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕ ತನ್ನ ಮೊಬೈಲ್, ಬೈಕ್, ಐಡಿ ಕಾರ್ಡ್, ಬಟ್ಟೆಯನ್ನ ಗುಡ್ಡದ ತುದಿಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ. ಆತ ಮೂರು ದಿನಗಳಿಂದ ಸಂಪರ್ಕಕ್ಕೆ ಸಿಗದ ಕಾರಣ ಕುಟುಂಬಸ್ಥರು ಪ್ರಕರಣ ದಾಖಲಿಸಿ ಹುಡುಕಾಟ ನಡೆಸಿದ್ದರು.
ಬೆಂಗಳೂರಿನಲ್ಲಿ ಎಂ.ಎನ್.ಸಿ.ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲಸ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement