ವೀಡಿಯೊ…| ಟ್ರಕ್ ಚಾಲಕರ ಪ್ರತಿಭಟನೆ ವೇಳೆ ಪೊಲೀಸರನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ ಚಾಲಕರು

ಮುಂಬೈ : ನೂತನ ಹಿಟ್ ಅಂಡ್ ರನ್ ಕಾನೂನನ್ನು ವಿರೋಧಿಸಿ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಟ್ರಕ್ ಚಾಲಕರು ಸೋಮವಾರ ಪೊಲೀಸರನ್ನು ಅಟ್ಟಾಡಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಜೆಎನ್‌ಪಿಟಿ ರಸ್ತೆಯಲ್ಲಿ ಪ್ರತಿಭಟನಾಕಾರರ ರಸ್ತೆ ತಡೆ ತೆರವುಗೊಳಿಸಲು ಪೊಲೀಸರು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆಯ ವೀಡಿಯೊದಲ್ಲಿ ದೊಣ್ಣೆಗಳನ್ನು ಹಿಡಿದ ವ್ಯಕ್ತಿಗಳ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿ ಅವರನ್ನು ಅಟ್ಟಾಡಿಸುವುದನ್ನು ತೋರಿಸುತ್ತದೆ.
ಕೆಲವರು ಪೊಲೀಸನನ್ನು ಕಲ್ಲಿನಿಂದ ಹೊಡೆಯುವುದು ಸಹ ಕಂಡುಬಂದಿತು. ಪೊಲೀಸ್ ಸಿಬ್ಬಂದಿ ತನ್ನನ್ನು ರಕ್ಷಿಸಿಕೊಳ್ಳಲು ಓಡಿಹೋಗುವುದನ್ನು ಮತ್ತು ಗುಂಪು ಆತನನ್ನು ಬೆನ್ನಟ್ಟುವುದನ್ನು ವೀಡಿಯೊ ತೋರಿಸುತ್ತದೆ.

ಘಟನೆಯ ನಂತರ ಸುಮಾರು 40 ಚಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನವಿ ಮುಂಬೈ ಸರ್ಕಲ್ ಡಿಸಿಪಿ ವಿವೇಕ ಪನ್ಸಾರೆ ತಿಳಿಸಿದ್ದಾರೆ.
ಎಲ್ಲ ಟ್ರಕ್ ಚಾಲಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ನೂರಾರು ಟ್ರಕ್ ಮತ್ತು ವಾಣಿಜ್ಯ ವಾಹನ ಚಾಲಕರು ದೇಶದಾದ್ಯಂತ ಹಿಟ್ ಮತ್ತು ರನ್ ಪ್ರಕರಣಗಳಿಗೆ ಹೊಸ ದಂಡ ಹಾಗೂ ಶಿಕ್ಷೆ ಹೆಚ್ಚಳ ಮಾಡುವ ಕಾನೂನುಗಳ ಜಾರಿ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ.
ಇತ್ತೀಚೆಗೆ ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆಯನ್ನು ಬದಲಿಸಿದ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತವನ್ನು ಉಂಟುಮಾಡುವ ಮತ್ತು ಪೊಲೀಸರಿಗೆ ಅಥವಾ ಆಡಳಿತದ ಯಾವುದೇ ಅಧಿಕಾರಿಗೆ ತಿಳಿಸದೆ ಪರಾರಿಯಾಗುವ ಚಾಲಕರು 10 ವರ್ಷಗಳವರೆಗೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. .

ಪ್ರಮುಖ ಸುದ್ದಿ :-   ದೇಗುಲದ ಆವರಣದ ಒಳಗೆ ಗೋವಿನ ರುಂಡ ಎಸೆದ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement