ಲೋಕಸಭೆ ಚುನಾವಣೆ : ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ (Congress)ನಿಂದ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದೆ.
ರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ ಒಟ್ಟು 40 ಸ್ಟಾರ್‌ ಪ್ರಚಾರಕರ ಹೆಸರನ್ನು ಘೋಷಣೆ ಮಾಡಿದೆ. ಪಟ್ಟಿಯಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಹ ಸೇರಿದ್ದಾರೆ. ಈ ಪಟ್ಟಿಯಲ್ಲಿ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್‌ ಅವರ ಹೆಸರೂ ಇದೆ. ವಿಧಾನಸೌಧದಲ್ಲಿ ಅವರ ಕೆಲ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದ ನಂತರ ವಿವಾದ ಸೃಷ್ಟಿಯಾಗಿತ್ತು. ಅವರು ಪಕ್ಷದ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಅಲ್ಲದೆ ಟಿಕೆಟ್ ವಂಚಿತ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹಾಗೂ ಎಲ್. ಹನುಮಂತಯ್ಯ ಅವರ ಹೆಸರುಗಳು ಸಹ ಪಟ್ಟಿಯಲ್ಲಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ತೊಡೆತಟ್ಟಿದ್ದ ಬಿ.ಕೆ.ಹರಿಪ್ರಸಾದ ಅವರೂ ಪಟ್ಟಿಯಲ್ಲಿದ್ದಾರೆ.

ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕ ಪಟ್ಟಿ…
ಮಲ್ಲಿಕಾರ್ಜುನ ಖರ್ಗೆ
ಸೋನಿಯಾ ಗಾಂಧಿ
ರಾಹುಲ್ ಗಾಂಧಿ
ಪ್ರಿಯಾಂಕಾ ಗಾಂಧಿ
ಮುಖ್ಯಮಂತ್ರಿ ಸಿದ್ದರಾಮಯ್ಯ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ
ರಣದೀಪ್ ಸಿಂಗ್ ಸುರ್ಜೆವಾಲಾ
ಕೆ.ಸಿ.ವೇಣುಗೋಪಾಲ
ಜೈರಾಮ ರಮೇಶ
ವೀರಪ್ಪ ಮೊಯ್ಲಿ
ಬಿ.ವಿ. ಶ್ರೀನಿವಾಸ
ಲಕ್ಷ್ಮಣ ಸವದಿ
ಈಶ್ವರ್ ಖಂಡ್ರೆ
ವಿನಯಕುಮಾರ ಸೊರಕೆ
ಬಿ.ಕೆ. ಹರಿಪ್ರಸಾದ
ಡಾ.ಜಿ. ಪರಮೇಶ್ವರ
ಎಚ್.ಕೆ. ಪಾಟೀಲ
ಎಂ.ಬಿ. ಪಾಟೀಲ
ದಿನೇಶ ಗುಂಡೂರಾವ್
ಕೃಷ್ಣ ಭೈರೇಗೌಡ
ಝಮೀರ್ ಅಹಮದ್ ಖಾನ್
ಮಧು ಬಂಗಾರಪ್ಪ
ಸತೀಶ ಜಾರಕಿಹೊಳಿ
ಕೆ.ಜೆ.ಜಾರ್ಜ್‌
ಆರ್.ವಿ. ದೇಶಪಾಂಡೆ
ಎಚ್.ಎಂ. ರೇವಣ್ಣ
ಪಿಜಿಆರ್ ಸಿಂಧ್ಯಾ
ಬಿ. ಸೋಮಶೇಖರ
ಎಲ್. ಹನುಮಂತಯ್ಯ
ಜಿ.ಸಿ. ಚಂದ್ರಶೇಖರ
ಸೈಯದ್ ನಾಸಿರ್ ಹುಸೇನ್
ಅಭಿಷೇಕ ದತ್
ಪಿ.ಟಿ. ಪರಮೇಶ್ವರ ನಾಯಕ್
ವಿ.ಎಸ್. ಉಗ್ರಪ್ಪ
ತನ್ವೀರ್ ಸೇಠ್
ಪುಷ್ಪಾ ಅಮರನಾಥ
ಉಮಾಶ್ರೀ‌
ಮಯೂರ ಜಯಕುಮಾರ

ಪ್ರಮುಖ ಸುದ್ದಿ :-   ಜಗತ್ತಿಗೆ ಹೇಳುವ ಮೊದಲೇ ಪಾಕಿಸ್ತಾನಕ್ಕೆ ತಿಳಿಸಿದ್ದೆ ; ಬಾಲಾಕೋಟ್ ಸ್ಟ್ರೈಕ್ ಬಗ್ಗೆ ಬಿಚ್ಚಿಟ್ಟ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement