ಆನ್‌ಲೈನ್ ಗೇಮ್‌ ಪಾಸ್‌ವರ್ಡ್ ಕೊಟ್ಟಿಲ್ಲವೆಂದು 10ನೇ ತರಗತಿ ವಿದ್ಯಾರ್ಥಿಯನ್ನು ಕೊಂದು ಆತನ ದೇಹ ಸುಟ್ಟುಹಾಕಿದ ಸ್ನೇಹಿತರು…!

ಕೋಲ್ಕತ್ತಾ: ಆನ್‌ಲೈನ್ ಮೊಬೈಲ್ ಗೇಮ್‌ನ ಪಾಸ್‌ವರ್ಡ್ ಹಂಚಿಕೊಳ್ಳುವ ವಿವಾದವು ಹದಿಹರೆಯದ ಹುಡುಗನನ್ನು ಆತನ ನಾಲ್ವರು ಸ್ನೇಹಿತರೇ ಕೊಲೆ ಮಾಡುವುದಕ್ಕೆ ಕಾರಣವಾದ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 8 ರಿಂದ ನಾಪತ್ತೆಯಾಗಿದ್ದ 18 ವರ್ಷದ ಹುಡುಗ ಪಾಪೈ ದಾಸ್ ಶವ ಫರಕ್ಕಾದ ಫೀಡರ್ ಕಾಲುವೆಯ ನಿಶೀಂದ್ರ ಘಾಟ್ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿಯಾದ ಪಾಪೈ ದಾಸ್‌, ಮೊಬೈಲ್ ಆನ್‌ಲೈನ್ ಗೇಮ್‌ಗೆ ಪಾಸ್‌ವರ್ಡ್ ಹಂಚಿಕೊಳ್ಳುವ ಬಗ್ಗೆ ನಡೆದ ಜಗಳದ ನಂತರ ತನ್ನ ನಾಲ್ವರು “ಆಪ್ತ” ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ ಎಂದು ವರದಿಯಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವರು ಬ್ಯಾರೇಜ್‌ನ ಕ್ವಾರ್ಟರ್ಸ್ ಒಂದರಲ್ಲಿ ಆನ್‌ಲೈನ್ ಗೇಮ್‌ ಆಡುತ್ತಿದ್ದರು. ವಿದ್ಯಾರ್ಥಿ ಪಾಪೈ ದಾಸ ಜನವರಿ 8 ರ ಸಂಜೆ ಹೊರಗೆ ಹೋಗಿದ್ದ ಮತ್ತು ಹಿಂತಿರುಗಲಿಲ್ಲ. ಜನವರಿ 9 ರಂದು ಕುಟುಂಬವು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದೆ.
“ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, ಮೃತ ವಿದ್ಯಾರ್ಥಿಯು ತನ್ನ ಸ್ನೇಹಿತರ ಜೊತೆ ಆನ್‌ಲೈನ್ ಮೊಬೈಲ್ ಆಟದ ತನ್ನ ಪಾಸ್‌ವರ್ಡ್ ಹಂಚಿಕೊಳ್ಳಲು ನಿರಾಕರಿಸಿದ್ದಾನೆ, ಇದು ಜಗಳಕ್ಕೆ ಕಾರಣವಾಯಿತು ಮತ್ತು ಅಂತಿಮವಾಗಿ ಇದು ಅವನ ಕೊಲೆಗೆ ಕಾರಣವಾಯಿತು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ಆತನನ್ನು ಕೊಂದ ನಂತರ, ನಾಲ್ವರು “ಸ್ನೇಹಿತರು” ತಮ್ಮ ಬೈಕ್‌ಗಳಿಂದ ಗ್ಯಾಸೋಲಿನ್ ಬಳಸಿ ಆತನನ್ನು ಸುಟ್ಟುಹಾಕಲು ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. “ನಂತರ ಅವರು ಭಾಗಶಃ ಸುಟ್ಟ ದೇಹವನ್ನು ಫರಕ್ಕಾ ಫೀಡರ್‌ನ ನಿಶೀಂದ್ರ ಘಾಟ್‌ಗೆ ಎಸೆದು ತಮ್ಮ ಮನೆಗಳಿಗೆ ಓಡಿಹೋದರು. ಅವರ ಮೊಬೈಲ್ ಫೋನ್‌ಗಳ ಟವರ್ ಲೊಕೇಶನ್ ಮೂಲಕ ನಾವು ಅವರ ಅಪರಾಧವನ್ನು ಪತ್ತೆಹಚ್ಚಿದ್ದೇವೆ” ಎಂದು ಪೊಲೀಸ್‌ ಅಧಿಕಾರಿ ಹೇಳಿದರು.
ಮೃತನ ತಾಯಿಗೆ ಅವನ ದೇಹದ ಮೇಲಿನ ಹಚ್ಚೆಗಳಿಂದ ಆತನನ್ನು ಗುರುತಿಸಲು ಸಾಧ್ಯವಾಯಿತು. ಮೃತ ವಿದ್ಯಾರ್ಥಿ ಈ ಆನ್‌ಲೈನ್ ಗೇಮ್‌ಗೆ ತುಂಬಾ ವ್ಯಸನಿಯಾಗಿದ್ದು, ಈ ವರ್ಷ ತನ್ನ ಪ್ರಿ-ಬೋರ್ಡ್ ಪರೀಕ್ಷೆಯನ್ನು ಬಿಟ್ಟಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement