ಶೃಂಗೇರಿ: ಶೃಂಗೇರಿ ಶಾರದಾಪೀಠಕ್ಕೆ ನೂತನ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಜನವರಿ 25 ರಿಂದ ಜಾರಿಗೆ ಬರುವಂತೆ ಪಿ.ಎ ಮುರಳಿ ಅವರನ್ನು ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತಾಧಿಕಾರಿಯನ್ನಾಗಿ ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳು ನೇಮಕ ಮಾಡಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಮಠದ ಈ ಹಿಂದಿನ ಗುರು ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಅವರ ನಿರ್ದೇಶನದಂತೆ 1989ರಲ್ಲಿ ವಿ.ಆರ್. ಗೌರೀಶಂಕರ ಅವರನ್ನು ಶೃಂಗೇರಿ ಮಠದ ಆಡಳಿತಾಧಿಕಾರಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿತ್ತು. ಅವರು 35 ವರ್ಷಗಳ ಕಾಲ ಮಠದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
1989ರಲ್ಲಿ ಈ ಹಿಂದಿನ ಜಗದ್ಗುರುಗಳಾಗಿದ್ದ ಅಭಿನವ ವಿದ್ಯಾತೀರ್ಥ ಸ್ವಾಮಿಗಳು ನೇಮಕ ಮಾಡಿದ್ದ ಗೌರಿಶಂಕರ ಅವರು ಮಠದ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
35 ವರ್ಷಗಳ ಕಾಲ ಶ್ರೀಮಠದ ಆಡಳಿತಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅವರು ನೂತನ ಆಡಳಿತಾಧಿಕಾರಿ ಮತ್ತು ಸಿಇಒ ಪಿ.ಎ ಮುರಳಿ ಅವರಿಗೆ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಗೌರಿಶಂಕರ ಅವರಿಗೆ ಫೆಬ್ರವರಿ 12ರಂದು ಮಠದಲ್ಲಿ ಅಭಿನಂದನಾ ಸಮಾರಂಭವನ್ನು ಸಹ ಆಯೋಜಿಸಲಾಗಿದೆ. ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮಿಗಳು ಸನ್ಯಾಸ ಸ್ವೀಕರಿಸಿ 9 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ