ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆ

ಪಟ್ನಾ: ಭೋಜ್‌ಪುರಿ ನಟಿ ಅಮೃತಾ ಪಾಂಡೆ ಏಪ್ರಿಲ್ 27 ರಂದು ಬಿಹಾರದ ಭಾಗಲ್ಪುರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 27 ವರ್ಷದ ನಟಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ಆದರೆ ಪ್ರಕರಣದ ತನಿಖೆ ನಡೆಯುತ್ತಿದೆ.
ಪಟ್ನಾದ ಅದಾಮಪುರದ ದಿವ್ಯಧರ್ಮ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ.
ಅಮೃತಾ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದರು. ಇದನ್ನು ನೋಡಿದ ಕೂಡಲೇ ನೆರೆಯವರ ಸಹಾಯ ಪಡೆದು ಅವರನ್ನು ಕೆಳಗೆ ಇಳಿಸಿಸುವ ಪ್ರಯತ್ನ ಮಾಡಿದೆ. ಆದರೆ ಆ ವೇಳೆಗೆ ಮೃತಪಟ್ಟಿದ್ದರು. ನಂತರ ಪೊಲೀಸರಿಗೆ ಕರೆ ಮಾಡಿ ತಿಳಿಸಲಾಯಿತು ಎಂದು ಅಮೃತಾ ಸಹೋದರಿ ಹೇಳಿದ್ದಾರೆ.
ಅವರು ಸಾಯುವ ಮುನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ “ದೋ ನಾವ್ ಮೆ ಸವಾರ್ ಥಿ ಉಸ್ಕಿ ಜಿಂದಗಿ, ಹಮ್ನೆ ಅಪ್ನಿ ನಾವ್ ಡುಬಾ ಕೆ ಉಸ್ಕಾ ಸಫರ್ ಆಸಾನ್ ಕರ್ ದಿಯಾ” (ಅವನ/ಆಕೆಯ ಜೀವನ ಎರಡು ದೋಣಿಗಳಲ್ಲಿ ಸಾಗುತ್ತಿತ್ತು, ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವನ/ಅವಳ ಪ್ರಯಾಣವನ್ನು ಸುಲಭಗೊಳಿಸಿದ್ದೇವೆ) ಎಂಬ ಸಂದೇಶ ಹಾಕಿದ್ದರು.ಪೊಲೀಸರು ಯಾವುದೇ ಡೆತ್‌ನೋಟ್‌ ವಶಪಡಿಸಿಕೊಂಡಿಲ್ಲ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ಆಕೆ ಪತಿಯನ್ನು ಅಗಲಿದ್ದಾರೆ.ಅಮೃತಾ ಅವರಿಗೆ ಸಾಕಷ್ಟು ಕೆಲಸ ಸಿಗದೆ ಖಿನ್ನತೆಯಿಂದ ಬಳಲುತ್ತಿದ್ದರಿಂದ ಅವರ ವೃತ್ತಿ ಜೀವನದ ಬಗ್ಗೆ ಚಿಂತಿತರಾಗಿದ್ದರು ಎಂದು ಅಮೃತಾ ಕುಟುಂಬದವರು ತಿಳಿಸಿದ್ದಾರೆ. ಅವರು ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ನಟಿ ತಮ್ಮ ಪತಿ ಅನಿಮೇಷನ್ ಇಂಜಿನಿಯರ್ ಚಂದ್ರಮಣಿ ಜಂಗಡ್ ಅವರೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದರು. ಏಪ್ರಿಲ್ 18 ರಂದು ತಮ್ಮ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಅವಳು ಭಾಗಲ್ಪುರಕ್ಕೆ ಹೋಗಿದ್ದರು.

ಮದುವೆಯ ನಂತರ ಅವರ ಪತಿ ಮನೆಗೆ ಮರಳಿದ್ದಾರೆ. ಆದರೆ ಅಮೃತಾ ಅಲ್ಲಿಯೇ ಉಳಿಯಲು ನಿರ್ಧರಿಸಿದ್ದರು.
ಭೋಜಪುರಿ ನಟ ಖೇಸರಿ ಲಾಲ ಯಾದವ್ ಜೊತೆಗೆ ‘ದೀವಾನಪನ್’ ಚಿತ್ರದಲ್ಲಿ ನಟಿಸಿದ್ದಾರೆ. ಅವರು ಹಿಂದಿ ಚಲನಚಿತ್ರಗಳು, ಟಿವಿ ಶೋಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಅವರು ‘ಪರಿಶೋಧ್’ ವೆಬ್ ಸರಣಿಯ ಪಾತ್ರದ ಮೂಲಕ ಹೆಸರು ಮಾಡಿದ್ದರು.
ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ. ತಂಡ ರಚಿಸಲಾಗಿದ್ದು, ಕುಟುಂಬ ಸದಸ್ಯರ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement