ಲೋಕಸಭಾ ಚುನಾವಣೆ : ಕರ್ನಾಟಕದ 14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಕಣದಲ್ಲಿ ; ಕ್ಷೇತ್ರವಾರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು : ಏಪ್ರಿಲ್‌ 26ರಂದು ಕರ್ನಾಟಕದಲ್ಲಿ ಲೋಕಸಭೆಗೆ ನಡೆಯುವ ಮೊದಲ ಹಂತದಲ್ಲಿ ಚುನಾವಣೆಗೆ 14 ಕ್ಷೇತ್ರಗಳಲ್ಲಿ ನಾಮಪತ್ರ ವಾಪಸ್ ಪಡೆಯುವ ಗಡುವು ಸೋಮವಾರ ಮುಕ್ತಾಯಗೊಂಡಿದ್ದು, 247 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಲೋಕಸಭೆ ಚುನಾವಣೆಯ ಕರ್ನಾಟಕದ ಮೊದಲ ಹಂತದ ಅಖಾಡ ಸಿದ್ಧವಾಗಿದೆ.
ಏಪ್ರಿಲ್‌ 26ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 300 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು. 74 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಸೋಮವಾರ (ಏಪ್ರಿಲ್‌ 8) ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. 53 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಹೀಗಾಗಿ 14 ಲೋಕಸಭಾ ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳು ಕಣದಲ್ಲಿ ಉಳಿದರು. ಇವರಲ್ಲಿ 226 ಪುರುಷರು, 21 ಮಹಿಳೆಯರು ಸೇರಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅತ್ಯಧಿಕ 29 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಡಿಮೆ ಅಂದರೆ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೋಲಾರದ ಎಲ್ಲ 18, ಹಾಸನದ ಎಲ್ಲ 15 ಮತ್ತು ಉಡುಪಿ-ಚಿಕ್ಕಬಳ್ಳಾಪುರ ಕ್ಷೇತ್ರದ ಎಲ್ಲ 10 ಅಭ್ಯರ್ಥಿಗಳೂ ಪುರುಷರು. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದು, 8 ಪುರುಷರು ಮತ್ತು ಒಬ್ಬರು ಮಹಿಳೆಯಾಗಿದ್ದಾರೆ. ಉಳಿದಂತೆ ಚಿತ್ರದುರ್ಗದಲ್ಲಿ 20 (18 ಪುರುಷರು, 2 ಮಹಿಳೆಯರು), ತುಮಕೂರಿನಲ್ಲಿ 18 (17 ಪುರುಷರು, ಇಬ್ಬರು ಮಹಿಳೆಯರು), ಮಂಡ್ಯದಲ್ಲಿ 14 (13 ಪುರುಷ, ಓರ್ವ ಮಹಿಳೆ), ಮೈಸೂರಿನಲ್ಲಿ 18 (17 ಪುರುಷರು, ಓರ್ವ ಮಹಿಳೆ) ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಚಾಮರಾಜನಗರ ಕ್ಷೇತ್ರದಲ್ಲಿ 14 (13 ಪುರುಷರು, ಓರ್ವ ಮಹಿಳೆ), ಬೆಂಗಳೂರು ಗ್ರಾಮಾಂತರದಲ್ಲಿ 15 (14 ಪುರುಷರು, ಓರ್ವ ಮಹಿಳೆ), ಬೆಂಗಳೂರು ಉತ್ತರದಲ್ಲಿ 21 (15 ಪುರುಷರು, 6 ಮಹಿಳೆಯರು), ಬೆಂಗಳೂರು ಕೇಂದ್ರ-24 (21 ಪುರುಷರು, 3 ಮಹಿಳೆಯರು), ಬೆಂಗಳೂರು ದಕ್ಷಿಣ- 22 (19 ಪುರುಷರು, 3 ಮಹಿಳೆ), ಚಿಕ್ಕಬಳ್ಳಾಪುರ-29 (28 ಪುರುಷರು, ಓರ್ವ ಮಹಿಳೆ) ಅಭ್ಯರ್ಥಿಗಳಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

ಪ್ರಮುಖ ಪಕ್ಷಗಳ  ಎದುರಾಳಿ ಅಭ್ಯರ್ಥಿಗಳು..
ಬೆಂಗಳೂರು ಗ್ರಾಮಾಂತರ ಕ್ಷೇತ್ರ : ಡಾ ಸಿ.ಎನ್‌. ಮಂಜುನಾಥ (ಬಿಜೆಪಿ), ಡಿ.ಕೆ. ಸುರೇಶ (ಕಾಂಗ್ರೆಸ್‌)
ಬೆಂಗಳೂರು ಉತ್ತರ ಕ್ಷೇತ್ರ : ಶೋಭಾ ಕರಂದ್ಲಾಜೆ (ಬಿಜೆಪಿ), ಪ್ರೊ.ರಾಜೀವ ಗೌಡ (ಕಾಂಗ್ರೆಸ್‌)
ಬೆಂಗಳೂರು ಕೇಂದ್ರ ಕ್ಷೇತ್ರ : ಪಿ.ಸಿ. ಮೋಹನ (ಬಿಜೆಪಿ), ಮನ್ಸೂರ್‌ ಅಲಿಖಾನ್‌ (ಕಾಂಗ್ರೆಸ್‌)
ಬೆಂಗಳೂರು ದಕ್ಷಿಣ ಕ್ಷೇತ್ರ : ತೇಜಸ್ವಿ ಸೂರ್ಯ (ಬಿಜೆಪಿ), ಸೌಮ್ಯ ರೆಡ್ಡಿ (ಕಾಂಗ್ರೆಸ್‌)
ಚಿಕ್ಕಬಳ್ಳಾಪುರ ಕ್ಷೇತ್ರ : ಡಾ ಕೆ. ಸುಧಾಕರ (ಬಿಜೆಪಿ), ರಕ್ಷಾ ರಾಮಯ್ಯ (ಕಾಂಗ್ರೆಸ್‌)
ಕೋಲಾರ ಕ್ಷೇತ್ರ (SC): ಎಂ ಮಲ್ಲೇಶಬಾಬು (ಜೆಡಿಎಸ್), ಕೆ.ವಿ. ಗೌತಮ (ಕಾಂಗ್ರೆಸ್‌)
ತುಮಕೂರು ಕ್ಷೇತ್ರ : ವಿ. ಸೋಮಣ್ಣ (ಬಿಜೆಪಿ), ಎಸ್‌.ಪಿ. ಮುದ್ದಹನುಮೇಗೌಡ (ಕಾಂಗ್ರೆಸ್‌)
ಮಂಡ್ಯ ಕ್ಷೇತ್ರ : ಎಚ್‌.ಡಿ. ಕುಮಾರಸ್ವಾಮಿ (ಜೆಡಿಎಸ್), ಸ್ಟಾರ್‌ ಚಂದ್ರು (ಕಾಂಗ್ರೆಸ್‌)
ಮೈಸೂರು ಕ್ಷೇತ್ರ : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ (ಬಿಜೆಪಿ), ಎಂ ಲಕ್ಷ್ಮಣ (ಬಿಜೆಪಿ)
ಚಾಮರಾಜನಗರ ಕ್ಷೇತ್ರ (SC) : ಎಸ್‌ ಬಾಲರಾಜ (ಬಿಜೆಪಿ), ಸುನೀಲ ಬೋಸ್‌ (ಕಾಂಗ್ರೆಸ್‌)
ಉಡುಪಿ – ಚಿಕ್ಕಮಗಳೂರು ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ), ಡಾ. ಜಯಪ್ರಕಾಶ ಹೆಗ್ಡೆ (ಕಾಂಗ್ರೆಸ್‌)
ಹಾಸನ ಕ್ಷೇತ್ರ : ಪ್ರಜ್ವಲ ರೇವಣ್ಣ (ಜೆಡಿಎಸ್), ಶ್ರೇಯಸ್‌ ಪಟೇಲ್‌ (ಕಾಂಗ್ರೆಸ್‌)
ದಕ್ಷಿಣ ಕನ್ನಡ ಕ್ಷೇತ್ರ : ಕ್ಯಾ. ಬ್ರಿಜೇಶ್‌ ಚೌಟಾ (ಬಿಜೆಪಿ), ಪದ್ಮರಾಜ (ಕಾಂಗ್ರೆಸ್‌)
ಚಿತ್ರದುರ್ಗ ಕ್ಷೇತ್ರ (SC) : ಗೋವಿಂದ ಕಾರಜೋಳ (ಬಿಜೆಪಿ), ಬಿ.ಎನ್‌. ಚಂದ್ರಪ್ಪ (ಕಾಂಗ್ರೆಸ್‌)

ಪ್ರಮುಖ ಸುದ್ದಿ :-   ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​ ಕೇಸ್: ಎಸ್ಐಟಿ ತಂಡಕ್ಕೆ 18 ಸಿಬ್ಬಂದಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement