ಲೋಕಸಭಾ ಚುನಾವಣೆ : ಬಿಜೆಪಿ ಸ್ಟಾರ್​ ಪ್ರಚಾರಕರ ಪಟ್ಟಿ ಪ್ರಕಟ

ಬೆಂಗಳೂರು : ಲೋಕಸಭಾ ಚುನಾವಣೆಗಾಗಿ ಭಾರೀ ಸಿದ್ಧತೆ ನಡೆಸಿರುವ ಬಿಜೆಪಿ ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡಿದೆ. ಅದು ತನ್ನ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 40 ಜನ ಸ್ಟಾರ್‌ ಪ್ರಚಾರಕರ ಪಟ್ಟಿಯು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಒಳಗೊಂಡಿದೆ.
ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಶಿವಮೊಗ್ಗದಿಂದ ಬಂಡಾಯವಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಕೆ.ಎಸ್‌. ಈಶ್ವರಪ್ಪ ಅವರನ್ನು ಕೈಬಿಡಲಾಗಿದೆ. ಇದೇವೇಳೆ ಟಿಕೆಟ್‌ ವಂಚಿತರಾದ ಮಾಜಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ, ಪ್ರತಾಪ್‌ ಸಿಂಹ ಅವರ ಹೆಸರು ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಪ್ರಚಾರಕರ ಪಟ್ಟಿಯು 10 ಕೇಂದ್ರ ಸಚಿವರು, ಮೂರು ಮುಖ್ಯಮಂತ್ರಿಗಳನ್ನು ಒಳಗೊಂಡಿದೆ.

ಕರ್ನಾಟಕ ಲೋಕಸಭಾ ಚುನಾವಣೆಯ ಸ್ಟಾರ್‌ ಪ್ರಚಾರಕರ ಪಟ್ಟಿ
ನರೇಂದ್ರ ಮೋದಿ
ಜೆ.ಪಿ. ನಡ್ಡಾ
ಅಮಿತ್‌ ಶಾ
ಬಿ.ಎಸ್‌. ಯಡಿಯೂರಪ್ಪ
ರಾಜನಾಥ ಸಿಂಗ್‌
ಯೋಗಿ ಆದಿತ್ಯನಾಥ
ಹಿಮಂತ್‌ ಬಿಸ್ವಾ ಶರ್ಮಾ
ಪ್ರಮೋದ್‌ ಸಾವಂತ್‌
ನಿರ್ಮಲಾ ಸೀತಾರಾಮನ್‌
ಎಸ್‌. ಜೈಶಂಕರ
ಸ್ಮೃತಿ ಇರಾನಿ
ನಿತಿನ್‌ ಗಡ್ಕರಿ
ಪ್ರಹ್ಲಾದ ಜೋಶಿ
ದೇವೇಂದ್ರ ಫಡ್ನವಿಸ್‌
ಕೆ ಅಣ್ಣಾಮಲೈ
ರಾಧಾ ಮೋಹನದಾಸ್‌ ಅಗರ್ವಾಲ್‌
ಬಿ.ವೈ. ವಿಜಯೇಂದ್ರ
ಡಿ.ವಿ. ಸದಾನಂದಗೌಡ
ಜಗದೀಶ ಶೆಟ್ಟರ
ಸಿ.ಟಿ. ರವಿ
ಬಸನಗೌಡ ಪಾಟೀಲ ಯತ್ನಾಳ
ಪ್ರತಾಪ ಸಿಂಹ
ನಳಿನಕುಮಾರ ಕಟೀಲು
ಎ ನಾರಾಯಣಸ್ವಾಮಿ
ಶೋಭಾ ಕರಂದ್ಲಾಜೆ
ಆರ್‌. ಅಶೋಕ
ಬಸವರಾಜ ಬೊಮ್ಮಾಯಿ
ಸುಧಾಕರ ರೆಡ್ಡಿ
ಗೋವಿಂದ ಕಾರಜೋಳ
ಡಾ ಸಿ.ಎನ್‌. ಅಶ್ವತ್ಥ ನಾರಾಯಣ
ಬಿ. ಶ್ರೀರಾಮುಲು
ಅರವಿಂದ ಲಿಂಬಾವಳಿ
ವಿ ಸುನೀಲಕುಮಾರ
ಜಿ.ವಿ. ರಾಜೇಶ
ಪಿ ರಾಜೀವ
ಪ್ರೀತಂ ಗೌಡ
ಬೈರತಿ ಬಸವರಾಜ್‌
ಪ್ರಮೋದ ಮಧ್ವರಾಜ್‌
ಛಲವಾದಿ ನಾರಾಯಣಸ್ವಾಮಿ
ಎನ್‌. ಮಹೇಶ

ಪ್ರಮುಖ ಸುದ್ದಿ :-   ಪೆನ್‌ ಡ್ರೈವ್ ಪ್ರಕರಣ : 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ಪ್ರಜ್ವಲ್‌ , ಎಚ್‌ಡಿ ರೇವಣ್ಣಗೆ ಎಸ್‌ಐಟಿ ನೋಟಿಸ್‌ ; ವರದಿ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement