ವೀಡಿಯೊ..| ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ : ಬಸ್ಸಿನಲ್ಲಿ ಬಂದವ ಇಡ್ಲಿ ತಿಂದು, ಬಾಂಬ್‌ ಇಟ್ಟು ಹೋದ ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು : ಶನಿವಾರ ಹೊರಬಿದ್ದ ಮತ್ತೊಂದು ಸಿಸಿಟಿವಿ ದೃಶ್ಯಾವಳಿಯಲ್ಲಿ ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿ ತೀವ್ರ ಸ್ಫೋಟಕ ಸಾಧನವಿದ್ದ ಬ್ಯಾಗ್‌ ಹೊತ್ತುಕೊಂಡು ರೆಸ್ಟೋರೆಂಟ್ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸಿದೆ.
ಶುಕ್ರವಾರ ನಡೆದ ಸ್ಫೋಟದ ನಂತರ 10 ಮಂದಿ ಗಾಯಗೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು 7–8 ತಂಡಗಳನ್ನು ರಚಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್ ಪ್ರದೇಶದಲ್ಲಿ ನೆಲೆಗೊಂಡಿರುವ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ಕಡಿಮೆ ತೀವ್ರತೆಯ ಐಇಡಿ ಬಾಂಬ್ ಸ್ಫೋಟವನ್ನು ಟೈಮರ್ ಬಳಸಿ ಮೂಲಕ ನಡೆಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಭಯೋತ್ಪಾದನಾ ನಿಗ್ರಹ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್‌ಎಸ್‌ಜಿ) ತಂಡವು ಶನಿವಾರ ಬೆಳಿಗ್ಗೆ ಸ್ಫೋಟದ ಸ್ಥಳವನ್ನು ಪರಿಶೀಲಿಸಲು ಆಗಮಿಸಿದೆ.

ಹೊಸ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಶಂಕಿತ ವ್ಯಕ್ತಿ ಬಿಳಿ ಟೋಪಿ ಮತ್ತು ಮಾಸ್ಕ್‌ ಧರಿಸಿ, ಭುಜದ ಚೀಲವನ್ನು ಹೊತ್ತುಕೊಂಡು ಕೆಫೆಯತ್ತ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ.
ಶುಕ್ರವಾರ ಪೊಲೀಸರು ಸಿಸಿಟಿವಿ ದೃಶ್ಯಾವಳಿಯ ಮೂಲಕ ಆರೋಪಿಯನ್ನು ಗುರುತಿಸಿದ್ದರು. ಆತ ಚೀಲವನ್ನು ಕೆಫೆಯ ಪಕ್ಕದಲ್ಲಿ ಇರಿಸಿ ಹೊರಟುಹೋಗಿದ್ದ. ಒಂದು ಗಂಟೆಯ ನಂತರ ಸ್ಫೋಟ ಸಂಭವಿಸಿದೆ. ಪೊಲೀಸರ ಪ್ರಕಾರ, ಶಂಕಿತ ಬ್ಯಾಗ್‌ ಅನ್ನು ಕೆಫೆಯಲ್ಲಿ ಇರಿಸಿ ಸ್ಫೋಟ ಸಂಭವಿಸುವ ಮೊದಲು ಹೊರಟುಹೋಗಿದ್ದಾನೆ. ಶಂಕಿತನ ಜೊತೆಗೆ ಕಾಣಿಸಿಕೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಮುಖ ಶಂಕಿತ, ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿದ್ದ, ಕನ್ನಡಕ ಧರಿಸಿದ್ದ ಮತ್ತು ಕ್ಯಾಪ್‌ ಹಾಕಿಕೊಂಡಿದ್ದ, ಕೆಫೆಯೊಳಗೆ ಬಂದು ಸಿಂಗಲ್‌ ಪ್ಲೇಟ್‌ ಇಡ್ಲಿ ತಿಂದ ನಂತರ ಬ್ಯಾಗ್‌ ಇಟ್ಟು ಹೋಗಿದ್ದಾನೆ. ಆತ ಇಡ್ಲಿಗಳ ಪ್ಲೇಟ್‌ ಹಿಡಿದುಕೊಂಡಿರುವುದು ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಶಂಕಿತ ವ್ಯಕ್ತಿ ಬಿಎಂಟಿಸಿ ಬಸ್‌ನಲ್ಲಿ ಸ್ಥಳಕ್ಕೆ ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. “ನಾವು ಹಲವಾರು ತಂಡಗಳನ್ನು ರಚಿಸಿದ್ದೇವೆ, ನಾವು ಸಿಸಿಟಿವಿ ದೃಶ್ಯಗಳಿಂದ ಕೆಲವು ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಆತ ಬಸ್‌ನಲ್ಲಿ ಬಂದಿದ್ದಾನೆ ಎಂದು ನಮಗೆ ಮಾಹಿತಿ ಇದೆ. ನಾವು ಆರೋಪಿಯನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಕೇಂದ್ರ ಅಪರಾಧ ವಿಭಾಗ (CCB) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿಯಲ್ಲಿ ತನಿಖೆ ಮತ್ತು ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಬೆಂಗಳೂರು ಪೊಲೀಸರೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ಈ ಘಟನೆಯ ತನಿಖೆ ನಡೆಸುತ್ತಿದೆ. ಏಳರಿಂದ ಎಂಟು ತಂಡಗಳನ್ನು ರಚಿಸಲಾಗಿದ್ದು, ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚುವುದು ಪ್ರಮುಖ ಆದ್ಯತೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ಸ್ಫೋಟದ ತನಿಖೆ ನಡೆಸುತ್ತಿರುವ ಪೊಲೀಸರು, ರೆಸ್ಟೋರೆಂಟ್‌ನೊಳಗೆ ಬಾಂಬ್ ಇಟ್ಟ ವ್ಯಕ್ತಿಯನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ಚಾಲಿತ ಮುಖ ಗುರುತಿಸುವ ತಂತ್ರಜ್ಞಾನ (AI powered facial recognition technology)ವನ್ನು ಬಳಸಾಗುತ್ತಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ 12:50 ರಿಂದ 1 ಗಂಟೆಯ ನಡುವೆ ಸ್ಫೋಟಗೊಂಡ ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಬಾಂಬ್ ಸ್ಫೋಟ ಎಂದು ಖಚಿತಪಡಿಸಿದ್ದಾರೆ. ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement