ಕೇಂದ್ರ ಮಧ್ಯಂತರ ಬಜೆಟ್‌ 2024 : ಜನಸಂಖ್ಯೆ ನಿಯಂತ್ರಣಕ್ಕೆ ಸಮಿತಿ ರಚನೆಯ ಪ್ರಸ್ತಾಪ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ (ಫೆಬ್ರವರಿ 1) ಮಧ್ಯಂತರ ಬಜೆಟ್ ಮಂಡಿಸಿದ್ದು, ಜನಸಂಖ್ಯೆ ನಿಯಂತ್ರಣದ ಕುರಿತು ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ.
ಜನಸಂಖ್ಯೆಯ ವೇಗದ ಬೆಳವಣಿಗೆ ಮತ್ತು ಅದರಿಂದ ಉದ್ಭವಿಸಿರುವ ಸವಾಲುಗಳನ್ನು ಸಮಗ್ರವಾಗಿ ಪರಿಶೀಲಿಸಲು ಸರ್ಕಾರವು ಉನ್ನತ ಅಧಿಕಾರದ ಸಮಿತಿಯನ್ನು ರಚಿಸಲಿದೆ ಎಂದು ಬಜೆಟ್​ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ. `ವಿಕ್ಷಿತ್ ಭಾರತ್’ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣ ಮಾಡುವ ಗುರಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಸಿಇರುವ ಸಿಪಿಐ(ಎಂ) ಸಂಸದ (ರಾಜ್ಯಸಭೆ) ಜಾನ್ ಬ್ರಿಟ್ಟಾಸ್ ಅವರು, ಇದು ಮುಸ್ಲಿಂ ಸಮುದಾಯಕ್ಕೆ ಕಳಂಕ ತರುವ ಯತ್ನವಾಗಿದೆ. ಜನಸಂಖ್ಯೆ ನಿಯಂತ್ರಿಸಲು ಕಾರಣವಾಗುವ ಶಿಕ್ಷಣವನ್ನು ಒದಗಿಸುವಂತಹ ಮೂಲಭೂತ ಕಾಳಜಿಗಳನ್ನು ಪರಿಹರಿಸುವ ಬದಲು, ಈ ಸರ್ಕಾರವು ಬೇರೆಯದ್ದೆ ಯೋಚಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಚೀನಾವನ್ನು ಹಿಂದಿಕ್ಕಿ ಈಗ ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದ್ದು, ಚೀನಾವು 142.57 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾ ಎರಡನೇ ಸ್ಥಾನಕ್ಕೆ ಕುಸಿದಿದೆ.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement