ಪ್ರವಾಸದ ವೇಳೆ ವಿದ್ಯಾರ್ಥಿ ಜೊತೆ ರೊಮ್ಯಾಂಟಿಕ್ ಫೋಟೋಶೂಟ್ : ಮುಖ್ಯ ಶಿಕ್ಷಕಿ ಅಮಾನತು​

ಚಿಕ್ಕಬಳ್ಳಾಪುರ: ಪ್ರವಾಸದ ವೇಳೆ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಆಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದ ವೀಡಿಯೊ ವೈರಲ್ ಆದ ಬೆನ್ನಲ್ಲೇ ಮುಖ್ಯಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದ ವೇಳೆ ಮುರುಗಮಲ್ಲ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 42 ವರ್ಷದ ಮುಖ್ಯಶಿಕ್ಷಕಿ ವಿದ್ಯಾರ್ಥಿ ಜೊತೆ ಕೆನ್ನೆಗೆ ಮುತ್ತು ಕೊಟ್ಟಂತೆ, ಸೀರೆ ಸೆರಗು ಎಳೆದಂತೆ ಫೋಟೊ ಶೂಟ್‌ ಮಾಡಿಸಿದ್ದರು. ವಿದ್ಯಾರ್ಥಿ ಶಿಕ್ಷಕಿಯನ್ನು ಮುದ್ದಾಡಿದ್ದು, ಮುಖ್ಯಾಧ್ಯಾಪಕಿ ಕೂಡ ವಿದ್ಯಾರ್ಥಿಯನ್ನು ತಬ್ಬಿಕೊಂಡಿರುವ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆದ ನಂತರ ಬಿಇಒ ಶಾಲೆಗೆ ಭೇಟಿ ನೀಡಿ ಪ್ರವಾಸಕ್ಕೆ ತೆರಳಿದ್ದ ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಡುಗೆ ಸಿಬ್ಬಂದಿ ವಿಚಾರಣೆ ನಡೆಸಿದ್ದಾರೆ. ಡಿಸೆಂಬರ್ 22 ರಿಂದ 25 ರವರೆಗೆ ಶಾಲೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹೊರನಾಡು, ಧರ್ಮಸ್ಥಳ, ಯಾಣ ಮತ್ತು ಇತರ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದು, ಅಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

10ನೇ ತರಗತಿಯ ಬಾಲಕನ ಪೋಷಕರು ಆಕ್ರೋಶಗೊಂಡಿದ್ದು, ಶಿಕ್ಷಕನ ವರ್ತನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ)ಗೆ ದೂರು ಸಲ್ಲಿಸಿದ್ದಾರೆ. ಬಿಇಒ ಅವರ ಶಿಫಾರಸಿನಂತೆ ಮುಖ್ಯ ಶಿಕ್ಷಕಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement