ತನ್ನ ಮದುವೆ ವಾರ್ಷಿಕೋತ್ಸವದ ದಿನ ತನ್ನದೇ ಗ್ಯಾಂಗ್‌ನವರ ಗುಂಡಿನ ದಾಳಿಯಲ್ಲಿ ಹತ್ಯೆಯಾದ ಗ್ಯಾಂಗ್‌ಸ್ಟರ್ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

40 ವರ್ಷದ ಗ್ಯಾಂಗ್‌ಸ್ಟರ್ ಶರದ್ ಮೊಹೋಲ್‌‌ ಎಂಬಾತನನ್ನು ಶುಕ್ರವಾರ ಮಧ್ಯಾಹ್ನ ಪುಣೆಯ ಕೊತ್ರುಡ್‌ನಲ್ಲಿ ಆತನ ಗ್ಯಾಂಗ್‌ನ ಕೆಲವು ಸದಸ್ಯರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲೊಸದೆ ಸಾವಿಗೀಡಾಗಿದ್ದಾನೆ ಎಂದು ಅವರು ಹೇಳಿದ್ದಾರೆ. ಕುಖ್ಯಾತ ಗ್ಯಾಂಗ್‌ಸ್ಟರ್ ನನ್ನು ಮದುವೆಯ ವಾರ್ಷಿಕೋತ್ಸವದ ದಿನವೇ ಕೊಲ್ಲಲಾಯಿತು.
“ಮಧ್ಯಾಹ್ನ 1:30 ರ ಸುಮಾರಿಗೆ ಕೊತ್ರುಡ್‌ನ ಸುತಾರ್ದಾರದಲ್ಲಿ ಮೂರ್ನಾಲ್ಕು ದುಷ್ಕರ್ಮಿಗಳು ಗ್ಯಾಂಗ್‌ಸ್ಟರ್ ಮೊಹೋಲ್‌ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಆತನನ್ನು ನಂತರ ಆಸ್ಪತ್ರೆಗೆ ಸಾಗಿಸಲಾಯಿತು,” ಎಂದು ಅಧಿಕಾರಿ ಹೇಳಿದರು.
ಮೊಹೋಲ್ ಗ್ಯಾಂಗ್‌ನ ಸದಸ್ಯರಾಗಿರುವ ದಾಳಿಕೋರರನ್ನು ಹಿಡಿಯಲು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮೊಹೋಲ್ ಮೇಲೆ ಕೊಲೆ ಮತ್ತು ಡಕಾಯಿತಿ ಸೇರಿದಂತೆ ಹಲವಾರು ಪ್ರಕರಣಗಳಿವೆ. ಯರವಾಡ ಜೈಲಿನಲ್ಲಿ ಶಂಕಿತ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತ ಮೊಹಮ್ಮದ್ ಖತೀಲ್ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಆತನನ್ನು ಖುಲಾಸೆಗೊಳಿಸಲಾಗಿದೆ. ಜಾಗ ಮತ್ತು ಹಣದ ವಿವಾದವೇ ಗುಂಡಿನ ದಾಳಿಯ ಹಿಂದಿನ ಉದ್ದೇಶ ಎಂದು ಅವರು ಹೇಳಿದ್ದಾರೆ.
ಗ್ಯಾಂಗ್‌ಸ್ಟರ್ ಶರದ್ ಮೊಹೋಲ್ ಹತ್ಯೆಗೆ ಸಂಬಂಧಿಸಿದಂತೆ ಪುಣೆ ಸಿಟಿ ಪೊಲೀಸರ ಅಪರಾಧ ವಿಭಾಗದ ಘಟಕ ಎಂಟು ಜನರನ್ನು ಬಂಧಿಸಿದೆ. ಪುಣೆ-ಸತಾರಾ ರಸ್ತೆಯಲ್ಲಿ ವಾಹನದಿಂದ ಎಂಟು ಶಂಕಿತರನ್ನು ಬಂಧಿಸಲಾಗಿದೆ ಮತ್ತು ಅವರಿಂದ ಮೂರು ಪಿಸ್ತೂಲ್‌ಗಳು, ಮೂರು ಮ್ಯಾಗಜೀನ್‌ಗಳು ಮತ್ತು ಐದು ಸುತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   'ಪ್ರಿಯಾಂಕಾ ಗಾಂಧಿ ವಿರುದ್ಧ ಪಕ್ಷದಲ್ಲೇ ದೊಡ್ಡ ಪಿತೂರಿ...ಜೂನ್ 4ರ ನಂತರ ಕಾಂಗ್ರೆಸ್ ಅಣ್ಣ-ತಂಗಿ ಬಣಗಳಾಗಿ ವಿಭಜನೆ' : ಕಾಂಗ್ರೆಸ್‌ ಮಾಜಿ ನಾಯಕನ ಸ್ಫೋಟಕ ಹೇಳಿಕೆ

ಮೊಹೋಲ್‌ಗೆ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಮೂರು ಗುಂಡಿನ ಗಾಯಗಳಾಗಿವೆ, ಎರಡು ಗುಂಡುಗಳು ಆತನ ಬಲ ಭುಜಕ್ಕೆ ಬಡಿದರೆ ಒಂದು ಗುಂಡು ಎದೆಗೆ ಹೊಕ್ಕಿದೆ ಎಂದು ಅವರು ಹೇಳಿದರು.
ಗ್ಯಾಂಗ್ ವಾರ್ ಅನ್ನು ತಳ್ಳಿಹಾಕಿದ ಅಧಿಕಾರಿ, ದಾಳಿಯು ಮೊಹೋಲ್ ಗ್ಯಾಂಗ್‌ ಒಳಗಿನ ಘರ್ಷಣೆಯ ಪರಿಣಾಮವಾಗಿದೆ, ನಿರ್ದಿಷ್ಟವಾಗಿ ಭೂಮಿ ಮತ್ತು ಹಣಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement