ಕಾಶಿ ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ ಕನ್ನಡ ಶಿಲಾಶಾಸನದ ಪೋಟೋ ಬಹಿರಂಗ

ಲಕ್ನೋ: ಉತ್ತರ ಪ್ರದೇಶದ ಕಾಶಿಯ ಜ್ಞಾನವಾಪಿ ಮಸೀದಿ ಇರುವ ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸಮೀಕ್ಷೆಯಿಂದ ಬಹಿರಂಗಗೊಂಡ ಬೆನ್ನಲ್ಲೇ ಅಲ್ಲಿ ಕನ್ನಡದ ಶಿಲಾಶಾಸನ ಕೂಡ ಪತ್ತೆಯಾಗಿದೆ ಎಂಬ ಮಾಹಿತಿಯೂ ಬಹಿರಂಗವಾಗಿತ್ತು. ಸಮೀಕ್ಷೆ ವೇಳೆ ಕಂಡುಬಂದ ಕನ್ನಡ ಶಾಸನದ ಚಿತ್ರ ಶನಿವಾರ (ಜ 27 ) ಬಿಡುಗಡೆಯಾಗಿದೆ.
ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆ ವೇಳೆ ದೇವ-ದೇವತೆಗಳ ಮೂರ್ತಿಗಳು, ಹಿಂದೂ ದೇವಾ ಲಯಕ್ಕೆ ಸಂಬಂಧಿಸಿದ ಹಲವು ವಸ್ತುಗಳು, ಕುರುಹುಗಳು ಪತ್ತೆಯಾಗುವುದರ ಜತೆಗೆ 34 ಶಿಲಾಶಾಸನಗಳು ಕೂಡ ಸಿಕ್ಕಿದ್ದವು ಎಂಬುದು ಬಹಿಂಗವಾಗಿತ್ತು. 2 ದಿನಗಳ ಹಿಂದಷ್ಟೇ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ ಜೈನ್‌ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಈ ಪೈಕಿ ಕನ್ನಡ, ತೆಲುಗು, ಗ್ರಂಥ, ದೇವನಾಗರಿ ಭಾಷೆಯ ಶಾಸನಗಳು ದೊರೆತಿವೆ ಎಂದು ಅವರು ಹೇಳಿದ್ದರು.

ಶನಿವಾರ ಈ ಕನ್ನಡ ಶಾಸನದ ಫೋಟೋ ಬಿಡುಗಡೆಯಾಗಿದ್ದು, ಅದರಲ್ಲಿ “ದೊಡರಸಯ್ಯನ ನರಸಂಣನಭಿಂನಹ’ ಎಂದು ಕೆತ್ತಿರುವುದು ಕಾಣಿಸುತ್ತಿದೆ. ಬಹುಶಃ ಇದು ದೇವಾಲಯಕ್ಕಾಗಿ ಕೊಡುಗೆ ನೀಡಿದ್ದವರ ಇಬ್ಬರ ವೈಯಕ್ತಿಕ ಹೆಸರಾಗಿದ್ದರಿಬಹುದು. ಅಂದಾಜಿನ ಪ್ರಕಾರ 16ನೇ ಶತಮಾನದಲ್ಲಿ ಇದನ್ನು ಕೆತ್ತಲಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಮಸೀದಿಯಲ್ಲಿ ಕನ್ನಡದ ಬರಹವಿರುವ ಫೋಟೋ ಕೂಡ ಬಿಡುಗಡೆ ಮಾಡಲಾಗಿದೆ. ಕನ್ನಡ ಭಾಷೆಯಲ್ಲಿರುವ ಶಾಸನದ ಫೋಟೋ ಬಹಿರಂಗವಾದ ಬೆನ್ನಲೇ ಈ ಶಾಸನದ ಕುರಿತು ಮತ್ತಷ್ಟು ಸಂಶೋಧನೆ ಆಗಲಿ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.
ಕಲ್ಲಿನ ಮೇಲೆ ರಾಮ, ಶ್ರೀ, ಸ್ವಸ್ತಿಕ್ ಬರಹವೂ ಪತ್ತೆಯಾಗಿದೆ. ಜನಾರ್ದನ, ರುದ್ರ ಹಾಗೂ ಉಮೇಶ್ವರನ ಹೆಸರನ್ನೂ ಎಎಸ್‌ಐ ಪತ್ತೆ ಮಾಡಿದೆ. ಮಸೀದಿಯಲ್ಲಿ ಸಾಕಷ್ಟು ಹಿಂದೂ ದೇವತೆಗಳ ಮೂರ್ತಿ ಪತ್ತೆಯಾಗಿದೆ. ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಎಎಸ್‌ಐ ವೈಜ್ಞಾನಿಕ ಸರ್ವೆ ನಡೆಸಿತ್ತು.
1

ಪ್ರಮುಖ ಸುದ್ದಿ :-   ಸಮ ಸಮಾಜ ನಿರ್ಮಾಣ, ಅಂತರಂಗ-ಬಹಿರಂಗ ಶುದ್ಧಿಯಿಂದ ಜಗಜ್ಯೋತಿಯಾದ ಕಾಯಕಯೋಗಿ ವಿಶ್ವಗುರು ಬಸವಣ್ಣ...

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement