ದ್ವಿತೀಯ ಪಿಯುಸಿ 2024 ಫಲಿತಾಂಶ : ವಿಜ್ಞಾನ, ಕಲಾ, ವಾಣಿಜ್ಯ ಮೂರು ವಿಭಾಗಗಳಲ್ಲೂ ಬಾಲಕಿಯರಿಗೇ ಮೊದಲ ರ‍್ಯಾಂಕ್

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಫಲಿತಾಂಶದಲ್ಲಿ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಮೂರೂ ವಿಭಾಗಗಳಲ್ಲಿ ಬಾಲಕಿಯರೇ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಕಲಾ ವಿಭಾಗದಲ್ಲಿ ಬೆಂಗಳೂರು ಜಯನಗರದ ಎನ್‌ಎಂಕೆಆರ್‌ವಿ (NMKRV)ಯ ಮೇಧಾ ಡಿ , ವಿಜಯಪುರದ ಎಸ್‌.ಎಸ್‌. ಪಿಯು ಕಾಲೇಜಿನ ವೇದಾಂತ್ ಜ್ಞಾನುಭ ನವಿ ಹಾಗೂ ಬಳ್ಳಾರಿ ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ ತಲಾ 596 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡ ಕೆಇಬಿ ಪಿಯು ಕಾಲೇಜಿನ ರವೀನಾ ಸೋಮಪ್ಪ ಲಮಾಣಿ 595 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ತುಮಕೂರು ಕುವೆಂಪು ನಗರದ ವಿದ್ಯಾನಿಧಿ ಕಾಲೇಜಿನ ಗಾನವಿ 597 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಿವಮೊಗ್ಗ ಕುಮದ್ವತಿ ಪಿಯು ಕಾಲೇಜಿನ ಪವನ್ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹರ್ಷಿತ್ 596 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ಬೈರಿದೇವರಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾಲಕ್ಷ್ಮಿ 598 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮೈಸೂರಿನ ಉರ್ವಿಶ ಪ್ರಶಾಂತ ಹಾಗೂ ಉಡುಪಿಯ ವೈಭವಿ ಆಚಾರ್ಯ ತಲಾ 597 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ವಾಯುಭಾರ ಕುಸಿತ : ಕರ್ನಾಟಕದಲ್ಲಿ ಮೇ 24ರ ವರೆಗೆ ಭಾರಿ ಮಳೆ ಮುನ್ನೆಚ್ಚರಿಕೆ ; 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಫಲಿತಾಂಶದಲ್ಲಿ (2nd PUC Result) ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 3.59 ಲಕ್ಷ ವಿದ್ಯಾರ್ಥಿನಿಯರ ಪೈಕಿ 3.05 ಲಕ್ಷ ಮಂದಿ ಪಾಸ್, ಶೇಕಡಾವಾರು 84.87 ಮಂದಿ ಪಾಸ್ ಆಗಿದ್ದಾರೆ. ಕಳೆದ ವರ್ಷ ಇವರ ಪ್ರಮಾಣ ಶೇಕಡಾ 80.25 ಇತ್ತು. 3.21 ಲಕ್ಷ ಬಾಲಕರ ಪೈಕಿ 2.47 ಲಕ್ಷ ಮಂದಿ ಉತ್ತೀರ್ಣರಾಗಿದ್ದು, ಶೇಕಡಾವಾರು 79.98 ಮಂದಿ ಪಾಸ್ ಆಗಿದ್ದಾರೆ. ಕಳೆದ ವರ್ಷದ ಪ್ರಮಾಣ ಶೇ.69.05 ಇತ್ತು.
ಕಲಾ ವಿಭಾಗದಲ್ಲಿ 1,87,891 ಮಂದಿ ಪರೀಕ್ಷೆ ಬರೆದು 1,28,448 ಮಂದಿ ಉತ್ತೀರ್ಣರಾಗಿ ಶೇ.68.96% ಫಲಿತಾಂಶ ಬಂದಿದೆ, ವಾಣಿಜ್ಯ ವಿಭಾಗದಲ್ಲಿ 2,15,357 ವಿದ್ಯಾರ್ಥಿಗಳು ಪರೀಕ್ಷೆ ಬರೆದು 1,74,315 ಮಂದಿ ಉತ್ತೀರ್ಣರಾಗಿ ಶೇ.80.94 ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿ 2,77,831 ಮಂದಿ ಪರೀಕ್ಷೆ ಬರೆದು 2,49,927 ಉತ್ತೀರ್ಣರಾಗಿ ಶೇ.89.96 ಫಲಿತಾಂಶ ದಾಖಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಶೇ.97.37 ಫಲಿತಾಂಶ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಉಡುಪಿ ಇದ್ದು, ಶೇ.96.80 ಫಲಿತಾಂಶ ಗಳಿಸಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿ ವಿಜಯಪುರ (ಶೇ.94.89) ಹಾಗೂ ಉತ್ತರ ಕನ್ನಡ (ಶೇ.92.51) ಇವೆ.

ಪ್ರಮುಖ ಸುದ್ದಿ :-   ಜೈಲಿನಲ್ಲಿ ಸುಹಾಸ ಶೆಟ್ಟಿ ಕೊಲೆಯ ಪ್ರಮುಖ ಆರೋಪಿ ಮೇಲೆ ಸಹಕೈದಿಗಳಿಂದ ಹಲ್ಲೆ ಯತ್ನ

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement