ವೀಡಿಯೊ…| ಮುಖ್ಯಮಂತ್ರಿ ಜೀ, ಐಸಾ ಹೋತಾ ರೆಹತಾ ಹೈ…’: ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯನವರತ್ತ ನೋಡಿ ಪ್ರಧಾನಿ ಮೋದಿ ಹೀಗಂದಿದ್ಯಾಕೆ..?

ಬೆಂಗಳೂರು : ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬೋಯಿಂಗ್‌ನ ಹೊಸ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಯಾಂಪಸ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಮಾತನಾಡುವಾಗ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರತ್ತ ನೋಡಿಕೊಂಡು “ಮುಖ್ಯಮಂತ್ರಿ ಜಿ ಐಸಾ ಹೋತಾ ರೆಹತಾ ಹೈ (ಮುಖ್ಯಮಂತ್ರಿಯವರೇ, ಇದು ನಡೆಯುತ್ತಲೇ ಇರುತ್ತದೆ) ಎಂದು  ಚಟಾಕಿ ಹಾರಿಸಿದ ಪ್ರಸಂಗ ನಡೆಯಿತು
ದೇವನಹಳ್ಳಿ ಸಮೀಪದ ಬಿ. ಮಾರೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ, ಅಮೆರಿಕದ ಖ್ಯಾತ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ನ ಹೊಸ ಜಾಗತಿಕ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಕ್ಯಾಂಪಸ್ ಅನ್ನು ಜ. 19ರಂದು ಉದ್ಘಾಟಿಸಿದ ನಂತರ ಅವರು ಮಾತನಾಡಿದ ಅವರು ಬೆಂಗಳೂರಿನ ಇಂದಿನ ಯುವಪೀಳಿಗೆಯ ಆಕಾಂಕ್ಷೆಗಳನ್ನು ನಾವೀನ್ಯತೆಯೊಂದಿಗೆ ಸಂಪರ್ಕಿಸುತ್ತದೆ. ಹಾಗೂ ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಬೇಡಿಕೆಯೊಂದಿಗೆ ಸಂಪರ್ಕಿಸುತ್ತದೆ ಎಂದು ಬಣ್ಣಿಸಿದರು.

ಪ್ರಧಾನಿ ನರೇಂದ್ರ ಮೋದಿ ಭಾಷಣ ಮುಂದುವರಿಸಿ ಮಾತನಾಡುತ್ತಿದ್ದಾಗ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಜನರು, ಮೋದಿ… ಮೋದಿ ಎಂದು ಜೋರಾಗಿ ಕೂಗುತ್ತಿದ್ದರು. ಪ್ರಧಾನಿ ಭಾಷಣದುದ್ದಕ್ಕೂ ಮೋದಿ… ಮೋದಿ ಎಂದು ಕೂಗುವುದು ನಡೆದೇ ಇತ್ತು. ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿ ಒಂದು ಹಂತದಲ್ಲಿ ಭಾಷಣ ನಿಲ್ಲಿಸಿದರು. ವೇದಿಕೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯನವರತ್ತ ತಿರುಗಿ, “ಮುಖ್ಯಮಂತ್ರಿ ಜೀ… ಐಸಾ ಹೋತಾ ರೆಹತಾ ಹೈ…” (ಮುಖ್ಯಮಂತ್ರಿಯವರೇ ಹೀಗೆ ನಡೆಯುತ್ತಲೇ ಇರುತ್ತದೆ) ಎಂದು ಮಾರ್ಮಿಕವಾಗಿ ಹೇಳಿದರು. ಅದಕ್ಕೆ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮುಗುಳ್ನಕ್ಕರು.  ಈ ಪ್ರಸಂಗ ನಗುವಿನ ಅಲೆಗೆ ಕಾರಣವಾಯಿತು.

ಮುಂದುವರಿದು ಮಾತನಾಡಿದ ಅವರು, ದ್ರದಲ್ಲಿ ಈಗ ಸ್ಥಿರ ಸರ್ಕಾರ ಇದೆ. ಬೋಯಿಂಗ್ ಹಾಗೂ ಬೇರೆ ಅಂತಾರಾಷ್ಟ್ರೀಯ ವೈಮಾನಿಕ ಕಂಪನಿಗಳಿಗೂ ಭಾರತಕ್ಕೆ ಬರಲು ಇದೇ ಸರಿಯಾದ ಸಮಯ ಎಂದು ಮೋದಿ ಹೇಳಿದರು.  ನಾವು ಸಂಪರ್ಕ ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದೇವೆ, ಭಾರತವನ್ನು ಉತ್ತಮ ಸಂಪರ್ಕಿತ ಮಾರುಕಟ್ಟೆಯನ್ನಾಗಿ ಮಾಡಿದ್ದೇವೆ” ಎಂದು ಹೇಳಿದರು. ಈ ಹಿಂದೆ ಭಾರತವು ತನ್ನ ಸಾಮರ್ಥ್ಯವನ್ನು ಕಾರ್ಯಕ್ಷಮತೆಯಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು ನಿವಾಸದ ಮೇಲೆ ಐಟಿ ದಾಳಿ

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement