ಕೋಲ್ಕತ್ತಾಗೆ ತೆರಳುತ್ತಿದ್ದಾಗ ಕಾರು ಅಪಘಾತದಲ್ಲಿ ಗಾಯಗೊಂಡ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಕಾರು ಬುಧವಾರ ಅಪಘಾತಕ್ಕೀಡಾಗಿದೆ. ಪೂರ್ವ ಬುರ್ದ್ವಾನ್‌ನಲ್ಲಿ ನಡೆದ ಅಧಿಕೃತ ಕಾರ್ಯಕ್ರಮ ಮುಗಿಸಿ ಅವರು ಕೋಲ್ಕತ್ತಾಗೆ ಹಿಂತಿರುಗುತ್ತಿದ್ದರು. ಅಪಘಾತದಲ್ಲಿ ಅವರ ತಲೆಗೆ ಸಣ್ಣಪುಟ್ಟ ಗಾಯವಾಗಿದೆ.
ವರದಿಗಳ ಪ್ರಕಾರ, ಮತ್ತೊಂದು ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಮಮತಾ ಬ್ಯಾನರ್ಜಿ ಕಾರು ಚಾಲಕ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದ್ದಾನೆ. ಹಠಾತ್ ಬ್ರೇಕಿಂಗ್ ಕಾರಣ ಅವರು ಮುಗ್ಗುರಿಸಿ ತಲೆ ಕಾರಿಗೆ ಬಡಿದ ಕಾಋಣ ಮಮತಾ ಅವರಿಗೆ ಗಾಯವಾಯಿತು ಎಂದು ಹೇಳಲಾಗಿದೆ.
ಅಧಿಕಾರಿಗಳ ಪ್ರಕಾರ, ಕೆಟ್ಟ ಹವಾಮಾನದ ಕಾರಣ ಬ್ಯಾನರ್ಜಿ ಅವರು ಹೆಲಿಕಾಪ್ಟರ್ ಮೂಲಕ ಕೋಲ್ಕತ್ತಾಗೆ ಹಿಂತಿರುಗಲಿಲ್ಲ. ಆಡಳಿತಾತ್ಮಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಹೆಲಿಕಾಪ್ಟರ್ ಮೂಲಕ ಆಕೆ ಪೂರ್ವ ಬುರ್ದ್ವಾನ್‌ಗೆ ತೆರಳಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

“ಸ್ಥಳದಿಂದ ಹೊರಬಂದ ಸ್ವಲ್ಪ ಸಮಯದ ನಂತರ ಒಂದು ಕಾರು ಬೆಂಗಾವಲು ಪಡೆ ಮುಂದೆ ಅಚಾನಕ್‌ ಬಂದಿತು ಮತ್ತು ಅವರ ಚಾಲಕನು ಥಟ್ಟನೆ ಬ್ರೇಕ್ ಹಾಕಬೇಕಾಯಿತು. ಮಮತಾ ಅವರು ಯಾವಾಗಲೂ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.
“ಬ್ರೇಕ್‌ ಹಾಕಿದ್ದರಿಂದ ಮುಂದಕ್ಕೆ ಎಸೆಯಲ್ಪಟ್ಟರು ಮತ್ತು ಅವರ ತಲೆಯು ವಿಂಡ್ ಷೀಲ್ಡಿಗೆ ಅಪ್ಪಳಿಸಿತು” ಎಂದು ಅವರು ಹೇಳಿದರು.
ಗಾಯ ಗಂಭೀರವಾಗಿರಲಿಲ್ಲ. ಮಮತಾ ಬ್ಯಾನರ್ಜಿ ವೈದ್ಯಕೀಯ ಚಿಕಿತ್ಸೆಗಾಗಿ ನಿಲ್ಲದೆ ಕೋಲ್ಕತ್ತಾಗೆ ತೆರಳಿದರು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಸಿಗೆ ಶಾಕ್‌ : ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement