ಫೇಸ್‌ಬುಕ್ ಲೈವ್‌ ನಡೆಯುತ್ತಿದ್ದಾಗಲೇ ಉದ್ಧವ್‌ ಠಾಕ್ರೆ ಬಣದ ಮುಖಂಡನ ಗುಂಡಿಕ್ಕಿ ಹತ್ಯೆ..

ಮುಂಬೈ: ಆಘಾತಕಾರಿ ಘಟನೆಯಲ್ಲಿ ಶಿವಸೇನೆಯ ಉದ್ಧವ ಸೇನೆ ಬಣದ ನಾಯಕ ಅಭಿಷೇಕ ಘೋಷಲ್ಕರ್ ಅವರನ್ನು ವೈಯಕ್ತಿಕ ದ್ವೇಷದ ಕಾರಣ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಾಹಿತಿ ಪ್ರಕಾರ ಮೂರ್ನಾಲ್ಕು ಸುತ್ತಿನ ಗುಂಡಿನ ಚಕಮಕಿ ನಡೆದಿದೆ. ಘಟನೆಯ ನಂತರ, ಘೋಷಲ್ಕರ್ ಅವರನ್ನು ತಕ್ಷಣವೇ ಬೊರಿವಲಿ ಪಶ್ಚಿಮದ ಕರುಣಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಫೇಸ್ ಬುಕ್ ಲೈವ್ ವೇಳೆ ನಾಯಕನ ಮೇಲೆ ಗುಂಡಿನ ದಾಳಿ
ಹಳದಿ ಕುಂಕುಮ ಕಾರ್ಯಕ್ರಮದ ವೇಳೆ ಫೇಸ್‌ಬುಕ್ ಲೈವ್ ಮಾಡುತ್ತಿದ್ದಾಗ ಘೋಷಲ್ಕರ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ವರದಿಗಳ ಪ್ರಕಾರ, ಮೌರಿಸ್ ನೊರೊನ್ಹಾ ಎಂಬ ವ್ಯಕ್ತಿ ಘೋಷಲ್ಕರ್ ಮೇಲೆ ಗುಂಡು ಹಾರಿಸಿದ ನಂತರ ಸ್ವಯಂ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದಾನೆ. ದಹಿಸರ್ ಪ್ರದೇಶದ ಎಂಎಚ್‌ಬಿ (MHB) ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘೋಷಲ್ಕರ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮಾಜಿ ಕೌನ್ಸಿಲರ್ ವಿನೋದ್ ಘೋಸಲ್ಕರ್ ಅವರ ಮಗ. ಘಟನೆ

ಪ್ರಮುಖ ಸುದ್ದಿ :-   ಸೋಮವಾರಪೇಟೆ : ವಿದ್ಯಾರ್ಥಿನಿ ತಲೆ ಕಡಿದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಘೋಷಲ್ಕರ್ ಅವರು ಹೋಗಿದ್ದ ಮಾರಿಸ್ ನೊರೊನ್ಹಾ ಅವರ ಕಚೇರಿಯಲ್ಲಿ ದಾಳಿ ನಡೆದಿದೆ. ಆರೋಪಿಯನ್ನು “ಮೌರಿಸ್ ಭಾಯ್” ಎಂದು ಕರೆಯಲಾಗುತ್ತಿತ್ತು ಮತ್ತು ತನ್ನನ್ನು ತಾನು “ಸಾಮಾಜಿಕ ಕಾರ್ಯಕರ್ತ” ಎಂದು ಹೇಳಿಕೊಂಡಿದ್ದ. ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಶಿವಸೇನೆ ನಾಯಕ ಆನಂದ್ ದುಬೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ‘ಜಂಗಲ್ ರಾಜ್’ ವಾತಾವರಣ ನಿರ್ಮಾಣವಾಗುತ್ತಿದೆ. ಹಗಲು ಹೊತ್ತಿನಲ್ಲಿ ಗುಂಡಿನ ದಾಳಿಗಳು ನಡೆಯುತ್ತಿವೆ. ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ದುಬೆ ಹೇಳಿದ್ದಾರೆ.

ಫೆಬ್ರವರಿ ತಿಂಗಳಲ್ಲಿ ನಡೆದ ಇಂತಹ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮುನ್ನ, ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಅವರು ಉಲ್ಲಾಸ ನಗರದ ಹಿಲ್‌ಲೈನ್ ಪೊಲೀಸ್ ಠಾಣೆಯಲ್ಲಿ ಶಿವಸೇನಾ (ಏಕನಾಥ್ ಶಿಂಧೆ) ಬಣದ ನಾಯಕ ಮಹೇಶ ಗಾಯಕ್‌ವಾಡ್ ಅವರ ಮೇಲೆ ಗುಂಡು ಹಾರಿಸಿದ ಆರೋಪ ಎದುರಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಇಂಡಿಯಾ ಮೈತ್ರಿಕೂಟ ಅಧಿಕಾರ ಬಂದ್ರೆ ಅಯೋಧ್ಯೆ ರಾಮಮಂದಿರ ಶುದ್ಧೀಕರಿಸ್ತೇವೆ : ವಿವಾದ ಸೃಷ್ಟಿಸಿದ ಕಾಂಗ್ರೆಸ್‌ ನಾಯಕನ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement