ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಜನರಿಗೆ ಕೋಟ್ಯಂತರ ರೂ. ವಂಚನೆ ಆರೋಪ : ದೂರು ದಾಖಲು

ಬೆಂಗಳೂರು : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್‌ಬಿಐ ಹೆಸರು ಹೇಳಿಕೊಂಡು ಬ್ಯಾಂಕ್​ಗಳಿಂದ ಸಬ್ಸಿಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರು ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಸಂಗ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬ್ಲೂ ವಿಂಗ್ಸ್ ಎಂಬ ಹೆಸರಿನ ನಕಲಿ ಟ್ರಸ್ಟ್ ಅಡಿ ಪವಿತ್ರಾ ಮತ್ತು ಆಕೆಯ ಗ್ಯಾಂಗ್ ಹಲವರಿಗೆ ವಂಚನೆ ಮಾಡಿದೆ ಎಮದು ಬೆಂಗಳೂರಿನ ಅತ್ತಿಬೆಲೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಪವಿತ್ರ ಎನ್ನುವವರು ವಿರುದ್ಧ ಆನೇಕಲ್, ಚಂದಾಪುರ, ಸೂರ್ಯನಗರ, ಹೊಸಕೋಟೆ ಅತ್ತಿಬೆಲೆಯಲ್ಲಿ ವಂಚನೆ ನಡೆಸಿದ್ದಾಳೆ ಎಂದು ಹೇಳಲಾಗಿದೆ.

ಟ್ರಸ್ಟ್‌ಗೆ ಆರ್‌ಬಿಐನಿಂದ 17 ಕೋಟಿ ರೂ. ಹಣ ಬಂದಿರುವುದಾಗಿ ಈಕೆ ಜನರನ್ನು ನಂಬಿಸಿದ್ದಾಳೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿ ತರಹದ ನಕಲಿ ಪತ್ರ ಸೃಷ್ಟಿಸಿಕೊಂಡು ಅದನ್ನು ಎಲ್ಲರಿಗೂ ತೋರಿಸಿದ್ದಾಳೆ. ನೋಟಿನ ಕಟ್ಟುಗಳ ವೀಡಿಯೊಗಳನ್ನು ಕಳುಹಿಸಿ ಜನರನ್ನು ನಂಬಿಸಿದ್ದಳು. ಜನರಿಗೆ ಸುಲಭದಲ್ಲಿ ಸಾಲ ಕೊಡಲಾಗುವುದು. ಒಬ್ಬರಿಗೆ ಹತ್ತು ಲಕ್ಷ ಲೋನ್ ನೀಡಿದರೆ ಅದರಲ್ಲಿ ಐದು ಲಕ್ಷ ಸಬ್ಸಿಡಿ ಎಂದು ಜನರನ್ನು ನಂಬಿಸಿದ್ದಾಳೆ, ಆದರೆ ಸಾಲ ಪಡೆಯುವವರು ಮೊದಲು ಒಂದಷ್ಟು ಹಣ ಠೇವಣಿ ಮಾಡಬೇಕು ಎಂದು ಹೇಳಿದ್ದಾಳೆ. ನಂಬಿದ ಜನರು ಸಾಲ ಪಡೆದರೆ ಸಬ್ಸಿಡಿ ಸಿಗುತ್ತದೆ ಎಂಬ ಆಸೆಗೆ ಈಕೆಗೆ ಲಕ್ಷಾಂತರ ರೂಪಾಯಿ ಹಣ ಡೆಪಾಸಿಟ್‌ ಮಾಡಿದ್ದು, ಆದರೆ ತಿಂಗಳುಗಳು ಕಳೆದರೂ ಸಾಲಸದ ಹಣ ಸಿಗದೇ ಇದ್ದಾಗ ಮಹಿಳೆಯ ವಂಚನೆ ಬಯಲಾಗಿದೆ.
ಸೂರ್ಯನಗರದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ವಂಚನೆ ಕುರಿತು ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement