ಕರ್ನಾಟಕ ಬಜೆಟ್ 2024 : ಬೆಂಗಳೂರಿಗೆ ಸಿಕ್ಕಿದ್ದೇನು…?

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ 2024-25ನೇ ಹಣಕಾಸು ವರ್ಷದ ಆಯವ್ಯಯದಲ್ಲಿ ಬೆಂಗಳೂರಿಗೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಬೆಂಗಳೂರು ಅಭಿವೃದ್ಧಿಗೆ, ವಿಶೇಷವಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿ 6000 ಕೋಟಿ ರೂ. ಗಳಷ್ಟು ತೆರಿಗೆ ಸಂಗ್ರಹದ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ.
 ಬಜೆಟ್‌ನಲ್ಲಿ ಬೆಂಗಳೂರಿಗೆ ಕೊಟ್ಟಿದ್ದೇನು..?
• ಬೆಂಗಳೂರಲ್ಲಿ ಹೋಟೆಲ್ ವ್ಯಾಪಾರದ ಅವಧಿ ರಾತ್ರಿ ಒಂದು ಗಂಟೆಗೆ ವರೆಗೆ ಏರಿಕೆ.
• ಬೆಂಗಳೂರಿಗೆ ನೂತನ ಬಿಸಿನೆಸ್ ಕಾರಿಡಾರ್ ಘೋಷಣೆ – 73ಕಿಮೀ ಉದ್ದದ ಕಾರಿಡಾರ್ ಗೆ 27 ಸಾವಿರ ಕೋಟಿ ರೂ. ನೀಡುವ ಘೋಷಣೆ
• ಹೊರವರ್ತುಲ ರಸ್ತೆ ಅಭಿವೃದ್ಧಿಗೆ 200 ಕೋಟಿ (ನಾಲಾ ಬಫರ್ ರಸ್ತೆ ಸೇರಿ)
• ನಮ್ಮ ಮೆಟ್ರೋದ ಹಂತ 3ಕ್ಕೆ 15,611 ಕೋಟಿ ರೂ. ಅನುದಾನ ನಿಗದಿ
• ಬಿಎಂಟಿಸಿಗೆ 820 ಹೊಸ ಇಲೆಕ್ಟ್ರಿಕ್ ಬಸ್ ಖರೀದಿಗೆ 1,334 ಕೋಟಿ ಅನುದಾನ
• ಜಲ ಮಂಡಳಿಯ ಕಾವೇರಿ 5ನೇ ಹಂತದ ಕಾಮಗಾರಿಗೆ 5,550 ಕೋಟಿ (12 ಲಕ್ಷ ಜನರಿಗೆ ಪ್ರತಿ ದಿನ ನೀರು)
• ನಗರದಲ್ಲಿ 147 ಕಿಮೀ ವೈಟ್ ಟಾಪಿಂಗ್ ಗೆ 1700 ಕೋಟಿ ರೂ.
• ಬಿಬಿಎಂಪಿಯ 7 ಘನತ್ಯಾಜ್ಯ ಘಟಕಗಳ ಅಭಿವೃದ್ಧಿಗೆ 441 ಕೋಟಿ
• ಬಿಬಿಎಂಪಿಯ 110 ಹಳ್ಳಿಗೆ ಕುಡಿಯುವ ನೀರು ಪೂರೈಕೆಗೆ 200 ಕೋಟಿ
• ಜಾಹೀರಾತು ಮೂಲಕ 2000 ಕೋಟಿ ರೂ.ಸಂಗ್ರಹದ ನಿರೀಕ್ಷೆ
• ಹೆಬ್ಬಾಳ ಜಂಕ್ಷನ್ ನಲ್ಲಿ ಸುರಂಗ ಮಾರ್ಗ ನಿರ್ಮಿಸಲು ಸರ್ಕಾರ ಅಸ್ತು
• ನಗರದಲ್ಲಿ 250 ಮೀಟರ್ ಎತ್ತರದ ಸ್ಕೈ ಡೆಕ್ ನಿರ್ಮಾಣಕ್ಕೆ ಒಪ್ಪಿಗೆ
• ನೂತ‌ನ ಬಯೊ ಸಿಎನ್​ಜಿ ಸ್ಥಾವರ ಸ್ಥಾಪನೆ
• 420 ಹಬ್ & ಸ್ಪೋಕ್ ಮಾದರಿಯಲ್ಲಿ ಪ್ರಯೋಗಾಲಯಕ್ಕೆ 20 ಕೋಟಿ ರೂಪಾಯಿ
• ಬೆಂಗಳೂರಿನ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ 20 ಕೋಟಿ ವೆಚ್ಚದಲ್ಲಿ ರೋಬೋಟಿಕ್ ಯಂತ್ರ ಸ್ಥಾಪನೆ
• ನಗರದ ಪೂರ್ವ ಭಾಗದಲ್ಲಿ 10 ಕೋಟಿ ವೆಚ್ಚದಲ್ಲಿ 500 ಜನರಿಗೆ ವ್ಯವಸ್ಥೆ ಇರುವ ನಿರಾಶ್ರಿತ ಕೇಂದ್ರ
• ಬಿಬಿಎಂಪಿಯ 110 ಹಳ್ಳಿಗೆ ಕುಡಿಯುವ ನೀರು ಪೂರೈಕೆಗೆ 200 ಕೋಟಿ ರೂಪಾಯಿ

ಪ್ರಮುಖ ಸುದ್ದಿ :-   ಬೆಂಗಳೂರು | ತನ್ನ ಒಪ್ಪಿಗೆಯಿಲ್ಲದೆ ಇನ್‌ಸ್ಟಾಗ್ರಾಮ್ ವೀಡಿಯೊ ಪೋಸ್ಟ್ ; ಮಹಿಳೆಯ ದೂರಿನ ನಂತರ ವ್ಯಕ್ತಿಯ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement