ಬೆಂಗಳೂರು : ಯುವಕನೊಬ್ಬನ ಹುಚ್ಚಾಟಕ್ಕೆ ಬೆಂಗಳೂರಿನ ನಮ್ಮ ಮೆಟ್ರೋ ಸೇವೆ ಸರಿಸುಮಾರು ಅರ್ಧ ಘಂಟೆ ಸ್ಥಗಿತಗೊಂಡ ಪ್ರಸಂಗ ನಡೆದ ವರದಿಯಾಗಿದೆ.
ಬೆಂಗಳೂರಿನ ಜ್ಞಾನಭಾರತಿ ಸ್ಟೇಷನ್ನಿಂದ ಪಟ್ಟಣಗೆರೆ ಸ್ಟೇಷನ್ ನಡುವೆ ಮೆಟ್ರೋ ಹಳಿಯಲ್ಲಿ ಯುವಕನೊಬ್ಬ ಮನಬಂದಂತೆ ಓಡಾಡಿದ್ದಾನೆ. ಹಳಿ ಮೇಲೆ ಯುವಕನ ಓಡಾಟವನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಮೈಸೂರು ರಸ್ತೆ ನಿಲ್ದಾಣದಿಂದ ಚಲ್ಲಘಟ್ಟ ನಡುವಿನ ನೇರಳೆ ಮಾರ್ಗದಲ್ಲಿ ಸುಮಾರು ಅರ್ಧ ಗಂಟೆ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು.
ಯುವಕ ಮೆಟ್ರೋ ಹಳಿ ಮೇಲೆ ಓಡಾಡುವುದು ಕಂಡು ಬರುತ್ತಿದ್ದಂತೆ ಮೆಟ್ರೋ ಹಳಿಗಳ ಬಳಿ ಹೈವೊಲ್ಟೇಜ್ ವಿದ್ಯುತ್ ಇರುವುದರಿಂದ ಬಿಎಂಆರ್ಸಿಎಲ್ ಅಧಿಕಾರಿಗಳು ಮೊದಲು ಪವರ್ ಆಫ್ ಮಾಡಿಸಿದ್ದಾರೆ. ಸುಮಾರು 27 ನಿಮಿಷಗಳ ಕಾಲ ಮೆಟ್ರೋ ಸೇವೆ ಸ್ಥಗಿತಗೊಳಿಸಿದ್ದಾರೆ. ನಂತರ ಬಿಎಂಆರ್ಸಿಎಲ್ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಂತರ ಎಂದಿನಂತೆ ಮೆಟ್ರೋ ಸೇವೆ ಆರಂಭಗೊಳಿಸಲಾಗಿದೆ
ನಿಮ್ಮ ಕಾಮೆಂಟ್ ಬರೆಯಿರಿ