ಅಡಕೆ ಬಗ್ಗೆ ಯಾವ ಆತಂಕವೂ ಬೇಡ : ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ

ಶಿರಸಿ : ಮಾರುಕಟ್ಟೆಯಲ್ಲಿ ಅಡಕೆ ದರ ಏರಿಳಿತದ ಕುರಿತು ಕೆಲ‌ವು ಸುಳ್ಳು ವದಂತಿಗಳು ಹರಿದಾಡುತ್ತಿದ್ದು, ಈ ವದಂತಿಗಳಿಗೆ ಅಡಕೆ ಬೆಳೆಗಾರರಿಗೆ ಯಾವುದೇ ಆತಂಕ ಬೇಡ ಎಂದು ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದ್ದಾರೆ.
ಮಂಗಳವಾರ ನಗರದ ಟಿಎಸ್‌ಎಸ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ದರದ ಕುರಿತು ಕೆಲವೊಂದು ತಪ್ಪು ಮಾಹಿತಿ ಹರಿದಾಡುತ್ತಿದೆ. ಕೆಲವು ವಿಷಯಗಳು ಸತ್ಯಕ್ಕೆ ದೂರವಾಗಿದೆ. ಬೇರೆ ದೇಶಗಳಿಂದ ಅಡಕೆ ಅಕ್ರಮ ಆಮದು ನಿರ್ಬಂಧಿಸಲು ಕೇಂದ್ರ ಸಚಿವರು ಸೂಚಿಸಿದ್ದಾರೆ. ಶ್ರೀಲಂಕಾ ಮೂಲಕ ಅಡಕೆ ಆಮದಾಗುತ್ತಿಲ್ಲ. ಐದು‌ ಲಕ್ಷ ಟನ್ ಅಡಕೆ ಆಮದಿಗೆ ಒಪ್ಪಂದವಾಗಿದೆ ಎಂದು ಹೇಳುತ್ತಾರೆ. ಅದರ ಸತ್ಯಾಸತ್ಯತೆ ಅರ್ಥವಾಗುತ್ತಿಲ್ಲ. ಆದರೆ ಶ್ರೀಲಂಕಾದಿಂದ ಆಮದಾಗುವ ಅಡಕೆ‌ಗೆ ನಿರ್ಬಂಧವಿದೆ. ಆಮದು ಅಡಕೆಗೆ ಸಂಬಂಧಿಸಿದಂತೆ ಅಡಕೆ ಯಾವುದೇ ಹೆಸರಿನಲ್ಲಿ ಅಡಕೆ ಆಮದು ಆದರೂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಡಕೆ ಮಹಾಮಂಡಳಿಯ‌ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದರು.

ಇಲ್ಲಿನ ಅಡಕೆ ಗುಣಮಟ್ಟಕ್ಕೂ ಉಳಿದ ದೇಶದ ಅಡಿಕೆ ಗುಣಮಟ್ಟಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ೩೬ ಸಾವಿರ ಹೆಕ್ಟೇರನಲ್ಲಿ ೪೭ ಸಾವಿರ ಟನ್ ಅಡಿಕೆ ಬೆಳೆಯಲಾಗುತ್ತದೆ ಎಂದರು.
ಅಡಕೆ ಗುಣಮಟ್ಟ‌ ಇದ್ದರೆ ಖರೀದಿ ಮಾಡುತ್ತೇವೆ. ಈಗಾಗಲೇ ೭೯ ಸಾವಿರ ಕ್ವಿಂಟಲ್ ಅಡಕೆ ಖರೀದಿ ಮಾಡಿದ್ದೇವೆ. ಹೊರ ರಾಜ್ಯದಲ್ಲೂ ಟಿಎಸ್ಎಸ್ ಅಡಕೆ ಘಟಕ ತೆರೆಯಲಾಗಿದೆ ಎಂದರು. ಅಡಕೆ ಗುಣಮಟ್ಟ ಹಾಳಾಗಬಾರದು. ರೈತರು ಅದನ್ನೂ ಗಮನಿಸಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎನ್.ಭಟ್ಟ ತೋಟಿಮನೆ, ನಿರ್ದೇಶಕ ಗಜಾನನ ಜೋಶಿ, ಪ್ರಭಾರಿ ವ್ಯವಸ್ಥಾಪಕ ವಿಜಯಾನಂದ ಭಟ್ಟ ಇದ್ದರು.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement