ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣ

ಬೆಂಗಳೂರು : ಬೆಂಗಳೂರು ನಗರಾದ್ಯಂತ 73.75 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೆಟ್ರೋ ನಿಲ್ದಾಣ, ರೈಲು ಸೇರಿದಂತೆ ವಿವಿಧೆಡೆ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪ್ರಯಾಣಿಕರಿಗೆ ‘ಸೆಲ್ಫಿ ಪಾಯಿಂಟ್‌’ ಅನ್ನು ನಿರ್ಮಿಸಿದೆ.
ಬೆಂಗಳೂರು ನಮ್ಮ ಮೆಟ್ರೋ ಹಸಿರು ಮಾರ್ಗ ವ್ಯಾಪ್ತಿಯಲ್ಲಿ ಬರುವ ಬನಶಂಕರಿ ಹಾಗೂ ಕೋಣನಕುಂಟೆ ಮೆಟ್ರೋ ನಿಲ್ದಾಣಗಳಲ್ಲಿ ಈ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ. ಗೋಡೆಯ ಮೇಲೆ ಹಸಿರು ಹೊದಿಕೆಯಂತೆ ಕಾಣುವ ಬೋರ್ಡ್ ರೀತಿಯ ಪರದೆ ಹಾಕಿ, ಅದರ ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ಮೊಬೈಲ್‌ನಲ್ಲೇ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸೆಲ್ಫಿ ಪಾಯಿಂಟ್​ಗಾಗಿ ಹೆಚ್ಚು ಸ್ಥಳ ಮೀಸಲು ಇಡಲಾಗಿದೆ.
ಕೋಣಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದಲ್ಲಿ ಸೆಲ್ಪಿ ಪಾಯಿಂಟ್ ಗಾಗಿ ಹೆಚ್ಚು ಸ್ಥಳ ಮೀಸಲಿಡಲಾಗಿದೆ ಎಂಬುದು ಚಿತ್ರದಿಂದ ತಿಳಿದು ಬರುತ್ತಿದೆ. ಬನಶಂಕರಿ ಮೆಟ್ರೋ ನಿಲ್ದಾಣದಲ್ಲೂ ಸಹ ಇದೇ ರೀತಿ ಮಾಡಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement