ಕಾಸರಗೋಡು : ಎದೆಹಾಲು ಗಂಟಲಲ್ಲಿ ಸಿಲುಕಿ ಹಸುಳೆ ಸಾವು

ಕಾಸರಗೋಡು : ತಾಯಿಯ ಎದೆಹಾಲು ಕುಡಿಯುವ ವೇಳೆ ಹಾಲು ಗಂಟಲಲ್ಲಿ ಸಿಲುಕಿ ಮೂರು ತಿಂಗಳ ಮಗು ಮೃತಪಟ್ಟ ಘಟನೆ  ಕೇರಳ ಕಾಸರಗೋಡು ಜಿಲ್ಲೆಯ ಗಡಿಭಾಗವಾದ ಕುಂಬಳೆ ಸಮೀಪದ ಬಂಬ್ರಾಣ ಎಂಬಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಅಬ್ದುಲ್ ಅಜೀಜ್ – ಖದೀಜಾ ದಂಪತಿ ಪುತ್ರಿ ಸುಮಾರು ಮೂರು ತಿಂಗಳ ಮಗು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಮಲಗಿ ಎದೆಹಾಲು ಕುಡಿಯುತ್ತಿದ್ದ ಮಗು ಎಷ್ಟು ಹೊತ್ತಾದರೂ ಎಚ್ವರಗೊಳ್ಳದೆ ಇದ್ದಾಗ ಮನೆಯವರು ಗಾಬರಿಯಾಗಿದ್ದಾರೆ. ತಕ್ಷಣವೇ ಮಗುವನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವೇಳೆ ಗಂಟಲಲ್ಲಿ ಹಾಲು ಸಿಲುಕಿ ಉಸಿರುಗಟ್ಟಿ ಅಸು ನೀಗಿರುವುದು ಗೊತ್ತಾಗಿದೆ ಎನ್ನಲಾಗಿದೆ. ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

 

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ನಿಮ್ಮ ಕಾಮೆಂಟ್ ಬರೆಯಿರಿ

advertisement