ಲಕ್ನೋದಿಂದ 6 ದಿನ ಕಾಲ್ನಡಿಗೆಯಲ್ಲಿ ತೆರಳಿ ಅಯೋಧ್ಯೆಯ ಭಗವಾನ್‌ ʼರಾಮಲಲ್ಲಾʼ ದರ್ಶನ ಪಡೆದ 350 ಮಂದಿ ಮುಸ್ಲಿಮರು….!

ಅಯೋಧ್ಯೆ: ರಾಮಲಲ್ಲಾ ದರ್ಶನ ಪಡೆದು ಪೂಜೆ ಸಲ್ಲಿಸುವ ಸಲುವಾಗಿ ಆರು ದಿನಗಳ ಪಾದಯಾತ್ರೆ ಪೂರ್ಣಗೊಳಿಸಿದ 350 ಮುಸ್ಲಿಂ ಭಕ್ತರು ಬುಧವಾರ ಅಯೋಧ್ಯೆಗೆ ತಲುಪಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ಅಡಿಯಲ್ಲಿ ಗುಂಪು ಜನವರಿ 25 ರಂದು ಲಕ್ನೋದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿತು ಎಂದು ಎಂಆರ್‌ಎಂ (MRM) ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ತಿಳಿಸಿದ್ದಾರೆ.

‘ಜೈ ಶ್ರೀ ರಾಮ’ ಘೋಷಣೆಗಳನ್ನು ಕೂಗುತ್ತ, 350 ಮುಸ್ಲಿಂ ಭಕ್ತರ ಗುಂಪು ದಟ್ಟವಾದ ಮಂಜು ಮತ್ತು ತೀವ್ರ ಚಳಿಯ ನಡುವೆ ಕಾಲ್ನಡಿಗೆಯಲ್ಲಿ ಸುಮಾರು 150 ಕಿಮೀ ದೂರವನ್ನು ಕ್ರಮಿಸಿ ಅಯೋಧ್ಯೆಗೆ ತಲುಪಿದೆ. ರಾತ್ರಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳಲು ಪ್ರತಿ 25 ಕಿಲೋಮೀಟರ್‌ ಪ್ರಯಾಣ ನಿಲ್ಲಿಸುತ್ತಿದ್ದೆವು ಮತ್ತು ಮರುದಿನ ಬೆಳಿಗ್ಗೆ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಿದ್ದೆವು ಎಂದು ಶಾಹಿದ್ ಸಯೀದ್ ಹೇಳಿದ್ದಾರೆ.
ಆರು ದಿನಗಳ ನಡಿಗೆಯ ನಂತರ ಭಕ್ತರು ಅಯೋಧ್ಯೆಗೆ ತಲುಪಿ ನೂತನವಾಗಿ ಪ್ರತಿಷ್ಠಾಪಿಸಲಾದ ರಾಮಲಲ್ಲಾ ವಿಗ್ರಹದ ದರ್ಶನ ಪಡೆದು ಪೂಜೆ ಸಲ್ಲಿಸಲಾಯಿತು ಎಂದು ಶಾಹಿದ್ ಸಯೀದ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

ಕೋಮು ಸೌಹಾರ್ದತೆ ಉತ್ತೇಜಿಸುತ್ತದೆ…
“ಭಕ್ತರು ಇಮಾಮ್-ಎ-ಹಿಂದ್ ರಾಮ್ ಅವರ ಈ ಗೌರವಾನ್ವಿತ ದರ್ಶನವನ್ನು ಶಾಶ್ವತ ಮತ್ತು ಪಾಲಿಸಬೇಕಾದ ಸ್ಮರಣೆ ಎಂದು ಪರಿಗಣಿಸಿದ್ದಾರೆ” ಎಂದು ಅವರು ಉಲ್ಲೇಖಿಸಿದ್ದಾರೆ, ಜೊತೆಗೆ ಮುಸ್ಲಿಂ ಭಕ್ತರ ಈ ಕಾರ್ಯವು ಏಕತೆ, ಸಮಗ್ರತೆ, ಸಾಮರಸ್ಯ ಹಾಗೂ ಸಾರ್ವಭೌಮತ್ವದ ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದರು.
ರಾಮ ಲಲ್ಲಾನ ದರ್ಶನದ ನಂತರ, ಮುಸ್ಲಿಂ ರಾಷ್ಟ್ರೀಯ ಮಂಚ್ (MRM ಪ್ರಾಂತೀಯ ಸಂಯೋಜಕ ಶೇರ್ ಅಲಿ ಖಾನ್ ಮತ್ತು ಸಂಚಾಲಕ ರಾಜಾ ರಯೀಸ್ ನೇತೃತ್ವದ ಗುಂಪು ಭಗವಾನ್ ರಾಮನು ಎಲ್ಲರಿಗೂ ಪೂರ್ವಜ ಎಂದು ಹೇಳಿದ್ದಾರೆ. ಒಬ್ಬರ ದೇಶ ಮತ್ತು ಸಹ ಮಾನವರ ಮೇಲಿನ ಪ್ರೀತಿಗೆ ಧರ್ಮ, ಜಾತಿ ಮತ್ತು ಪಂಥಗಳು ಗೌಣವಾಗಿವೆ. ಯಾವುದೇ ನಂಬಿಕೆಯು ಇತರ ಜನರ ಬಗ್ಗೆ ಅಪಹಾಸ್ಯ ಅಥವಾ ತಿರಸ್ಕಾರವನ್ನು ಪ್ರತಿಪಾದಿಸುವುದಿಲ್ಲ ಎಂದು ರಯೀಸ್ ಮತ್ತು ಖಾನ್ ಅವರು ಒತ್ತಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement