ಉತ್ತರಾಖಂಡ ಮದರಸಾಗಳಲ್ಲಿ ಶ್ರೀರಾಮನ ಕುರಿತು ಅಧ್ಯಯನಕ್ಕೆ ಅವಕಾಶ : ವಕ್ಫ್ ಬೋರ್ಡ್ ಅಧ್ಯಕ್ಷ

ಡೆಹ್ರಾಡೂನ್: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ದೇಶಾದ್ಯಂತ ರಾಮನ ಕುರಿತ ವಿಚಾರಗಳು ವ್ಯಾಪಕ ಸುದ್ದಿಯಾಗುತ್ತಿದೆ. ಈ ಮಧ್ಯೆ ಉತ್ತರಾಖಂಡದಲ್ಲಿ ಮದರಸಾಗಳಲ್ಲಿ ಭಗವಾನ್‌ ರಾಮನ ಕುರಿತು ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಉತ್ತರಾಖಂಡದ ಮದರಸಾಗಳಲ್ಲಿ (Uttarakhand Madrasa) ಶ್ರೀರಾಮನ ಕುರಿತು ಅಧ್ಯಯನ ನಡೆಯಬೇಕು ಎಂದು ಹೊಸ ಪಠ್ಯ ಅಳವಡಿಸಿಕೊಳ್ಳಲಾಗುತ್ತಿದೆ.
ಈ ಕುರಿತು ಉತ್ತರಾಖಂಡ ವಕ್ಫ್‌ ಬೋರ್ಡ್‌ ಚೇರ್ಮನ್‌ ಆಗಿರುವ ಶಾದಾಬ್‌ ಶಾಮ್ಸ್‌ ಅವರು ಮಾಹಿತಿ ನೀಡಿದ್ದು, “ಮದರಸಾ ಆಧುನೀಕರಣ ಯೋಜನೆಯ ಭಾಗವಾಗಿ ಉತ್ತರಾಖಂಡದ ಮದರಸಾಗಳಲ್ಲೂ ಶ್ರೀರಾಮನ ಕುರಿತ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಮಾರ್ಚ್‌ನಿಂದ ಮದರಸಾ ವಿದ್ಯಾರ್ಥಿಗಳು ಶ್ರೀರಾಮನ ಕುರಿತು ಕೂಡ ಅಧ್ಯಯನ ನಡೆಸಲಿದ್ದಾರೆ” ಎಂದು ತಿಳಿಸಿದ್ದಾರೆ.

ಶಾದಾಬ್‌ ಶಾಮ್ಸ್‌ ಅವರು ಬಿಜೆಪಿ ಮುಖಂಡರೂ ಆಗಿದ್ದು, ಅವರು ಮದರಸಾಗಳಲ್ಲಿ ಬೋಧನೆ ಮಾಡುವ ಮೌಲ್ವಿಗಳನ್ನೂ ಒಪ್ಪಿಸಿದ್ದಾರೆ. ಧರ್ಮ, ಜಾತಿಯ ಸಂಕೋಲೆಗಳು ಇಲ್ಲದೆಯೇ ಶ್ರೀರಾಮನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬ ಮನೋಭಾವದಿಂದ ಶಾದಾಬ್‌ ಶಾಮ್ಸ್‌ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಉತ್ತರಾಖಂಡದ ವಕ್ಫ್‌ ಬೋರ್ಡ್‌ ವ್ಯಾಪ್ತಿಗೆ ಸುಮಾರು 117 ಮದರಸಾಗಳು ಬರುತ್ತವೆ. ಡೆಹ್ರಾಡೂನ್, ಹರಿದ್ವಾರ, ಉಧಾಮ್‌ ಸಿಂಗ್‌ ನಗರ ಹಾಗೂ ನೈನಿತಾಲ್‌ ಜಿಲ್ಲೆ ಸೇರಿ ಹಲವೆಡೆ ವಕ್ಫ್‌ ಬೋರ್ಡ್‌ ವ್ಯಾಪ್ತಿಯ ಮದರಸಾಗಳಿವೆ. ಹೊಸ ಪಠ್ಯಕ್ರಮವನ್ನು ಡೆಹ್ರಾಡೂನ್, ಹರಿದ್ವಾರ, ಉಧಮ್ ಸಿಂಗ್ ನಗರ ಮತ್ತು ನೈನಿತಾಲ್ ಜಿಲ್ಲೆಗಳ ಮದರಸಾಗಳಲ್ಲಿ ಪರಿಚಯಿಸಲಾಗುವುದು ಎಂದು ಅವರು ಹೇಳಿದ್ದಾರೆ.
“ನಾವು ಅರಬ್ಬರು, ಮಂಗೋಲರು ಅಥವಾ ಆಫ್ಘನ್ನರಲ್ಲ. ನಾವು ಹಿಂದಿ (ಹಿಂದ್) ಮುಸ್ಲಿಮರು. ನಾವು ನಮ್ಮ ಮಕ್ಕಳಿಗೆ ಉನ್ನತ ನೈತಿಕ ಮೌಲ್ಯಗಳನ್ನು ಬಿತ್ತುವ ನಮ್ಮದೇ ಆದ ಸಾಂಸ್ಕೃತಿಕ ಐಕಾನ್‌ಗಳ ಬಗ್ಗೆ ಕಲಿಸುತ್ತೇವೆ” ಎಂದು ಅವರು ಹೇಳಿದರು. ಮದರಸಾಗಳಲ್ಲೂ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಪರಿಚಯಿಸಲಾಗುವುದು ಎಂದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್ಸಿಗೆ ಶಾಕ್‌ : ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement