ಮೈ ಜುಂ ಎನ್ನುವ ವೀಡಿಯೊ…| ಕಾಡಿನ ರಸ್ತೆಯಲ್ಲಿ ಫೋಟೋ ಕ್ಲಿಕ್ಕಿಸಲು ಕಾರಿಂದ ಇಳಿದ ಪ್ರಯಾಣಿಕರ ಮೇಲೆ ಕಾಡಾನೆ ದಾಳಿ : ಕೂದಲೆಳೆ ಅಂತರದಲ್ಲಿ ಸಾವಿನದವಡೆಯಿಂದ ಪಾರು..

ಚಾಮರಾಜನಗರ: ಕಾಡಿನ ರಸ್ತೆಯಲ್ಲಿ ಪ್ರಯಾಣಿಕರು ತಮ್ಮ ಹುಚ್ಚಾಟಕ್ಕೆ ಸಾವಿನ ಸಮೀಪ ಹೋಗಿಬಂದಿದ್ದಾರೆ. ಕಾಡಾನೆ (Wild Elephant) ಫೋಟೋ ಕ್ಲಿಕ್ಕಿಸಲು ಕಾರಿನಿಂದ ಕೆಳಗಿಳಿದ ಇಬ್ಬರು ಪ್ರಯಾಣಿಕರನ್ನು ಕಾಡಾನೆ ಅಟ್ಟಿಸಿಕೊಂಡು ಬಂದಿದೆ. ಅವರು ಅಕ್ಷರಶಃ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಇದು ಅವರಿಗೆ ಮರುಜನ್ಮ ಎಂಬ ರೀತಿಯಲ್ಲಿ ಅವರು ಆನೆ ದಾಳಿಯಿಂದ ಪಾರಾಗಿದ್ದಾರೆ. ಚಾಮರಾಜನಗರ (Chamarajanagara) ಜಿಲ್ಲೆ ಗಡಿ ಭಾಗದ ಬಂಡೀಪುರ – ಕೇರಳದ ಸುಲ್ತಾನ್‌ ಬತ್ತೇರಿ ರಸ್ತೆಯ ಮುತ್ತಂಗ ಚೆಕ್‌ಪೋಸ್ಟ್‌ ಬಳಿ ಈ ಭಯಾನಕ ಘಟನೆ ನಡೆದಿದೆ.

ಕಾಡಿನ ರಸ್ತೆಯಲ್ಲಿ ಪ್ರಯಾಣಿಕರು ಆನೆ ಫೋಟೋ ಕ್ಲಿಕ್ಕಿಸಲು ಕಾರಿನಿಂದ ಕೆಳಗಿಳಿದ ವೇಳೆ ಘಟನೆ ನಡೆದಿದೆ. ಅದೃಷ್ಟವಾಶತ್ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ ಫೋಟೋ ಕ್ಲಿಕ್ಕಿಸಲು ಇಳಿದ ಇಬ್ಬರ ಮೇಲೆ ಆನೆ ದಾಳಿ ಮಾಡಿರುವುದು ಕಂಡುಬರುತ್ತದೆ. ತಪ್ಪಿಸಿಕೊಳ್ಳಲು ಅವರು ಓಡುತ್ತಿರುವಾಗ ಓರ್ವ ವ್ಯಕ್ತಿ ಎಡವಿ ಬಿದ್ದಿದ್ದು, ಕೆಳಗೆ ಬಿದ್ದ ಪ್ರಯಾಣಿಕನಿಗೆ ಹಿಂಗಾಲಿನಿಂದ ಒದ್ದು ಕಾಡಾನೆ ವಾಪಸ್ಸಾಗಿದೆ. ಅದೃಷ್ಟವಶಾತ್ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಳ್ಳುಹಂದಿ ತಿಂದು ಹುಲಿ ಸಾವು
ಚಾಮರಾಜನಗರ ಜಿಲ್ಲೆಯ ಬಂಡೀಪುರದ ಮದ್ದೂರು ವಲಯದಲ್ಲಿ ಮುಳ್ಳುಹಂದಿ ತಿಂದು 4 ವರ್ಷದ ಗಂಡು ಹುಲಿ ಮೃತಪಟ್ಟಿದೆ ಎಂದು ವರದಿಯಾಗಿದೆ. ಹುಲಿಯ ಮರಣೋತ್ತರ ಪರೀಕ್ಷೆ ವೇಳೆ ಹುಲಿ ಹೊಟ್ಟೆಯೊಳಗೆ ಮುಳ್ಳುಹಂದಿಯ ಮುಳ್ಳುಗಳು ಪತ್ತೆಯಾಗಿದೆ. ಹೊಟ್ಟೆಯ ಒಳಭಾಗದಲ್ಲಿ ಮುಳ್ಳುಗಳು ಚುಚ್ಚಿ ತೀವ್ರ ರಕ್ತಸ್ರಾವವಾಗಿ ಹುಲಿ ಮೃತಪಟ್ಟಿದೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement