ಮಾಜಿ ಸಿಎಂ ಕಮಲನಾಥ ಪುತ್ರ ನಕುಲನಾಥ ಲೋಕಸಭೆ ಚುನಾವಣೆ ಮೊದಲನೇ ಹಂತದ ಅತ್ಯಂತ ಶ್ರೀಮಂತ ಅಭ್ಯರ್ಥಿ

ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ ಅವರ ಪುತ್ರ ನಕುಲನಾಥ ಅವರು ಲೋಕಸಭೆ ಚುನಾವಣೆಯ 1 ನೇ ಹಂತದಲ್ಲಿ ಸ್ಪರ್ಧಿಸುತ್ತಿರುವ ಎಲ್ಲ ಅಭ್ಯರ್ಥಿಗಳಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.
ಮಧ್ಯಪ್ರದೇಶದ ಚಿಂದ್ವಾರದಿಂದ ಸ್ಪರ್ಧಿಸಿರುವ ನಕುಲನಾಥ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ 716 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ತಿಳಿಸಿದೆ.
ಛಿಂದ್ವಾರಾ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ, ಇದು 1952 ರಿಂದ ಸ್ಥಾನವನ್ನು ಗೆಲ್ಲುತ್ತ ಬಂದಿದೆ. ಈ ಸ್ಥಾನವನ್ನು 1997 ರಲ್ಲಿ ಬಿಜೆಪಿಯು ಈ ಸ್ಥಾನದಲ್ಲಿ ಗೆದ್ದಿತ್ತು. ಕಮಲನಾಥ ಅವರು ಎರಡು ದಶಕಗಳಿಂದ ಅಂದರೆ 1998 ರಿಂದ 2019 ರವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2019 ರಲ್ಲಿ ಕಮಲನಾಥ ಬದಲಿಗೆ ಅವರ ಮಗ ನಕುಲನಾಥ ಸ್ಪರ್ಧಿಸಿದರು. ಮಧ್ಯಪ್ರದೇಶದಲ್ಲಿ ಮೋದಿ ಅಲೆಯ ಹೊರತಾಗಿಯೂ ಕಾಂಗ್ರೆಸ್‌ ಪಕ್ಷವು ಈ ಸ್ಥಾನವನ್ನು ಉಳಿಸಿಕೊಂಡಿತ್ತು.

ಎಐಎಡಿಎಂಕೆಯ ಈರೋಡ್ (ತಮಿಳುನಾಡು) ಅಭ್ಯರ್ಥಿ ಅಶೋಕಕುಮಾರ ಲೋಕಸಭೆ ಚುನಾವಣೆಯ ಹಂತ-1ರಲ್ಲಿ ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಅವರು 662 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ದೇವನಾಥನ್ ಯಾದವ್ ಟಿ. ಅವರು 304 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ತಿಳಿಸಿದೆ.
ತೆಹ್ರಿ ಗಡ್ವಾಲ್‌ನಿಂದ ಸ್ಪರ್ಧಿಸಿರುವ ಬಿಜೆಪಿಯ ಮಾಲಾ ರಾಜ್ಯ ಲಕ್ಷ್ಮಿ ಶಾ ಅವರ ಆಸ್ತಿ 206 ಕೋಟಿ ರೂ.ಗಳಾಗಿದ್ದು ಅವರು ನಾಲ್ಕನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಐದನೇ ಸ್ಥಾನದಲ್ಲಿ ಬಿಎಸ್ಪಿಯ ಮಜೀದ್ ಅಲಿ ಇದ್ದಾರೆ. 159 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾಗವತ ಕಥಾ ನಾಟಕದಲ್ಲಿ ರಾಕ್ಷಸನ ಪಾತ್ರ ಮಾಡಿದ್ದ ಬಾಲಕನ ಕತ್ತು ಸೀಳಿದ ಕಾಳಿದೇವಿ ಪಾತ್ರ ಮಾಡಿದ್ದ ಮತ್ತೊಬ್ಬ ಬಾಲಕ...!

ಮೊದಲ ಹಂತದಲ್ಲಿ ಚುನಾವಣೆಗೆ ಹೋಗುವ ಅಭ್ಯರ್ಥಿಗಳ ವಿಶ್ಲೇಷಣೆಯು ಸಂಪತ್ತಿನ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದು ಎಡಿಆರ್ ಹೇಳಿದೆ. ಚುನಾವಣೆಯ ಮೊದಲ ಹಂತದಲ್ಲಿ ಸುಮಾರು 28 ಪ್ರತಿಶತ ಅಭ್ಯರ್ಥಿಗಳು 1 ಕೋಟಿ ರೂಪಾಯಿಗಿಂತ ಹೆಚ್ಚಿನ ಆಸ್ತಿ ಹೊಂದಿರುವ “ಕೋಟ್ಯಾಧಿಪತಿಗಳು”. ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿಯು ರೂ 4.51 ಕೋಟಿಗಳಷ್ಟಿದೆ ಎಂದು ಎಡಿಆರ್ ಹೇಳಿದೆ.

ಪ್ರಮುಖ ಪಕ್ಷಗಳ ಪೈಕಿ ಆರ್‌ಜೆಡಿಯ ಎಲ್ಲಾ ನಾಲ್ಕು ಅಭ್ಯರ್ಥಿಗಳು, ಎಐಎಡಿಎಂಕೆಯ 36 ಅಭ್ಯರ್ಥಿಗಳಲ್ಲಿ 35, ಡಿಎಂಕೆಯ 22 ಅಭ್ಯರ್ಥಿಗಳಲ್ಲಿ 21, ಬಿಜೆಪಿಯ 77 ಅಭ್ಯರ್ಥಿಗಳಲ್ಲಿ 69 ಅಭ್ಯರ್ಥಿಗಳು, ಕಾಂಗ್ರೆಸ್‌ನ 56 ಅಭ್ಯರ್ಥಿಗಳಲ್ಲಿ 49, ಟಿಎಂಸಿಯ ಐದು ಅಭ್ಯರ್ಥಿಗಳಲ್ಲಿ ನಾಲ್ಕು ಮತ್ತು ಬಿಎಸ್‌ಪಿಯ 86 ಅಭ್ಯರ್ಥಿಗಳಲ್ಲಿ 18 ಅಭ್ಯರ್ಥಿಗಳು 1 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿಯನ್ನು ಘೋಷಿಸಿದ್ದಾರೆ ಎಂದು ಎಡಿಆರ್‌ ವಿಶ್ಲೇಷಣೆ ತೋರಿಸಿದೆ.
ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ. ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಪ್ರಮುಖ ಸುದ್ದಿ :-   ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement