ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ದಂಪತಿಗೆ ಗಂಡು ಮಗು ಜನನ : ಮಗುವಿಗೆ ವಿಭಿನ್ನ ಹೆಸರಿಟ್ಟ ದಂಪತಿ

ನವದೆಹಲಿ: ಭಾರತ ತಂಡದ ಅಗ್ರಮಾನ್ಯ ಬ್ಯಾಟರ್‌ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ತಮ್ಮ ಎರಡೂ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕೊಹ್ಲಿ ಮತ್ತು ಅನುಷ್ಕಾ ಫೆಬ್ರವರಿ 15 ರಂದು ಗಂಡು ಮಗುವಿಗೆ ಜನಿಸಿದೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಅವರ ಗೌಪ್ಯತೆಯನ್ನು ಗೌರವಿಸುವಂತೆ ಈ ಜೋಡಿಯು ಅಭಿಮಾನಿಗಳಿಗೆ ವಿನಂತಿಸಿದೆ.
ಫೆಬ್ರವರಿ 15 ರಂದು, ನಾವು ನಮ್ಮ ಗಂಡು ಮಗು ಮತ್ತು ಮಗಳು ವಾಮಿಕಾಳ ಚಿಕ್ಕ ಸಹೋದರ ʼಅಕಾಯ್ʼ ನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.

“ನಮ್ಮ ಜೀವನದ ಈ ಸುಂದರ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ನಾವು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ದಯೆಯಿಂದ ಗೌರವಿಸುವಂತೆ ನಾವು ವಿನಂತಿಸುತ್ತೇವೆ.” ಪ್ರೀತಿ ಮತ್ತು ಕೃತಜ್ಞತೆ. ವಿರಾಟ್ ಮತ್ತು ಅನುಷ್ಕಾ ಎಂದು ಅನುಷ್ಕಾ ಶರ್ಮಾ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಾರಾ ಜೋಡಿಗೆ 11 ಜನವರಿ 2021 ರಂದು ಪುತ್ರಿ ವಾಮಿಕಾ ಜನನವಾಯಿತು. ಈಗ ಎರಡನೇ ಮಗು ಅಕಾಯ್‌ ಜನನವಾಗಿದೆ.

ಪ್ರಮುಖ ಸುದ್ದಿ :-   ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ ; ಶುಭಮನ್ ಗಿಲ್ ನೂತನ ನಾಯಕ

ಅಕಾಯ್ ಹೆಸರಿನ ಅರ್ಥವೇನು?
ಅಕಾಯ್ ಎಂಬ ಹೆಸರು ಟರ್ಕಿಶ್ ಮೂಲದ ಹಿಂದಿ ಹೆಸರು. ಗೂಗಲ್ ಸರ್ಚ್ ಇಂಜಿನ್ ಪ್ರಕಾರ, ಈ ಹೆಸರಿನ ಅರ್ಥ “ಹುಣ್ಣಿಮೆಯ ಬೆಳಕನ್ನು ಬೆಳಗಿಸುವುದು” ಎಂದರ್ಥ. ಸಂಸ್ಕೃತ ಭಾಷೆಯ ಪ್ರಕಾರ, ಅಕಾಯ್ ಎಂಬ ಹೆಸರು “ಅಮರ” ಅಥವಾ “ಕೊಳೆಯದ” ಎಂದರ್ಥ ನೀಡುತ್ತದೆ. ಇದು ದಂಪತಿಯ ಸಾಂಸ್ಕೃತಿಕ ಬೇರುಗಳು ಮತ್ತು ಸಾಂಪ್ರದಾಯಿಕ ಭಾರತೀಯ ಹೆಸರುಗಳ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುವ ವಿಶಿಷ್ಟ ಮತ್ತು ಅರ್ಥಪೂರ್ಣ ಹೆಸರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement