ನಂಜನಗೂಡು : ಕಪಿಲ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರುಪಾಲು

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಹೆಜ್ಜೆಗೆ ಬಳಿ ಕಪಿಲ ನದಿಯಲ್ಲಿ ಶುಕ್ರವಾರ ಸ್ನಾನಕ್ಕೆಂದು ಇಳಿದಿದ್ದ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲಾಗಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ತುಮಕೂರು ಮೂಲದ ಗವಿರಂಗ (19), ರಾಕೇಶ (19) ಹಾಗೂ ಅಪ್ಪು(16) ಎಂದು ಗುರುತಿಸಲಾಗಿದೆ. ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಐವರು ಗುರುವಾರ ತಡರಾತ್ರಿ ಇಲ್ಲಿನ ನಂಜುಂಡೇಶ್ವರನ ದರ್ಶನಕ್ಕೆ ಬಂದಿದ್ದರು. ಶುಕ್ರವಾರ ಬೆಳಿಗ್ಗೆ ಸ್ನಾನಕ್ಕೆಂದು ಐವರು ನದಿಗೆ ಇಳಿದಿದ್ದಾರೆ. ನೀರಿನ ಸೆಳೆವಿಗೆ ಸಿಕ್ಕಿ ಮುಳುಗಿದ್ದಾರೆ ಎನ್ನಲಾಗಿದೆ. ಅದರಲ್ಲಿ ಇಬ್ಬರು ಈಜಿ ಪಾರಾಗಿದ್ದಾರೆ.
ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಜತ್ತ ಬಳಿ ಕ್ರೂಸರ್ ವಾಹನ ಅಪಘಾತ : ಅಥಣಿಯ ಮೂವರು ಮಹಿಳೆಯರು ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement