ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಿ ಮುಖದ ಅಗತ್ಯವಿಲ್ಲ, ಮೈತ್ರಿಕೂಟದ ಹೆಸರಲ್ಲೇ ಮತ ಕೇಳಬೇಕು: ಶರದ್ ಪವಾರ್

ನವದೆಹಲಿ: ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬ್ಲಾಕ್‌ಗೆ ಪ್ರಧಾನಿ ಅಭ್ಯರ್ಥಿಯ ಅಗತ್ಯವಿಲ್ಲ, ಏಕೆಂದರೆ ನಾವು ಮೈತ್ರಿಕೂಟದ ಹೆಸರಿನಲ್ಲಿ ಹೆಸರಿನಲ್ಲಿ ಮತ ಕೇಳಬೇಕು ಎಂದು ಹಿರಿಯ ರಾಜಕಾರಣಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಶನಿವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪವಾರ್ ಅವರು, “ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವ ಅಗತ್ಯವಿಲ್ಲ ಎಂದು ನಾವು ಭಾವಿಸುತ್ತೇವೆ ಮತ್ತು ಇಂಡಿಯಾ ಮೈತ್ರಿಕೂಟದ ಹೆಸರಿನಲ್ಲಿ ನಾವು ಮತ ​​ಕೇಳಬೇಕು ಎಂದು ನಾವು ನಂಬುತ್ತೇವೆ. ನಾವು ದೇಶಕ್ಕೆ ಪರ್ಯಾಯವನ್ನು ನೀಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಮೊರಾರ್ಜಿ ದೇಸಾಯಿ ಅವರು ಜನತಾ ಪಕ್ಷದ ಛತ್ರಿಯಡಿಯಲ್ಲಿ ಪ್ರಧಾನಿಯಾದ 1977 ರ ರಾಜಕೀಯ ಉದಾಹರಣೆಯನ್ನು ಉಲ್ಲೇಖಿಸಿದ ಅವರು ಚುನಾವಣೆಯ ಮೊದಲು ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೆಸರಿಸಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಮೇಲೆ, ಪವಾರ್ ಅವರು, “ಕೆಲವು ನಾಯಕರು ಖರ್ಗೆಯವರನ್ನು ಇಂಡಿಯಾ ಮೈತ್ರಿಕೂಟದ ನಾಯಕ (ಅಧ್ಯಕ್ಷ) ಎಂದು ಸೂಚಿಸಿದರು, ಅನೇಕರು ಅದನ್ನು ಒಪ್ಪಿದರು … ಅಲ್ಲದೆ, ನಿತೀಶಕುಮಾರ ಅವರು ಒಪ್ಪಿಗೆ ಸೂಚಿಸಿದರು, ಆದರೆ, ಸಂಯೋಜಕನಾಗಲು ನಿತೀಶಕುಮಾರ ನಿರಾಕರಿಸಿದರು, ಸದ್ಯಕ್ಕೆ ಅದು ಅಗತ್ಯವಿಲ್ಲ ಎಂದು ಹೇಳಿದರು ಎಂದು ಮಾಹಿತಿ ನೀಡಿದರು.
ಇಂಡಿಯಾ ಮೈತ್ರಿಕೂಟದ ಪ್ರಮುಖ ಮುಖಗಳಲ್ಲಿ ಒಬ್ಬರಾದ ಪವಾರ್, “ಮೈತ್ರಿಕೂಟದೊಳಗೆ ಯಾವುದೇ ಅಸಮಾಧಾನವಿಲ್ಲ” ಎಂದು ಒತ್ತಿಹೇಳಿದರು, ಪ್ರಧಾನಿ ಮುಖ ಮತ್ತು ಸೀಟು ಹಂಚಿಕೆಯ ಚರ್ಚೆಗಳ ಬಗ್ಗೆ ಭಿನ್ನಾಭಿಪ್ರಾಯದ ಬಗ್ಗೆ ಕೆಲವು ವರದಿಗಳನ್ನು ನಿರಾಕರಿಸಿದರು.
ಸೀಟು ಹಂಚಿಕೆ ಕುರಿತು ಶೀಘ್ರವೇ ಚರ್ಚೆ ನಡೆಸಲಾಗುವುದು. ನಾವೆಲ್ಲರೂ ಸೀಟು ಹಂಚಿಕೆ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಪ್ರಮುಖ ಸುದ್ದಿ :-   ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

ರಾಮ ಮಂದಿರ ನಿರ್ಮಾಣ ಇನ್ನೂ ನಡೆಯುತ್ತಿರುವುದರಿಂದ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉದ್ಘಾಟನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ಅವರು (ಬಿಜೆಪಿ) ಕಾಂಗ್ರೆಸ್ ನಾಯಕರು ಉದ್ಘಾಟನೆಗೆ ಹೋಗದಿರಲು ತೀರ್ಮಾನಿಸಿದ ಬಗ್ಗೆ ಟೀಕಿಸುತ್ತಾರೆ, ಆದರೆ ದೇವಾಲಯ ಇನ್ನೂ ಪೂರ್ಣಗೊಂಡಿಲ್ಲ, ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉದ್ಘಾಟನೆ ಮಾಡಲಾಗುತ್ತಿದೆ; ರಾಮ ಮಂದಿರದ ವಿರುದ್ಧ ಯಾರೂ ಇಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement