ಕಂಪನಿಯ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ವೇದಿಕೆ ಮೇಲೆಯೇ ಅವಘಡ: ಸಂಸ್ಥೆಯ ‘ಸಿಇಒ’ ಸಾವು

ಹೈದರಾಬಾದ್ : ಕಂಪನಿಯ ರಜತ ಮಹೋತ್ಸವದ ಸಂದರ್ಭದಲ್ಲಿ ಸಮಾರಂಭದ ವೇಳೆ ವೇದಿಕೆಯಲ್ಲಿ ನಡೆದ ದುರಂತದಲ್ಲಿಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಸಿಇಓ ಹಾಗೂ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪನಿಯ ಸಂಸ್ಥಾಪಕ ಮೃತಪಟ್ಟಿದ್ದಾರೆ. ಮತ್ತೊಬ್ಬ ಅಧಿಕಾರಿ ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಅಮೆರಿಕದ ಇಲಿನೊಯಿಸ್ ಮೂಲದ ಸಿಇಓ ಸಂಜಯ ಶಾ (56) ಮೃತಪಟ್ಟಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಕಂಪನಿಯ ಅಧ್ಯಕ್ಷ ವಿಶ್ವನಾಥ ರಾಜು ಎಂಬವರು ಗಂಭೀರ ಸ್ಥಿತಿಯಲ್ಲಿದ್ದಾರೆ.
ವಿಸ್ಟೆಕ್ ಏಷ್ಯಾ-ಫೆಸಿಫಿಕ್ ಪ್ರೈವೇಟ್ ಲಿಮಿಟೆಡ್ ನ ರಜತ ಮಹೋತ್ಸವದ ಸಮಾರಂಭವನ್ನು ಹೈದರಾಬಾದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಆಯೋಜಿಸಲಾಗಿತ್ತು. ಗುರುವಾರ ಸಂಜೆ ನಡೆದ ಆಚರಣೆಯ ವೇಳೆ ಈ ದುರಂತ ಸಂಭವಿಸಿದೆ.

ಪೊಲೀಸರ ಪ್ರಕಾರ, ಕಂಪನಿಯು ಉದ್ಯಮದಲ್ಲಿ ತನ್ನ ಯಶಸ್ವಿ 25 ವರ್ಷಗಳನ್ನು ಪೂರೈಸಿದ ಅಂಗವಾಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎರಡು ದಿನಗಳ ಕಾರ್ಯಕ್ರಮವನ್ನು ನಿಗದಿಪಡಿಸಿತ್ತು. ಗುರುವಾರ ಸಂಜೆ, 7:40 ರ ಸುಮಾರಿಗೆ ಸಮಾರಂಭಕ್ಕೆ ಚಾಲನೆ ನೀಡಲು ಶಾ ಹಾಗೂ ವಿಶ್ವನಾಥ ರಾಜು ಅವರು ಕಬ್ಬಿಣದ ಗೂಡಿನಿಂದ ರೋಪ್‌ ಬಳಸಿ ಕೆಳಗಿಳಿದು ವೇದಿಕೆಗೆ ಬರಲು ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಸಂಗೀತದ ಹಿಮ್ಮೇಳದಲ್ಲಿ ಶಾ ಹಾಗೂ ರಾಜು ಸಿಬ್ಬಂದಿಗೆ ಕೈಬೀಸುತ್ತಾ ಇಳಿಯುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಈ ಕಬ್ಬಿಣದ ಗೂಡಿಗೆ ಜೋಡಿಸಿದ್ದ ಎರಡು ವೈರ್ ಗಳ ಪೈಕಿ ಒಂದು ವೈರ್‌ ತುಂಡಾಯಿತು. ಇಬ್ಬರೂ 15 ಅಡಿ ಕೆಳಕ್ಕೆ ಕಾಂಕ್ರಿಟ್ ವೇದಿಕೆ ಮೇಲೆ ಬಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಕಂಪನಿಯ ಸಿಇಒ ಸಂಜಯ ಶಾ ಮೃತಪಟ್ಟಿದ್ದಾರೆ.

ಕಂಪನಿಯ ಇನ್ನೊಬ್ಬ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್‌ಮೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜಾನಕಿರಾಮ ಅವರ ದೂರಿನ ಆಧಾರದ ಮೇಲೆ ಅಬ್ದುಲ್ಲಾಪುರಮೆಟ್ ಪೊಲೀಸರು ರಾಮೋಜಿ ಫಿಲ್ಮ್ ಸಿಟಿಯ ಇವೆಂಟ್ ಮ್ಯಾನೇಜ್‌ಮೆಂಟ್ ಅಥಾರಿಟಿ ಉಷಾ ಕಿರಣ ಈವೆಂಟ್ಸ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

ಸಂಜಯ ಶಾ ಯಾರು?
ಸಂಜಯ ಶಾ ಅವರು ಆದಾಯ ನಿರ್ವಹಣಾ ಪರಿಹಾರಗಳಲ್ಲಿ ಪರಿಣತಿ ಹೊಂದಿರುವ ವಿಸ್ಟೆಕ್ಸ್‌ನ ಸಂಸ್ಥಾಪಕ, ಸಿಇಒ (CEO) ಮತ್ತು ಮುಖ್ಯ ಆರ್ಕಿಟೆಕ್‌. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಶಾ ಅವರು 1989 ರಲ್ಲಿ ಲೇಹಿ ಯುನಿವರ್ಸಿಟಿಯ ಕಾಲೇಜ್ ಆಫ್ ಬ್ಯುಸಿನೆಸ್‌ನಲ್ಲಿ ತಮ್ಮ ಮಾಸ್ಟರ್ಸ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಅನ್ನು ಪೂರ್ಣಗೊಳಿಸಿದರು.
ವಿಸ್ಟೆಕ್ಸ್ ಅನ್ನು 1999 ರಲ್ಲಿ ಸ್ಥಾಪಿಸಲಾಯಿತು ಮತ್ತು ಪ್ರಸ್ತುತ ಪ್ರಪಂಚದಾದ್ಯಂತ 20 ಕಚೇರಿಗಳನ್ನು ಮತ್ತು 2,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಂಪನಿಯ ಕೆಲವು ಕ್ಲೈಂಟ್‌ಗಳಲ್ಲಿ ಹೈಂಜ್, ಎನ್ವಿಡಿಯಾ, ವರ್ಲ್‌ಪೂಲ್ ಮತ್ತು ಸೋನಿ ಸೇರಿವೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement