ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ರೈಲಿಗೆ ಡಿಕ್ಕಿ ಹೊಡೆದು ಮೂವರು ಬಾಲಕರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ರೈಲ್ವೇ ಸೇತುವೆಯ ಮೇಲೆ ಸಾಮಾಜಿಕ ಜಾಲತಾಣಗಳಿಗಾಗಿ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ.
ಸುಜ್ನಿಪಾರಾ ಮತ್ತು ಅಹಿರೋನ್ ನಿಲ್ದಾಣಗಳ ನಡುವಿನ ರೈಲ್ವೆ ಸೇತುವೆ ಮೇಲೆ ಹಳಿಗಳ ಮಧ್ಯೆ ಐವರು ಯುವಕರು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ಹೌರಾ-ರಾಧಿಕಾಕಪೂರ್ ಕುಲಿಕ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಬಾಲಕನ ಶವ ಹಳಿಯಲ್ಲಿ ಪತ್ತೆಯಾಗಿದ್ದರೆ, ಇಬ್ಬರ ಮೃತದೇಹಗಳು ರೈಲ್ವೇ ಸೇತುವೆಯ ಕೆಳಗಿರುವ ನದಿಯಲ್ಲಿ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಇಬ್ಬರು ಬಾಲಕರು ಸೇತುವೆಯಿಂದ ಜಿಗಿದರೆ ಅಥವಾ ರೈಲಿಗೆ ಡಿಕ್ಕಿ ಹೊಡೆದು ಬಿದ್ದಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೌಶಿಕ ಮಿತ್ರಾ, “ಪ್ರತಿಯೊಬ್ಬರೂ ರೈಲ್ವೆ ಹಳಿಯಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು. ರೈಲ್ವೆ ಹಳಿಯಲ್ಲಿ ಛಾಯಾಗ್ರಹಣ/ವಿಡಿಯೋಗ್ರಫಿ ಮಾಡುವ ಯಾವುದೇ ಪ್ರಯತ್ನವನ್ನು ಯಾವಾಗಲೂ ನಿರ್ಬಂಧಿಸಲಾಗಿದೆ. ಏಕೆಂದರೆ ರೈಲು ಯಾವುದೇ ಕ್ಷಣದಲ್ಲಿ ಬರಬಹುದು. ಮನಸ್ಸಿನ ಗೊಂದಲವು ಮಾರಣಾಂತಿಕ ಘಟನೆಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ