ಮಹಾರಾಷ್ಟ್ರ: ಮಾಜಿ ಸಿಎಂ ಅಶೋಕ ಚವಾಣ ಪಕ್ಷ ತೊರೆದ ಬೆನ್ನಲ್ಲೇ ಕಾಂಗ್ರೆಸ್ ಸಭೆಗೆ ಐವರು ಶಾಸಕರು ಗೈರು…!

ಮುಂಬೈ: ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ನಂತರ ಮಹಾರಾಷ್ಟ್ರದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಶಾಸಕರ ಸಭೆಗೆ ಕನಿಷ್ಠ ಐವರು ಶಾಸಕರು ಹಾಜರಾಗಲಿಲ್ಲ ಎಂದು ವರದಿಯಾಗಿದೆ. ಇದು ಇನ್ನೂ ಅನೇಕ ಶಾಸಕರು ಬಿಜೆಪಿಗೆ ಪಕ್ಷಾಂತರವಾಗಬಹುದು ಎಂಬ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.
ಕಾಂಗ್ರೆಸ್‌ ಶಾಸಕರಾದ ಜೀಶನ್ ಸಿದ್ದಿಕ್ (ಬಾಂದ್ರಾ ಪೂರ್ವ), ಅಸ್ಲಾಂ ಶೇಖ್ (ಮಲಾಡ್ ಪಶ್ಚಿಮ), ಅಮಿತ್ ದೇಶಮುಖ (ಲಾತೂರ್ ಸಿಟಿ), ಸುಲ್ಭಾ ಖೋಡ್ಕೆ (ಅಮರಾವತಿ) ಮತ್ತು ಮೋಹನರಾವ್ ಹಂಬರ್ಡೆ (ನಾಂದೇಡ್ ದಕ್ಷಿಣ) ಅವರು ಪಕ್ಷದ ಸಭೆಗೆ ಹಾಜರಾಗಲಿಲ್ಲ ಎಂದು ವರದಿಯಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ ಥೋರಟ್ ಅವರು, ಅನುಮತಿ ಪಡೆದ ನಂತರ ಎಲ್ಲಾ ಐವರು ಶಾಸಕರು ಗೈರುಹಾಜರಾಗಿದ್ದರು ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಸಹ ಶಾಸಕರು ಪೂರ್ವ ನಿಗದಿತ ಕಾರ್ಯಕ್ರಮದ ಕಾರಣದಿಂದ ಸಭೆಯಿಂದ ಹೊರಗುಳಿಯಲು ಅನುಮತಿ ಕೇಳಿದ್ದರು ಎಂದು ಸಮರ್ಥಿಸಿಕೊಂಡರು.
ಜೀಶನ್ ಸಿದ್ದಿಕ್ ಮತ್ತು ಅಸ್ಲಾಂ ಶೇಖ್ ಅವರು ತಮ್ಮ ಕ್ಷೇತ್ರಗಳ ಕಾರ್ಯಕ್ರಮವಿದೆ ಎಂದು ಹೇಳಿದರು, ಅಮಿತ್ ದೇಶಮುಖ್ ರಾಜ್ಯದಲ್ಲಿಲ್ಲ. ಸುಲಭಾ ಖೋಡ್ಕೆ ಮತ್ತು ಮೋಹನರಾವ್ ಹಂಬರಡೆ ಅವರು ಕುಟುಂಬ ಕಾರ್ಯಕ್ರಮದಲ್ಲಿದ್ದರು ಎಂದು ಪಕ್ಷದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ವಿರುದ್ಧ ಪಾಕಿಸ್ತಾನದ ದಾಳಿಗಳಿಗೆ ಚೀನಾದ ಬೆಂಬಲ ; ಇಲ್ಲಿವೆ ಪ್ರಮುಖ ಪುರಾವೆಗಳು...

ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿ ಚಂದ್ರಕಾಂತ್ ಹಂದೋರೆ ಅವರ ಪ್ರಸ್ತಾವಕರಾಗಿ ಜೀಶಾನ್ ಸಿದ್ದಿಕ್ ಮತ್ತು ಅಸ್ಲಾಂ ಶೇಖ್ ಇಬ್ಬರೂ ಸಹಿ ಹಾಕಿದ್ದಾರೆ ಮತ್ತು ಬುಧವಾರ ಸಂಜೆ ಪಕ್ಷದ ಶಾಸಕರ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪಕ್ಷದ ಕಾರ್ಯಾಧ್ಯಕ್ಷರು ಹೇಳಿದ್ದಾರೆ.
ಜೀಶನ್ ಸಿದ್ದಿಕ್ ಅವರ ತಂದೆ ಬಾಬಾ ಸಿದ್ದಿಕ್ ಕಳೆದ ವಾರ ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದ್ದರು.
ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ನಾಯಕರಾದ ಅಜಯ್ ಚೌಧರಿ (ಶಿವಸೇನೆ ಯುಬಿಟಿ) ಮತ್ತು ಜಿತೇಂದ್ರ ಅವ್ಹಾದ್ (ಶರದ್ ಪವಾರ್ ನೇತೃತ್ವದ ಎನ್‌ಸಿಪಿ) ಕೂಡ ಹಂದೋರೆ ಅವರ ನಾಮಪತ್ರ ಸಲ್ಲಿಸುವ ಮೊದಲು ಕರೆದ ಸಭೆಗೆ ಹಾಜರಿದ್ದರು.

ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಹಿನ್ನಡೆಯಾಗಿ, ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ ಅವರು ಸೋಮವಾರ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದು, ಇದು ಪಕ್ಷದಿಂದ ಇನ್ನಷ್ಟು ಪಕ್ಷಾಂತರಗಳ ಬಗ್ಗೆ ಊಹಾಪೋಹಗಳಿಗೆ ಕಾರಣವಾಯಿತು. ಒಂದು ದಿನದ ನಂತರ ಅವರು ಬಿಜೆಪಿ ಸೇರಿದರು ಮತ್ತು ಕೇಸರಿ ಪಕ್ಷದಿಂದ ರಾಜ್ಯಸಭಾ ಚುನಾವಣೆಗೆ ಮಹಾರಾಷ್ಟ್ರದಿಂದ ಕಣಕ್ಕಿಳಿದಿದ್ದಾರೆ.
ಕಳೆದ ತಿಂಗಳು, ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಕಾಂಗ್ರೆಸ್‌ ತೊರೆದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದರು. ದಿಯೋರಾ ಅವರನ್ನು ರಾಜ್ಯಸಭಾ ಚುನಾವಣೆಗೆ ಶಿವಸೇನೆ ನಾಮನಿರ್ದೇಶನ ಮಾಡಿದೆ

ಪ್ರಮುಖ ಸುದ್ದಿ :-   'ಅಂತಾರಾಷ್ಟ್ರೀಯ ಭಯೋತ್ಪಾದಕ ಮಸೂದ್ ಅಜರಗೆ ಪಾಕಿಸ್ತಾನದಿಂದ 14 ಕೋಟಿ ರೂ...': ಪಾಕ್ ಭಯೋತ್ಪಾದನಾ ಯೋಜನೆಗಳ ಬಗ್ಗೆ ರಾಜನಾಥ ಸಿಂಗ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement