ನಟ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ ನಿಧನ

ಬೆಂಗಳೂರು : ಕನ್ನಡದ ಹಿರಿಯ ನಟ ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ (71 ವರ್ಷ) ನಿಧನರಾಗಿದ್ದಾರೆ.
ಫೆ.3ರಂದು ಅನಾರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕೆ ಶಿವರಾಮ ಅವರು ದಾಖಲಾಗಿದ್ದರು. ಅವರಿಗೆ ಬಿಪಿ ಸಮಸ್ಯೆ ಇತ್ತು. ಆದರೆ 5-6 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ವಿಪರೀತ ಏರುಪೇರು ಕಂಡುಬಂದಿತ್ತು. ನಂತರ ಹೃದಯಾಘಾತವಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.
ರಾಮನಗರ ಜಿಲ್ಲೆಯ ಉರಗಹಳ್ಳಿಯ ಕೆಂಪಯ್ಯ ಮತ್ತು ಚಿಕ್ಕ ಬೋರಮ್ಮ ದಂಪತಿಗೆ 1953ರಲ್ಲಿ ಜನಿಸಿದ ಕೆ ಶಿವರಾಮ ತಂದೆ ನಾಟಕ ಕಲಾವಿದರಾಗಿದ್ದರು. ಬಾಲ್ಯದಲ್ಲಿ ತಮ್ಮ ಗ್ರಾಮದಲ್ಲೇ ಶಿಕ್ಷಣ ಪಡೆದ ಕೆ ಶಿವರಾಮ ಅವರಿಗೆ 1973ರಲ್ಲಿ ಅವರಿಗೆ ಸರ್ಕಾರಿ ನೌಕರಿ ಕೂಡ ಸಿಕ್ಕಿತ್ತು. ಕೆಲಸ ಮಾಡುತ್ತಲೇ ಅವರು ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು.
ಕೆ ಶಿವರಾಮ ಅವರು 1985ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಪಾಸಾಗಿದ್ದರು. ಆನಂತರ 1986ರಲ್ಲಿ ಐಎಎಸ್ ಪರೀಕ್ಷೆಯನ್ನು ಕೂಡ ಬರೆದಿದ್ದರು. ಪರಿಶಿಷ್ಟ ಜಾತಿ ಸಮುದಾಯದಿಂದ ಪರೀಕ್ಷೆ ಅಭ್ಯರ್ಥಿಗಳಲ್ಲಿ ಕೆ ಶಿವರಾಮ ಪ್ರಥಮ ರ್ಯಾಂಕ್‌ ಪಡೆದಿದ್ದರು. ಅವರು ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದವರಲ್ಲಿ ಮೊದಲಿಗರು.

ಪ್ರಮುಖ ಸುದ್ದಿ :-   ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

2013ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು ಆನಂತರ ಜೆಡಿಎಸ್‌ ಸೇರ್ಪಡೆಯಾಗಿದ್ದರು. 2013ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಸ್ಪರ್ಧಿಸಿ, ಸೋತಿದ್ದರು. ನಂತರ ಅವರು ಬಿಜೆಪಿ ಸೇರಿದ್ದರು. ಅವರು ಛಲವಾದಿ ಮಹಾಸಭಾ ಅಧ್ಯಕ್ಷರು ಕೂಡ ಆಗಿದ್ದರು.
ಕೆ ಶಿವರಾಮ ಅವರು 1993ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಅವರು ಹೀರೋ ಆಗಿ ನಟಿಸಿದ್ದ ಮೊದಲ ಸಿನಿಮಾ ‘ಬಾ ನಲ್ಲೆ ಮಧುಚಂದ್ರಕೆ’ ಆ ಕಾಲಕ್ಕೆ ದೊಡ್ಡ ಹಿಟ್ ಆಗಿತ್ತು. ನಂತರ ‘ವಸಂತ ಕಾವ್ಯ’, ‘ಸಾಂಗ್ಲಿಯಾನಾ ಪಾರ್ಟ್ 3’, ‘ಪ್ರತಿಭಟನೆ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ನಾಗ’, ‘ಓ ಪ್ರೇಮ ದೇವತೆ’ ಸಿನಿಮಾಗಳಲ್ಲಿ ನಟಿಸಿದ್ದರು. ಅವರ ಕೊನೆಯ ಸಿನೆಮಾ ಅಳಿಯ ಪ್ರದೀಪ ಹೀರೋ ಆಗಿದ್ದ ‘ಟೈಗರ್’ ಸಿನಿಮಾದಲ್ಲಿ ಕೆ ಶಿವರಾಮ್ ಬಣ್ಣ ಹಚ್ಚಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement