ಐಪಿಎಲ್ 2024: ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ನೇಮಕ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಸೀಸನ್‌ಗೆ ಮುಂಚಿತವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಶುಕ್ರವಾರ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
ಇದು ಮುಂಬೈ ಇಂಡಿಯನ್ಸ್ (MI) ನಾಯಕನಾಗಿ ರೋಹಿತ್ ಶರ್ಮಾ ಅವರ ಹತ್ತು ವರ್ಷಗಳ ಅಧಿಕಾರಾವಧಿಯನ್ನು ಕೊನೆಗೊಳಿಸಿತು. ನಾಯಕನಾಗಿದ್ದ ಸಮಯದಲ್ಲಿ, ರೋಹಿತ್ ಐದು ಐಪಿಎಲ್ ಟ್ರೋಫಿ ಗೆಲ್ಲಲು ಫ್ರಾಂಚೈಸಿಗೆ ಮಾರ್ಗದರ್ಶನ ನೀಡಿದರು. ಗುಜರಾತ್ ಟೈಟಾನ್ಸ್‌ನಿಂದ ಟ್ರೇಡ್‌ ಭಾಗವಾಗಿ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರುಸೇರ್ಪಡೆಯಾದರು. ಆಲ್ ರೌಂಡರ್ ಕಳೆದ ಎರಡು ವರ್ಷಗಳಿಂದ ಗುಜರಾತ್‌ ಟೈಟಾನ್ಸ್‌ ನಾಯಕರಾಗಿದ್ದರು ಮತ್ತು ಅವರು 2022 ರಲ್ಲಿ ಗುಜರಾತ್‌ ಟೈಟಾನ್ಸ್‌ ಪ್ರಶಸ್ತಿ ಗೆದ್ದಿತು.
“ನಾವು ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ಹೊಸ ನಾಯಕರಾಗಿ ಸ್ವಾಗತಿಸುತ್ತೇವೆ ಮತ್ತು ಅವರಿಗೆ ಶುಭ ಹಾರೈಸುತ್ತೇವೆ ಎಂದು ಮುಂಬೈ ಇಂಡಿಯನ್ಸ್‌ನ ಗ್ಲೋಬಲ್ ಹೆಡ್ ಆಫ್ ಪರ್ಫಾರ್ಮೆನ್ಸ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.

2022-23 ರಿಂದ ಗುಜರಾತ್‌ ಟೈಟಾನ್ಸ್‌ (GT)ಗಾಗಿ 31 ಪಂದ್ಯಗಳಲ್ಲಿ, ಪಾಂಡ್ಯ 37.86 ರ ಸರಾಸರಿಯಲ್ಲಿ ಮತ್ತು 133 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 833 ರನ್ ಗಳಿಸಿದ್ದಾರೆ. ಆರು ಅರ್ಧ ಶತಕ ಗಳಿಸಿದ್ದಾರೆ. ಮತ್ತು 87* ಉತ್ತಮ ಸ್ಕೋರ್ ಆಗಿದೆ. ಅವರು ತಂಡಕ್ಕೆ 11 ವಿಕೆಟ್‌ಗಳನ್ನು ಪಡೆದಿದ್ದಾರೆ. 3/17 ವಿಕೆಟ್‌ ಪಡೆದದ್ದು ಅವರ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.
ಪಾಂಡ್ಯ ಅವರು 2015-2021ರಲ್ಲಿ ಮುಂಬೈ ಇಂಡಿಯನ್ಸ್‌ ಗಾಗಿ 92 ಪಂದ್ಯಗಳನ್ನು ಆಡಿದರು, 153 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 27.33 ರ ಸರಾಸರಿಯಲ್ಲಿ 1,476 ರನ್ ಗಳಿಸಿದ್ದಾರೆ. ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದಾರೆ ಮತ್ತು 91 ರ ಅತ್ಯುತ್ತಮ ಸ್ಕೋರ್‌ ಆಗಿದೆ. ಅವರು ತಂಡಕ್ಕಾಗಿ 42 ವಿಕೆಟ್‌ಗಳನ್ನು ಪಡೆದರು. 3/20 ವಿಕೆಟ್‌ ಪಡೆದದ್ದು ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ.
ಪಾಂಡ್ಯ ಇದ್ದ ವಿವಿಧ ತಂಡಗಳು ಒಟ್ಟು ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದೆ. ನಾಲ್ಕು ಮುಂಬೈ ಇಂಡಿಯನ್ಸ್‌ (2015, 2017, 2019, 2020) ಮತ್ತು ಗುಜರಾತ್‌ ಟೈಟಾನ್ಸ್‌ (2022)ರಲ್ಲಿ ಟ್ರೋಫಿ ಗೆದ್ದಿದೆ.

ಪ್ರಮುಖ ಸುದ್ದಿ :-   ಶಿವಕಾಶಿಯ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 8 ಮಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement