ಕ್ಷಮಿಸಿ..ಮಮ್ಮಿ, ಪಪ್ಪಾ.. ಜೆಇಇ ಬರೆಯಲು ನನ್ನಿಂದ ಸಾಧ್ಯವಿಲ್ಲ.. ಇದು ನನ್ನ ಕೊನೆಯ ಆಯ್ಕೆ: ಡೆತ್‌ ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಕೋಟಾ(ರಾಜಸ್ಥಾನ) : ರಾಜಸ್ಥಾನದ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟಾದ ಬೋರ್ಖೇಡಾ ಪ್ರದೇಶದ 18 ವರ್ಷದ ನಿಹಾರಿಕಾ ಸಿಂಗ್ ಅವರು ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದಳು ಮತ್ತು ಆಕೆ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬದವರು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ. ಆಕೆಯ ದುರಂತ ನಿರ್ಧಾರಕ್ಕೆ ಕಾರಣವಾದ ಸಂದರ್ಭಗಳನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮರಣೋತ್ತರ ಪರೀಕ್ಷೆ ಸೇರಿದಂತೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ನನ್ನಿಂದ ಜೆಇಇ ಪಾಸ್‌ ಮಾಡಲು ಸಾಧ್ಯವಿಲ್ಲ, ನಾನು ಸೋತಿದ್ದೇನೆ ಎಂದು ಪೋಷಕರಿಗೆ ಪತ್ರ ಬರೆದಿಟ್ಟು ಕೋಟಾದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಹಾರಿಕಾ ಮೃತದೇಹದೊಂದಿಗೆ ಆತ್ಮಹತ್ಯೆ ಪತ್ರವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಾನು ಸೋತಿರುವವಳು. ನಾನೊಬ್ಬ ಕೆಟ್ಟ ಮಗಳು, ಮಮ್ಮಿ, ಪಪ್ಪಾ ನನ್ನನ್ನು ಕ್ಷಮಿಸಿ, ಇದೇ ನನ್ನ ಕೊನೆಯ ಆಯ್ಕೆ’ ಎಂದು ಆಕೆ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೋಟಾದಲ್ಲಿ ಕುಟುಂಬದೊಂದಿಗೆ ನಿಹಾರಿಕಾ ವಾಸವಿದ್ದಳು. ಆಕೆ ಜನವರಿ 30 ಮತ್ತು 31 ರಂದು ಜೆಇಇ ಪರೀಕ್ಷೆ ಬರೆಯಬೇಕಿತ್ತು. ಆದರೆ ವಿದ್ಯಾರ್ಥಿನಿ ಅತಿಯಾದ ಒತ್ತಡದಿಂದಲೇ ಆತ್ಮಹತ್ಯೆಗೆ ಶರಣಾಗಿರುವಂತೆ ಕಾಣುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement