ಮೊಬೈಲ್‌ ಬ್ಲಾಸ್ಟ್‌ : ಯುವಕನಿಗೆ ಗಾಯ

ಬೆಂಗಳೂರು: ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈಟ್ ಫೀಲ್ಡ್​ನಲ್ಲಿ ವಾಸವಿದ್ದ 24 ವರ್ಷದ ಪ್ರಸಾದ ಎಂಬಾತನೇ ಮೊಬೈಲ್‌ ಬ್ಲಾಸ್ಟ್‌ ಆಗಿ ಗಾಯಗೊಂಡವರಾಗಿದ್ದಾರೆ. ಪ್ರಸಾದ ಅಕ್ಟೋಬರ್ ತಿಂಗಳಲ್ಲಿ ಒನ್​ ಪ್ಲಸ್​ ಕಂಪನಿಯ ಮೊಬೈಲ್ ಖರೀದಿಸಿದ್ದನು. ಮಂಗಳವಾರ ಸ್ಕೂಟರಿ​ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿ ಇಟ್ಟುಕೊಂಡಿದ್ದ. ಆದರೆ ಅದೇನಾಯ್ತೋ ಗೊತ್ತಿಲ್ಲ ಮೊಬೈಲ್​ ಏಕಾಏಕಿ ಮೊಬೈಲ್‌ ಬ್ಲಾಸ್ಟ್ ಆಗಿದೆ.
ಈ ಘಟನೆ ಮೊಬೈಲ್​ ಶೋ ರೂಂ ಗಮನಕ್ಕೆ ಬರುತ್ತಿದ್ದಂತೆ ವೈದ್ಯಕೀಯ ವೆಚ್ಚದ ಜತೆಗೆ ಮೊಬೈಲ್ ಹಣ ಕೊಡಲಾಗುವುದು ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಶಸ್ತ್ರಚಿಕಿತ್ಸೆಗೆ 4 ಲಕ್ಷ ರೂ. ಖರ್ಚುತಗಲಬಹುದು ಎಂದು ವೈದ್ಯರು ಹೇಳುತ್ತಿರುವುದರಿಂದ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಗಾಯಾಳು ಒತ್ತಾಯಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement