ಅತಿಹೆಚ್ಚು ಆದಾಯ ಪಡೆದ ಮುಜರಾಯಿ ದೇವಾಲಯಗಳ ಪಟ್ಟಿ ಬಿಡುಗಡೆ ; ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 1ನೇ ಸ್ಥಾನ : ರಾಜ್ಯದ 8 ಶ್ರೀಮಂತ ದೇವಾಲಯಗಳು..

ಬೆಂಗಳೂರು : 2023-24ರಲ್ಲಿ ಅತಿಹೆಚ್ಚು ಆದಾಯ ಕಂಡ ಮುಜರಾಯಿ ಇಲಾಖೆಯ ದೇವಾಲಯಗಳ ಮಾಹಿತಿಯನ್ನು ಇಲಾಖೆ ಆಯುಕ್ತರು ಬಿಡುಗಡೆಗೊಳಿಸಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಆರ್ಥಿಕ ವರ್ಷದಲ್ಲಿ ₹146.01 ಕೋಟಿ ಆದಾಯ ಗಳಿಸಿದೆ ಎಂದು ಮುಜರಾಯಿ ಆಯುಕ್ತರು ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಹಿಂದಿನ ವರ್ಷ ₹ 123 ಕೋಟಿ ಆದಾಯ ಗಳಿಸಿತ್ತು. 2023-24ನೇ ಆರ್ಥಿಕ ವರ್ಷದಲ್ಲಿ ಆದಾಯದಲ್ಲಿ 23.1 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

2006-07ರಲ್ಲಿ ದೇವಳದ ಆದಾಯವು ₹ 19.76 ಕೋಟಿ ಆಗಿತ್ತು. 2007-08ರಲ್ಲಿ ₹ 24.44 ಕೋಟಿಗೆ ಹೆಚ್ಚಾಗಿ ರಾಜ್ಯದ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿತ್ತು. 2008-09ರಲ್ಲಿ ₹ 31 ಕೋಟಿ, 2009-10ರಲ್ಲಿ ₹ 38.51 ಕೋಟಿ, 2011-12ರಲ್ಲಿ ₹ 56.24 ಕೋಟಿ, 2012-13ರಲ್ಲಿ ₹ 66.76 ಕೋಟಿ, 2013-14ರಲ್ಲಿ ₹ 68 ಕೋಟಿ, 2014-15ರಲ್ಲಿ ₹ 77.60 ಕೋಟಿ, 2015-16ರಲ್ಲಿ ₹ 88.83 ಕೋಟಿ 2016-17ರಲ್ಲಿ ₹ 89.65 ಕೋಟಿ, 2017-18ರಲ್ಲಿ ₹ 95.92 ಕೋಟಿ, 2018-19ರಲ್ಲಿ ₹ 92.09 ಕೋಟಿ, 2019-20ರಲ್ಲಿ ₹ 98.92 ಕೋಟಿ, 2020-21ರಲ್ಲಿ ₹ 68.94 ಕೋಟಿ, 2021-22ರಲ್ಲಿ ₹ 72.73 ಕೋಟಿ, 2022-23ನೇ ಸಾಲಿನಲ್ಲಿ ₹ 123 ಕೋಟಿ ಆದಾಯ ಗಳಿಸಿತ್ತು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

ಎರಡನೇ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿದೆ. ಇದು ₹ 68.23 ಕೋಟಿ ಆದಾಯಗಳಿಸಿದೆ.
ರಾಜ್ಯದ ಶ್ರೀಮಂತ ಎಂಟು ದೇವಾಲಯಗಳು…
1. ಸುಬ್ರಮಣ್ಯ ದೇವಾಲಯ, ಕುಕ್ಕೆ ( ದಕ್ಷಿಣ ಕನ್ನಡ ಜಿಲ್ಲೆ ) – 146.01 ಕೋಟಿ ರೂ.
2. ಮೂಕಾಂಬಿಕಾ ದೇವಾಲಯ, ಕೊಲ್ಲೂರು ( ಉಡುಪಿ ಜಿಲ್ಲೆ ) – 68.23 ಕೋಟಿ ರೂ.
3. ಶ್ರೀಕಂಠೇಶ್ವರ ದೇವಾಲಯ, ನಂಜನಗೂಡು ( ಮೈಸೂರು ಜಿಲ್ಲೆ ) – 30.73 ಕೋಟಿ ರೂ.
4. ರೇಣುಕಾ ಯಲ್ಲಮ್ಮ ದೇವಾಲಯ, ಸವದತ್ತಿ ( ಬೆಳಗಾವಿ ಜಿಲ್ಲೆ ) – 25.80 ಕೋಟಿ ರೂ.
5. ದುರ್ಗಾಪರಮೇಶ್ವರಿ ದೇವಾಲಯ, ಮಂದಾರ್ತಿ ( ಉಡುಪಿ ಜಿಲ್ಲೆ ) – 15.27 ಕೋಟಿ ರೂ.
6. ಹುಲಿಗಮ್ಮ ದೇವಾಲಯ, ಕೊಪ್ಪಳ ( ಕೊಪ್ಪಳ ಜಿಲ್ಲೆ ) – 16.29 ಕೋಟಿ ರೂ.
7. ಘಾಟಿ ಸುಬ್ರಮಣ್ಯ ದೇವಾಲಯ, ದೊಡ್ಡಬಳ್ಳಾಪುರ ( ಬೆಂಗಳೂರು ಗ್ರಾಮಾಂತರ ಜಿಲ್ಲೆ ) – 13.65 ಕೋಟಿ ರೂ.
8. ಬನಶಂಕರಿ ದೇವಾಲಯ, ಬೆಂಗಳೂರು ( ಬೆಂಗಳೂರು ನಗರ ಜಿಲ್ಲೆ ) – 11.37 ಕೋಟಿ

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಇತರರ ನಿವಾಸದ ಮೇಲೆ ಐಟಿ ದಾಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement