ಲೋಕಸಭೆಯಿಂದ ಮಹುವಾ ಮೊಯಿತ್ರಾ ಉಚ್ಚಾಟನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ : ‌ತಮ್ಮನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಲೋಕಸಭಾ ಸಚಿವಾಲಯಕ್ಕೆ ಸೂಚಿಸಿದೆ. ಹಾಗೂ ಮೊಯಿತ್ರಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರ ಪೀಠವು ಲೋಕಸಭಾ ಸಚಿವಾಲು ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು. ಅದಕ್ಕೆ ಪ್ರತ್ಯುತ್ತರವನ್ನು ನಂತರದ ಮೂರು ವಾರಗಳಲ್ಲಿ ಮಹುವಾ ಅವರು ನೀಡಲಿ ಎಂದು ತಿಳಿಸಿತು ಹಾಗೂ ಪ್ರಕರಣವನ್ನು ಮಾರ್ಚ್‌ 11ಕ್ಕೆ ಪಟ್ಟಿ ಮಾಡುವಂತೆ ನಿರ್ದೇಶಿಸಿತು.
ಮೊಯಿತ್ರಾ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಅವರಿಗೆ ಪೀಠವು ಮಧ್ಯಂತರ ಪರಿಹಾರಕ್ಕಾಗಿ ಮಾರ್ಚ್‌ನಲ್ಲಿ ಅರ್ಜಿ ಪರಿಗಣಿಸುವುದಾಗಿ ಪೀಠ ತಿಳಿಸಿದೆ.

ಲೋಕಸಭೆ ಸೆಕ್ರೆಟರಿ ಜನರಲ್ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಔಪಚಾರಿಕ ನೋಟಿಸ್ ನೀಡದಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದರು. ಸಂವಿಧಾನದ ಅಡಿ ಬರುವ ಮೂರು ಸಾರ್ವಭೌಮ ಅಂಗಗಳಲ್ಲಿ ಸಂಸತ್ತು ಒಂದಾಗಿದೆ. ಅದು ತನ್ನ ಸದಸ್ಯರಿಗೆ ಸಂಬಂಧಿಸಿದ ಶಿಸ್ತು ಕ್ರಮದ ವಿಚಾರವನ್ನು ತನ್ನ ಆಂತರಿಕ ಪ್ರಕ್ರಿಯೆ ಮೂಲಕ ನಿರ್ವಹಿಸಲು ಸಮರ್ಥವಾಗಿದ್ದು, ಇದರಲ್ಲಿ ನ್ಯಾಯಾಂಗ ಪರಿಶೀಲನೆಗೆ ಅವಕಾಶವಿಲ್ಲ ಎಂದು ವಾದಿಸಿದರು. “ಸಾಕ್ಷ್ಯದ ಆಧಾರದಲ್ಲಿ ಸಾರ್ವಭೌಮ ಅಂಗವು ತನ್ನ ಆಂತರಿಕ ಶಿಸ್ತು ಕ್ರಮದ ವಿಚಾರವನ್ನು ನಿರ್ಧರಿಸುತ್ತಿದೆ,” ಎಂದು ಅವರು ನೋಟಿಸ್‌ ನೀಡುವುದನ್ನು ವಿರೋಧಿಸಿದರು.
ವಾದಗಳನ್ನು ಆಲಿಸಿದ ಪೀಠವು ಮೊಯಿತ್ರಾ ಅವರ ಮನವಿಯಲ್ಲಿ ಪ್ರತಿವಾದಿ ಪಕ್ಷವಾಗಿ ನಿಯೋಜಿಸಲಾದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಲೋಕಸಭೆಯ ನೈತಿಕ ಸಮಿತಿಗೆ ಯಾವುದೇ ನೋಟಿಸ್ ನೀಡದಿರಲು ನಿರ್ಧರಿಸಿತು ಮತ್ತು ಲೋಕಸಭೆಯ ಸಚಿವಾಲಯದಿಂದ ಮಾತ್ರ ಉತ್ತರವನ್ನು ಕೋರಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

ಮಧ್ಯಂತರ ಪರಿಹಾರ ಕುರಿತು ವಾದಿಸುವುದಾಗಿ ಮಹುವಾ ಪರ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಡಾ. ಅಭಿಷೇಕ ಮನು ಸಿಂಘ್ವಿ ಕೋರಿದರು. ಆದರೆ ಆ ವಿಚಾರವನ್ನು ಮುಂದಿನ ವಿಚಾರಣೆ ವೇಳೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿತು.
ಡಿಸೆಂಬರ್ 8 ರಂದು ಲೋಕಸಭೆಯಿಂದ ತನ್ನನ್ನು ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಮೊಯಿತ್ರಾ ಅವರು ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ತನ್ನ ಮನವಿಯಲ್ಲಿ, ಪಶ್ಚಿಮ ಬಂಗಾಳದ ಕೃಷ್ಣನಗರ ಸಂಸದೀಯ ಕ್ಷೇತ್ರದ ಸಂಸದರಾದ ಮಹುವಾ ತನ್ನ ಉಚ್ಚಾಟನೆಯ ನಿರ್ಧಾರವನ್ನು “ಅನ್ಯಾಯ ಮತ್ತು ಅನಿಯಂತ್ರಿತ” ಎಂದು ಬಣ್ಣಿಸಿದ್ದಾರೆ.
ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆದೇಶದ ಮೇರೆಗೆ ಅವರ ಪ್ರತಿಸ್ಪರ್ಧಿಯಾದ ಅದಾನಿ ಸಮೂಹದ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ಲಂಚ ಪಡೆದ ಹಾಗೂ ಮೊಯಿತ್ರಾ ಅವರು ಹಿರಾನಂದಾನಿ ಜೊತೆಗೆ ತಮ್ಮ ಲೋಕಸಭಾ ಲಾಗ್-ಇನ್ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ನೈತಿಕ ಸಮಿತಿ ತನಿಖೆ ನಡೆಸಿದ ನಂತರ ಮಹುವಾ ಮೊಯಿತ್ರಾ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement