ಲೋಕಸಭೆ ಚುನಾವಣೆಗೆ ಮುನ್ನ ಬಂಡಿ ಸಂಜಯ, ಸುನಿಲ ಬನ್ಸಾಲ್, ಇತರರಿಗೆ ಪಕ್ಷದಲ್ಲಿ ಮಹತ್ವದ ಹೊಣೆಗಾರಿಕೆ ನೀಡಿದ ಬಿಜೆಪಿ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಕೇವಲ ತಿಂಗಳುಗಳು ಬಾಕಿ ಇರುವಾಗ, ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಪಕ್ಷದ ವಿವಿಧ ವಿಭಾಗಗಳಿಗೆ ಪ್ರಮುಖ ನೇಮಕಾತಿಗಳನ್ನು ಮಾಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹಲವು ಮುಖಂಡರನ್ನು ವಿವಿಧ ಇಲಾಖೆಗಳ ಉಸ್ತುವಾರಿಗಳನ್ನಾಗಿ ನೇಮಿಸಿದ್ದಾರೆ.
ಜೆಪಿ ನಡ್ಡಾ ಅವರು ಅನುಮೋದಿಸಿದ ನೇಮಕಾತಿಗಳ ಪಟ್ಟಿ ಇಲ್ಲಿದೆ:
ಸುನಿಲ ಬನ್ಸಾಲ್ -ಯುವ ಮೋರ್ಚಾದ ಉಸ್ತುವಾರಿ
ಬೈಜಯಂತ ಜಯ ಪಾಂಡಾ-ಮಹಿಳಾ ಮೋರ್ಚಾ ಉಸ್ತುವಾರಿ
ಬಂಡಿ ಸಂಜಯಕುಮಾರ- ಕಿಸಾನ್ ಮೋರ್ಚಾ ಉಸ್ತುವಾರಿ
ತರುಣ ಚುಗ್ -ಎಸ್‌ಸಿ ಮೋರ್ಚಾ ಉಸ್ತುವಾರಿ
ರಾಧಾ ಮೋಹನ ದಾಸ್ ಅಗರ್ವಾಲ್- ಎಸ್‌ಟಿ ಮೋರ್ಚಾ ಉಸ್ತುವಾರಿ
ವಿನೋದ ತಾವ್ಡೆ -ಒಬಿಸಿ ಮೋರ್ಚಾ ಉಸ್ತುವಾರಿ
ದುಷ್ಯಂತಕುಮಾರ ಗೌತಮ- ಅಲ್ಪಸಂಖ್ಯಾತ ಮೋರ್ಚಾ ಉಸ್ತುವಾರಿ
ತಕ್ಷಣದಿಂದ ಜಾರಿಗೆ ಬರುವಂತೆ ಈ ನೂತನ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಡಿಸೆಂಬರ್ 2023 ರ ಕೊನೆಯ ವಾರದಲ್ಲಿ, ಜೆಪಿ ನಡ್ಡಾ ಅವರು ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಎರಡು ದಿನಗಳ ಸಭೆಯನ್ನು ಕರೆದಿದ್ದರು ಮತ್ತು ಪಕ್ಷದ ಕಾರ್ಯಸೂಚಿ ಮತ್ತು ಮುಂಬರುವ ಕಾರ್ಯಕ್ರಮಗಳನ್ನು ಅಲ್ಲಿ ವಿವರಿಸಿದ್ದಾರೆ.
ಬಿಜೆಪಿಯು ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದು, ಪಕ್ಷದ ಮುಖ್ಯಸ್ಥರು ತಳಮಟ್ಟದಲ್ಲಿ ಸನ್ನದ್ಧತೆಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸ್ಥಾನವನ್ನು ಹೆಚ್ಚಿಸುವ ಗುರಿಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ.

ಪ್ರಮುಖ ಸುದ್ದಿ :-   ನಕ್ಸಲ್ ಕಮಾಂಡರ್ ಸೇರಿದಂತೆ 26 ಮಂದಿ ನಕ್ಸಲರನ್ನು ಎನ್‌ಕೌಂಟರಿನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement