ವೀಡಿಯೊ..| ಆಘಾತಕಾರಿ..: ಪತ್ನಿಯ ಶಿರಚ್ಛೇದ ಮಾಡಿ ತಲೆ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಗಂಡನ ಬಂಧನ

ಲಕ್ನೋ: ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಗುರುವಾರ ತನ್ನ ಪತ್ನಿಯ ಕತ್ತರಿಸಿದ ತಲೆಯೊಂದಿಗೆ ಸಾರ್ವಜನಿಕವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ದಾರಿಹೋಕರು ಚಿತ್ರೀಕರಿಸಿದ ದೃಶ್ಯಗಳು ಬಾರಾಬಂಕಿಯ ಮೇಸ್ತ್ರಿ ಅನಿಲ ಎಂಬಾತ ಒಂದು ಕೈಯಲ್ಲಿ ತಲೆ ಮತ್ತು ಇನ್ನೊಂದು ಕೈಯಲ್ಲಿ ಕುಡಗೋಲು ಹಿಡಿದುಕೊಂಡು ಹೋಗುತ್ತಿರುವುದನ್ನು ತೋರಿಸಿದೆ.ಆತನನ್ನು ಬಂಧಿಸುವವರೆಗೂ ನೂರಾರು ಪ್ರಯಾಣಿಕರು ಈ ಭಯಾನಕ ದೃಶ್ಯವನ್ನು ವೀಕ್ಷಿಸಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯ ಬಸರಾ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ದಾಂಪತ್ಯಕ್ಕೆ ದ್ರೋಹವೆಸಗಿದ ಶಂಕೆಯಲ್ಲಿ ವ್ಯಕ್ತಿ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಹತ್ಯೆ ಮಾಡಿದವನನ್ನು ಅನಿಲ ಕನೌಜಿಯಾ ರಾಜಗೀರ್ ಎಂದು ಗುರುತಿಸಲಾಗಿದ್ದು, ಈತ ಕುಡುಗೋಲಿನಿಂದ ತನ್ನ ಪತ್ನಿಯ ಕತ್ತನ್ನು ಸೀಳಿದ್ದಾನೆ. ಪತ್ನಿಯ ಕತ್ತರಿಸಿದ ತಲೆಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಶಂಕಿತನನ್ನು ಬಂಧಿಸಿದ್ದಾರೆ. ವೀಡಿಯೊ ದೃಶ್ಯಗಳು ಆರೋಪಿಯು ತನ್ನ ಹೆಂಡತಿಯ ಕತ್ತರಿಸಿದ ತಲೆಯನ್ನು ಹೊತ್ತುಕೊಂಡು ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ.

ವರದಿಯ ಪ್ರಕಾರ, ವೃತ್ತಿಯಲ್ಲಿ ಕಾರ್ಮಿಕರಾಗಿರುವ ಅನಿಲ್ ಕನೌಜಿಯ ರಾಜಗೀರ್ ಅವರು ವಂದನಾ ಕನೌಜಿಯಾ ಅವರನ್ನು ಕಳೆದ ಎಂಟು ವರ್ಷಗಳಿಂದ ವಿವಾಹವಾಗಿದ್ದ. ಇತ್ತೀಚೆಗೆ, ವಂದನಾ ಭಗೌಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಳು, ಅಲ್ಲಿ ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿದ್ದಳು ಎಂದು ಹೇಳಲಾಗಿದೆ, ಇದು ದಂಪತಿ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಆ ದುರದೃಷ್ಟದ ದಿನದಂದು, ಅನಿಲ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ, ಆದರೆ ಬೆಳಿಗ್ಗೆ 9:30 ರ ಸುಮಾರಿಗೆ ಕುಡುಗೋಲು ಹಿಡಿದು ಮನೆಗೆ ಬಂದಿದ್ದಾನೆ. ಬಂದವನೇ ಪತ್ನಿಯ ಮೇಲೆ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿದ್ದಾನೆ. ನಂತರ ಆತ ಕುಡುಗೋಲಿನಿಂದ ಪತ್ನಿ ವಂದನಾಳ ಕುತ್ತಿಗೆಯನ್ನು ಭೀಕರವಾಗಿ ಕತ್ತರಿಸಿ, ಹತ್ಯೆ ಮಾಡಿದ್ದಾನೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ, ಸಿಜೆಐ ವಿರುದ್ಧ ಪೋಸ್ಟ್‌: ಕಾಂಗ್ರೆಸ್‌, ರಾಹುಲ್ ಗಾಂಧಿಗೆ ನೋಟಿಸ್

ಘೋರ ಕೃತ್ಯ ಎಸಗಿದ ನಂತರ ಆತ ಪತ್ನಿಯ ತಲೆಯನ್ನು ಒಂದು ಕೈಯಲ್ಲಿ ಹಾಗೂ ಮತ್ತೊಂದು ಕೈಯಲ್ಲಿ ರಕ್ತಸಿಕ್ತ ಕುಡಗೋಲು ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡ ಹೋಗುತ್ತಿರುವಾಗ ನೋಡಿದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಪರಾರಿಯಾಗಿರುವಾಗ ಬಂಧಿಸಲಾಯಿತು ಎಂದು ವರದಿ ತಿಳಿಸಿದೆ.
ಈ ಕ್ರೂರ ಕೃತ್ಯದ ಹಿಂದಿನ ಕಾರಣ ಅನಿಲ ತನ್ನ ಪತ್ನಿ ತನಗೆ ದ್ರೋಹ ಮಾಡಿದ್ದಾಳೆ ಎಂಬ ಅನುಮಾನವಾಗಿದೆ ಎಂದು ತೋರುತ್ತದೆ. ಆದಾಗ್ಯೂ, ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸಲು ಮತ್ತು ಈ ದುರಂತ ಘಟನೆಗೆ ಕಾರಣವಾದ ನಿಖರವಾದ ಸಂದರ್ಭಗಳನ್ನು ಕಂಡುಹಿಡಿಯಲು ಪೊಲೀಸ್ ತನಿಖೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ಎಸ್‌ಐಆರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ ನಟ ಇಮ್ರಾನ್ ಖಾನ್‌ಗೆ ಭಾರತ ತೊರೆಯಲು ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement