ವಿಮಾನ ನಿಲ್ದಾಣದ ಟಾರ್‌ ಮೇಲೆ ಕುಳಿತು ಪ್ರಯಾಣಿಕರಿಂದ ಆಹಾರ ಸೇವನೆ : ಇಂಡಿಗೋಗೆ ₹ 1.20 ಕೋಟಿ, ಮುಂಬೈ ವಿಮಾನ ನಿಲ್ದಾಣಕ್ಕೆ ₹ 90 ಲಕ್ಷ ದಂಡ

ನವದೆಹಲಿ: ಮುಂಬೈ ವಿಮಾನ ನಿಲ್ದಾಣದ ಟಾರ್‌ಮ್ಯಾಕ್‌ನಲ್ಲಿ ಪ್ರಯಾಣಿಕರು ಆಹಾರ ಸೇವಿಸುವ ವೈರಲ್ ವೀಡಿಯೊಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಮತ್ತು ಮುಂಬೈ ವಿಮಾನ ನಿಲ್ದಾಣದ ಮೇಲೆ ಚಾಟಿ ಬೀಸಿದೆ ಮತ್ತು ಅವರಿಗೆ ಭಾರಿ ದಂಡವನ್ನು ವಿಧಿಸಿದೆ.
ಮುಂಬೈ ವಿಮಾನ ನಿಲ್ದಾಣಕ್ಕೆ ₹ 90 ಲಕ್ಷ ದಂಡ ವಿಧಿಸಲಾಗಿದ್ದರೆ, ಇಂಡಿಗೋಕ್ಕೆ ₹ 1.20 ಕೋಟಿ ದಂಡ ವಿಧಿಸಲಾಗಿದೆ. ಪ್ರತ್ಯೇಕವಾಗಿ, ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ಉಲ್ಲಂಘನೆಗಳಿಗಾಗಿ ದಂಡವನ್ನು ವಿಧಿಸಲಾಯಿತು.
ಇಂಡಿಗೋಗೆ ನಿಯಂತ್ರಕ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (BCAS)ಯಿಂದ ದಂಡ ವಿಧಿಸಲಾಗಿದೆ; ಡಿಜಿಸಿಎ (DGCA) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿಮುಂಬೈ ವಿಮಾನ ನಿಲ್ದಾಣದ ಮೇಲೆ ದಂಡವನ್ನು ಕ್ರಮವಾಗಿ ₹30 ಲಕ್ಷ ಮತ್ತು ₹60 ಲಕ್ಷ ವಿಧಿಸಿದೆ.

ಮಂಜಿನಿಂದಾಗಿ ವಿಳಂಬವಾದ ವಿಮಾನಗಳ ಹಾರಾಟ ಸುಗಮಗೊಳಿಸಲು ವಿಮಾನಯಾನ ಸಂಸ್ಥೆಗಳು ಹರಸಾಹಸ ಪಡುತ್ತಿರುವ ಈ ಸಮಯದಲ್ಲಿ, ಇಂಡಿಗೋ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲಿ ಧಾವಿಸಿ, ಟಾರ್ಮ್ಯಾಕ್ ಮೇಲೆ ಕುಳಿತು ಆಹಾರ ಸೇವಿಸಿದ ಘಟನೆಯನ್ನು ತೋರಿಸುವ ವೀಡಿಯೊ ಕಾಣಿಸಿಕೊಂಡಿದೆ. ಇದಕ್ಕೆ ಸಚಿವಾಲಯ ಇಂಡಿಗೋ ಮತ್ತು ಮುಂಬೈ ವಿಮಾನ ನಿಲ್ದಾಣಕ್ಕೆ ಶೋಕಾಸ್ ನೋಟಿಸ್ ನೀಡಿದೆ.
ಘಟನೆಯ ಕುರಿತು ಈಗಾಗಲೇ ಆಂತರಿಕ ತನಿಖೆಯನ್ನು ಆರಂಭಿಸಿರುವುದಾಗಿ ಇಂಡಿಗೋ ಈ ಹಿಂದೆ ಹೇಳಿತ್ತು. ಭಾರಿ ದಂಡ ವಿಧಿಸಿದ ನಂತರ ವಿಮಾನಯಾನ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. “ಈ ಸಮಸ್ಯೆಯನ್ನು ಪರಿಹರಿಸಲು ಇಂಡಿಗೋ ಈಗಾಗಲೇ ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಿದೆ ಮತ್ತು ಪ್ರೋಟೋಕಾಲ್ ಪ್ರಕಾರ ನೋಟಿಸ್‌ಗೆ ಪ್ರತಿಕ್ರಿಯಿಸುತ್ತದೆ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ತಾಯಿ, ಹೆಂಡತಿ, ಮೂವರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement