ಸಚಿವ ಸ್ಥಾನ-ಎಎಪಿಗೆ ದೆಹಲಿ ಸಚಿವ ರಾಜಕುಮಾರ ಆನಂದ ರಾಜೀನಾಮೆ

ನವದೆಹಲಿ: ದೆಹಲಿಯ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜಕುಮಾರ ಆನಂದ ಅವರು ಬುಧವಾರ ತಮ್ಮ ಸಚಿವ ಸ್ಥಾನಕ್ಕೆ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮದ್ಯ ನೀತಿ ಪ್ರಕರಣದ ಸ್ಪಷ್ಟ ಉಲ್ಲೇಖ ನೀಡಿರುವ ದೆಹಲಿ ಸಚಿವ ರಾಜಕುಮಾರ ಆನಂದ ಅವರು ಬುಧವಾರ ಆಮ್ ಆದ್ಮಿ ಪಕ್ಷದ ಭ್ರಷ್ಟಾಚಾರದ ನೀತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜಕುಮಾರ ಆನಂದ್ ಅವರು ಪಟೇಲ್ ನಗರ ಪ್ರದೇಶದ ಶಾಸಕರಾಗಿದ್ದು, ಕೇಜ್ರಿವಾಲ್ ನೇತೃತ್ವದ ದೆಹಲಿ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಜಾತಿ/ ಪಂಗಡದ ಸಚಿವರಾಗಿದ್ದರು.

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಎಎಪಿಯ ನೀತಿಯಿಂದ ಅತೃಪ್ತನಾಗಿ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
“ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿದ್ದು ಭ್ರಷ್ಟಾಚಾರದ ವಿರುದ್ಧ ಹೋರಾಡಲು. ಆದರೆ ಈಗ ಪಕ್ಷ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದೆ, ನನಗೆ ಸಚಿವ ಸ್ಥಾನದ ಮೇಲೆ ಕೆಲಸ ಮಾಡುವುದು ಕಷ್ಟಕರವಾಗಿದೆ, ಈ ಭ್ರಷ್ಟಾಚಾರದೊಂದಿಗೆ ನನ್ನ ಹೆಸರನ್ನು ಜೋಡಿಸಲು ಇಷ್ಟಪಡದ ಕಾರಣನಾನು ಸಚಿವ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

“ರಾಜಕೀಯ ಬದಲಾದ ನಂತರ ದೇಶ ಬದಲಾಗುತ್ತದೆ ಎಂದು ಜಂತರ್ ಮಂತರ್‌ನಿಂದ ಅರವಿಂದ್ ಕೇಜ್ರಿವಾಲ್ ಹೇಳಿದ್ದರು, ರಾಜಕೀಯ ಬದಲಾಗಿಲ್ಲ, ಆದರೆ ರಾಜಕಾರಣಿ ಬದಲಾಗಿದ್ದಾರೆ” ಎಂದು ಅವರು ಹೇಳಿದರು.
ದಲಿತರಿಗೆ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯವಿಲ್ಲ. ಎಎಪಿಯು ದಲಿತ ಶಾಸಕರು, ಸಚಿವರು ಅಥವಾ ಕೌನ್ಸಿಲರ್‌ಗಳಿಗೆ ಯಾವುದೇ ಗೌರವ ನೀಡಿಲ್ಲ ಎಂದು ಆರೋಪಿಸಿದರು. ಸಮಾಜಕ್ಕೆ ಹಣ ಕೊಡಲು ಸಚಿವನಾದೆ, ದಲಿತ ಪ್ರಾತಿನಿಧ್ಯದ ವಿಚಾರ ಬಂದಾಗ ಹಿಂದೆ ಸರಿಯುವ ಪಕ್ಷದ ಭಾಗವಾಗಲು ನಾನು ಬಯಸುವುದಿಲ್ಲ, ನಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದರು.

ನಮ್ಮಲ್ಲಿ 13 ರಾಜ್ಯಸಭಾ ಸಂಸದರಿದ್ದಾರೆ, ಆದರೆ ಅವರಲ್ಲಿ ಯಾರೂ ದಲಿತ, ಮಹಿಳೆ ಅಥವಾ ಹಿಂದುಳಿದ ವರ್ಗದವರಲ್ಲ. ಈ ಪಕ್ಷದಲ್ಲಿ ದಲಿತ ಶಾಸಕರು, ಕೌನ್ಸಿಲರ್‌ಗಳು ಮತ್ತು ಮಂತ್ರಿಗಳಿಗೆ ಗೌರವವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ದಲಿತರು ಮೋಸ ಹೋದ ಭಾವನೆ ಇದೆ. ನಾನು ಈ ಪಕ್ಷದಲ್ಲಿ ಉಳಿಯುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದರು.

ಕಳೆದ ವರ್ಷ ರಾಜಕುಮಾರ ಆನಂದ ಮನೆ ಮೇಲೆ ಇ.ಡಿ. ದಾಳಿ
ಗಮನಾರ್ಹವಾಗಿ, ಕಳೆದ ವರ್ಷ ಜಾರಿ ನಿರ್ದೇಶನಾಲಯವು ಕಸ್ಟಮ್ಸ್-ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜಕುಮಾರ ಆನಂದ ಅವರ ಹೆಸರು ಕಾಣಿಸಿಕೊಂಡಿತು, ಅದರ ನಂತರ ಅವರ ಮನೆಯನ್ನು ತನಿಖಾ ಸಂಸ್ಥೆ ಶೋಧಿಸಿತ್ತು.
ಏತನ್ಮಧ್ಯೆ, ರಾಜಕುಮಾರ ಆನಂದ ಅವರು ಎಎಪಿ ತೊರೆಯುವ ನಿರ್ಧಾರದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಎಎಪಿ ನಾಯಕ ಸಂಜಯ ಸಿಂಗ್ ಆರೋಪಿಸಿದ್ದಾರೆ. “ನಮ್ಮ ಸಚಿವರು ಮತ್ತು ಶಾಸಕರನ್ನು ಒಡೆಯಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ಅನ್ನು ಬಳಸುತ್ತಿದೆ. ಇದು ಎಎಪಿ ಸಚಿವರು ಮತ್ತು ಶಾಸಕರಿಗೆ ಪರೀಕ್ಷೆಯಾಗಿದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement