ಕೃಷ್ಣಾ ನದಿಗೆ ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

ವಿಜಯಪುರ: ಯುಗಾದಿ ಅಮಾವಾಸ್ಯೆ ನಿಮಿತ್ತ ಸೋಮವಾರ ದೇವರ ಪಲ್ಲಕ್ಕಿಯೊಂದಿಗೆ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ನದಿ ಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ನದಿ ಪಾಲಾದ ಬಾಲಕರನ್ನು ಕಾರಜೋಳ ಗ್ರಾಮದ ಸುದೀಪ ದೊಡ್ಡಮನಿ (12) ಹಾಗೂ ಶ್ರೀಧರ ದೊಡ್ಡಮನಿ (10) ಎಂದು ಗುರುತಿಸಲಾಗಿದೆ.

ಯುಗಾದಿ ಅಮಾವಾಸ್ಯೆ ನಿಮಿತ್ತ ‌ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಾರಜೋಳ ಗ್ರಾಮದಿಂದ ಕೃಷ್ಣಾ ನದಿಗೆ ದೇವಿಯ ಪಲ್ಲಕ್ಕಿ ಹೊತ್ತು, ದೇವಿಯ ಸ್ನಾನ ಮಾಡಿಸಿಕೊಂಡು ಬರಲು ಗ್ರಾಮಸ್ಥರು ತೆರಳಿದ್ದರು. ಮೃತ ಬಾಲಕರು ತಂದೆ- ತಾಯಿ ಜೊತೆ ನದಿಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕರ ಶವವನ್ನು ಪೊಲೀಸರು ಸ್ಥಳೀಯರ ನೆರವಿನೊಂದಿಗೆ ತೆಗೆದಿದ್ದಾರೆ.
ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement