ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

ನವದೆಹಲಿ: ದಾರಿ ತಪ್ಪಿಸುವ ಮತ್ತು ಅಲೋಪಥಿ ಪದ್ದತಿ ವಿರುದ್ಧ ಅವಹೇಳನಕರ ಜಾಹೀರಾತು ಅಭಿಯಾನ ಆರಂಭಿಸಿದ್ದಕ್ಕಾಗಿ ಪತಂಜಲಿ ಆಯುರ್ವೇದ ಪ್ರಕಟಿಸಿದ್ದ ಬೇಷರತ್‌ ಕ್ಷಮೆಯಾಚನೆ ಜಾಹೀರಾತಿನ ಗಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದ ಒಂದು ದಿನದ ನಂತರ ಅದು ಜಾಹೀರಾತಿನ ಗಾತ್ರವನ್ನು ಹೆಚ್ಚಿಸಿ ಕಂಪೆನಿ ಕ್ಷಮಾಪಣೆ ಪ್ರಕಟಿಸಿದೆ.
ವಿವಿಧ ದಿನಪತ್ರಿಕೆಗಳಲ್ಲಿ ಬುಧವಾರ ಪ್ರಕಟವಾದ ಜಾಹೀರಾತು ಈ ಹಿಂದೆ ಪತಂಜಲಿ ಕ್ಷಮೆ ಯಾಚಿಸಿದ್ದ ಜಾಹೀರಾತಿಗಿಂತಲೂ ಗಮನಾರ್ಹ ಪ್ರಮಾಣದಲ್ಲಿ ದೊಡ್ಡದಾಗಿದೆ. ಕ್ಷಮೆಯಾಚನೆ ಜಾಹೀರಾತು ಕಿರಿದಾಗಿ ಇರಬಾರದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರದ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿತ್ತು. ಅದರ ಬೆನ್ನಿಗೇ ಕಾಲು ಪುಟದಷ್ಟು ದೊಡ್ಡ ಗಾತ್ರದಲ್ಲಿ ಕ್ಷಮಾಪಣಾ ಜಾಹೀರಾತು ಪ್ರಕಟಗೊಂಡಿದೆ.

ಈ ಹಿಂದಿನ ಜಾಹೀರಾತುಗಳನ್ನು ಕಂಡಿದ್ದ ನ್ಯಾಯಾಲಯ ಸುಲಭವಾಗಿ ಓದುವಂತೆ ಈ ಕ್ಷಮೆಯಾಚನೆ ಜಾಹೀರಾತು ದೊಡ್ಡದಾಗಿದೆಯೇ ಎಂದು ಪ್ರಶ್ನಿಸಿತ್ತು. ಅಲ್ಲದೆ, ಇದು ಪತಂಜಲಿ ಈ ಹಿಂದೆ ನೀಡಿದ್ದ ದಾರಿತಪ್ಪಿಸುವ ಜಾಹಿರಾತಿನಷ್ಟೇ ದೊಡ್ಡದಾಗಿ ಇದೆಯೇ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಪ್ರಶ್ನಿಸಿತ್ತು. ಅಲ್ಲದೆ, ಮುದ್ರಿತ ಕ್ಷಮಾಪಣೆ ಪ್ರತಿಗಳನ್ನು ಪರೀಕ್ಷೆಗಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಪತಂಜಲಿಗೆ ಪೀಠ ಆದೇಶಿಸಿತ್ತು.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

“ದಯವಿಟ್ಟು ಜಾಹೀರಾತುಗಳನ್ನು ಕತ್ತರಿಸಿ ನಮಗೆ ನೀಡಿ. ಅವುಗಳನ್ನು ದೊಡ್ಡದಾಗಿಸಿ ಕೊಡಬೇಡಿ. ನಾವು ನಿಜವಾದ ಗಾತ್ರ ನೋಡಲು ಬಯಸುತ್ತೇವೆ. ಇದು ನಮ್ಮ ನಿರ್ದೇಶನ…ನೀವು (ಕ್ಷಮೆಯಾಚನೆ) ಮಾಡಿರುವುದನ್ನು ನಾವು ನೋಡ ಬಯಸುತ್ತೇವೆ” ಎಂದು ಪೀಠ ಹೇಳಿತ್ತು.
ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಮತ್ತು ಅದರ ಸಂಸ್ಥಾಪಕರಾದ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರು ಅವಹೇಳನಕಾರಿ ಅಭಿಯಾನ ನಡೆಸುತ್ತಿರುವುದನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಸೂಚನೆಗಳನ್ನು ನೀಡಿತ್ತು.

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement