ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂಭ್ರಮದ ವೇಳೆ ‘ಅಲ್ಲಾಹು ಅಕ್ಬರ್’ ಕೂಗಿದ ಮಹಿಳೆ

ಶಿವಮೊಗ್ಗ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ವೇಳೆ ಅಲ್ಲಿದ್ದವರು ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗಿ ಸಂಬರಮಿಸುತ್ತಿದ್ದಾಗ ಅಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬರು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಘಟನೆ ನಡೆದ ವರದಿಯಾಗಿದೆ.
ಇದು ಕೆಲಕಾಲ ಸ್ಥಳದಲ್ಲಿ ಗೊಂದಲಕ್ಕೆ ಕಾರಣವಾಯಿತು. ಘೋಷಣೆ ಕೂಗಿದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ಕೋಟೆ ಪೊಲೀಸ್ ಠಾಣೆಗೆ ಕರೆದೊಯ್ದರು.
ಬಿಜೆಪಿ ಸಂಭ್ರಮಾಚರಣೆ ವೇಳೆ ಶಿವಪ್ಪ ನಾಯಕ ವೃತ್ತದ ಮೂಲಕ ಸ್ಕೂಟರ್ ನಲ್ಲಿ ಮಗುವಿನೊಂದಿಗೆ ಹೊರಟಿದ್ದ ಮಹಿಳೆ ಸಂಭ್ರಮಾಚರಣೆ ಕಾರ್ಯಕ್ರಮ ನೋಡುತ್ತಾ ನಿಂತಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸಂಚಾರ ದಟ್ಟಣೆ ತಪ್ಪಿಸಲು ಅವರನ್ನು ಅಲ್ಲಿಂದ ಕಳಿಸಲು ಮುಂದಾದರು. ಆಗ ಮಹಿಳೆ ಇದಕ್ಕೆ ಪ್ರತಿಭಟಿಸಿದರು.

ಈ ವೇಳೆ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದವರು ‘ಜೈ ಶ್ರೀರಾಮ’ ಎಂದು ಘೋಷಣೆ ಕೂಗುತ್ತಿದ್ದರು. ಆಗ ಮಹಿಳೆಯೂ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದರು. ಇದರಿಂದ ಪೊಲೀಸರೇ ತಬ್ಬಿಬ್ಬಾದರು.
ಪೊಲೀಸರು ಅಲ್ಲಿಂದ ಕಳುಹಿಸಲು ಮುಂದಾದರೂ ಮಹಿಳೆ ಘೋಷಣೆ ಕೂಗುವುದು ಮುಂದುವರೆಸಿದರು. ಆಗ ಗುಂಪು ಕೂಡ ‘ಜೈ ಶ್ರೀರಾಮ’ ಘೋಷಣೆ ಕೂಗುತ್ತ ಆಕೆಯ ಹಿಂದೆ ತೆರಳಿತು. ಇದರಿಂದ ಕೆಲಕಾಲ ಗೊಂದಲವೇರ್ಪಟ್ಟಿತು. ಕೊನೆಗೆ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಠಾಣೆಗೆ ಕರೆದೊಯ್ದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ಈ ಬಗ್ಗೆ ಮಾತನಾಡಿದ ಶಿವಮೊಗ್ಗ (Shivamogga) ಎಸ್​ಪಿ ಮಿಥುನಕುಮಾರ ಅವರು, ಪೊಲೀಸರಿಂದ ಮಹಿಳೆಯ ಹಿನ್ನೆಲೆ, ಪೂರ್ವಾಪರ ಬಗ್ಗೆ ಪರಿಶೀಲನೆ ನಡೆಸಿದಾಗ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಮಾನಸಿಕ ರೋಗಕ್ಕೆ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಹಿಳೆ ತಂದೆಯಿದ ಪೊಲೀಸರಿಗೆ ದಾಖಲೆಗಳ ಸಲ್ಲಿಕೆ ಮಾಡಲಾಗಿದ್ದು, 2018 ರಿಂದ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement