ವೀಡಿಯೊ…| ಬಿಜೆಪಿ 400 ಸ್ಥಾನ ಗೆಲ್ಲಲಿದೆ : ರಾಜ್ಯಸಭೆಯಲ್ಲಿ ಹೀಗೆಂದು ಭವಿಷ್ಯ ನುಡಿದ ಮಲ್ಲಿಕಾರ್ಜುನ್ ಖರ್ಗೆ…!

ನವದೆಹಲಿ: ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಷಣವು ಆಡಳಿತ ಪಕ್ಷದ ಸಾಲಿನಲ್ಲಿ ಭಾರೀ ಖುಷಿಗೆ ಕಾರಣವಾದ ಪ್ರಸಂಗವು ರಾಜ್ಯಸಭೆಯಲ್ಲಿ ನಡೆದಿದೆ. ಖರ್ಗೆ ಅವರ ಮಾತಿಗೆ ಆಡಳಿತ ಪಕ್ಷದ ಸಂಸದರೆಲ್ಲರೂ ಬೆಂಚ್‌ ಗುದ್ದಿ ಸ್ವಾಗತಿಸಿದ ಅಪರೂಪದ ವಿದ್ಯಮಾನ ಇದಾಗಿದೆ.
ಆಡಳಿತಾರೂಢ ಬಿಜೆಪಿ ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಅಬ್ ತೋ 400 ಪಾರ್’ ಹೋ ರಹಾ ಹೈ (ಈ ಬಾರಿ 400ಕ್ಕಿಂತ ಹೆಚ್ಚು ದಾಟುತ್ತೀರಿ)’ ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ಅಧಿಕೃತ ಎಕ್ಸ್ ಹ್ಯಾಂಡಲ್ ಹಂಚಿಕೊಂಡಿರುವ ಕ್ಲಿಪ್‌ನಲ್ಲಿ, “ನಿಮಗೆ ಬಹುಮತವಿದೆ, 330-334 ಸ್ಥಾನಗಳನ್ನು ಹೊಂದಿದ್ದೀರಿ. ಈ ಬಾರಿ ಅದು 400 ಕ್ಕಿಂತ ಹೆಚ್ಚಾಗಲಿದೆ” ಎಂದು ರಾಜ್ಯಸಭೆಯಲ್ಲಿ ಖರ್ಗೆ ಹೇಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಖಜಾನೆ ಬೆಂಚ್‌ನಲ್ಲಿ ಕುಳಿತಿದ್ದವರಲ್ಲಿ ನಗೆಯ ಅಲೆಗೆ ಕಾರಣವಾಯಿತು.

ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಖರ್ಗೆ ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಉತ್ತರಿಸಿದರು. ಮಹಿಳಾ ಭದ್ರತೆ ಹಾಗೂ ಮೀಸಲಾತಿ ವಿಚಾರದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದಾಗ, ಅದರ ವಿರುದ್ಧ ನೀವು ಏಕೆ ಕೌಂಟರ್ ಅಫಿಡವಿಟ್ ನೀಡಿದ್ದೀರಿ? ನೀವು ಹಾಗೆ ಮಾಡಬಾರದಿತ್ತು, ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಸರ್ಕಾರದ ಬಹುಮತದ ಬಗ್ಗೆ ಪ್ರಸ್ತಾಪಿಸಿದ ಅವರು, ಆಪ್‌ ಕಾ ಇತನಾ ಬಹುಮತ್ ಹೈ, ಪೆಹಲೆ 330-334 ಥಿ, ಅಬ್ ತೋ 400 ಪಾರ್’ ಹೋ ರಹಾ ಹೈ ( ನಿಮಗೆ ಈಗಾಗಲೇ 330-34 ಸ್ಥಾನಗಳ ಬಹುಮತವಿದೆ. ಮತ್ತು ಈಗ ನೀವು 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೀರಿ ) ಎಂದು ಖರ್ಗೆ ಬಾಯ್ತಪ್ಪಿ ಹೇಳಿದರು. ಇದು ಆಡಳಿತ ಪಕ್ಷದ ಸದಸ್ಯರ ಸಂತೋಷಕ್ಕೆ ಕಾರಣವಾಯಿತು.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

ಮಲ್ಲಿಕಾರ್ಜುನ್ ಖರ್ಗೆ ಹೀಗೆ ಹೇಳುತ್ತಿದ್ದಂತೆ ಇಡೀ ಸದನ ನಗೆಗಡಲಲ್ಲಿ ತೇಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಭಾಪತಿ ಜಗದೀಪ ಧನಕರ ಹಾಗೂ ಪ್ರಧಾನಿ ಮೋದ ಮುಸಿಮುಸಿ ನಗುತ್ತಿದ್ದರು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ‘ಖರ್ಗೆ ಹೇಳಿದ್ದೆಲ್ಲ ಸತ್ಯ’ ಎಂದರು.
ಸದನದಲ್ಲಿ ನಗೆ, ಚಪ್ಪಾಳೆ ಜೋರಾಗುತ್ತಿದ್ದಂತೆ ತಮ್ಮ ಮಾತಿಗೆ ಸಮರ್ಥನೆ ನೀಡಲು ಮುಂದಾದ ಖರ್ಗೆ ಮುಂದಾಗಿದ್ದಾರೆ. ನೀವು (ಬಿಜೆಪಿ) 400-500 ಸೀಟು ಪಡೆಯುತ್ತೇವೆ ಎಂದು ಕಹಳೆ ಊದುತ್ತಿದ್ದೀರಿ, ಹಾಗಾದರೆ ಈ ಎಲ್ಲ ಕೆಲಸಗಳನ್ನು ಏಕೆ ಮಾಡುತ್ತಿಲ್ಲ? ಈ ಬಾರಿ, ನೀವು 100 ಸ್ಥಾನಗಳನ್ನು ಸಹ ಪಡೆಯುವುದಿಲ್ಲ. ಇಂಡಿಯಾ ಮೈತ್ರಿಕೂಟ (ವಿರೋಧಪಕ್ಷಗಳ ಮೈತ್ರಿಕೂಟ) ಪ್ರಬಲವಾಗಿದೆ” ಎಂದು ಅವರು ಹೇಳಿದರು

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement