ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಭಾರೀ ಟ್ವಿಸ್ಟ್​; ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜೊತೆ ಕಾರ್ತಿಕ ಫೋಟೋಗಳು ವೈರಲ್‌..!

ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವೀಡಿಯೊ ಪೆನ್​ಡ್ರೈವ್ ಪ್ರಕರಣ ತಿರುವುಗಳ ಮೇಲೆ ಪಡೆಯುತ್ತಿದೆ. ಈಗ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು, ಪ್ರಜ್ವಲ್ ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಭೇಟಿಯಾಗಿರುವ ಫೋಟೊಗಳು ಹರಿದಾಡುತ್ತಿವೆ.
ತನಗೆ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಎಂಬಾತನ ಪರಿಚಯವೇ ಇಲ್ಲ, ಆತ ಒಮ್ಮೆ ಮಾತ್ರ ಭೇಟಿಯಾಗಿದ್ದ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್​ ಪಟೇಲ್ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಈಗ ಹಾಸನ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಹಾಗೂ ಪುಟ್ಟರಾಜು ಜತೆಗೆ ವೀಡಿಯೋ ಕಿಂಗ್‌ಪಿನ್ ಎಂದು ಆರೋಪಿಸಲಾದ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಇರುವ ಫೋಟೋಗಳು ವೈರಲ್ ಆಗಿವೆ.

ಶ್ರೇಯಸ್ ಊಟ ಮಾಡುತ್ತಿರುವಾಗ ಕಾರ್ತಿಕ್ ಇರುವ ಫೋಟೋ ಸಹ ವೈರಲ್ ಆಗಿವೆ. ಈ ಫೋಟೋಗಳು ಲೋಕಸಭಾ ಚುನಾವಣೆ ದಿನವೇ ಕಾರ್ತಿಕ್ ಜೊತೆ ಶ್ರೇಯಸ್ ಊಟ ಮಾಡಿದ್ದಾರೆ ಎನ್ನಲಾದ ಫೋಟೋ ಎನ್ನಲಾಗಿದೆ. ಕಾರ್ತಿಕ್, ಶ್ರೇಯಸ್ ಪಟೇಲ್‌, ಪುಟ್ಟರಾಜು ಕೈಕೈ ಹಿಡಿದುಕೊಂಡು ಫೋಟೋ ತೆಗೆಸಿಕೊಂಡಿರುವ ಮತ್ತೊಂದು ಫೋಟೋ ಸಹ ವೈರಲ್‌ ಆಗಿದೆ. ಡಿ.ಕೆ ಶಿವಕುಮಾರ ಅವರಿಗೆ ಪೆನ್‌ಡ್ರೈವ್ ತಲುಪಿಸಿದ್ದು ಪುಟ್ಟರಾಜು ಎಂದು ವಕೀಲ ದೇವರಾಜೇಗೌಡ ಆರೋಪಿಸಿದ್ದರು.‌ ಈಗ ಈ ಫೋಟೋಗಳನ್ನು ಜೆಡಿಎಸ್ ಕಾರ್ಯಕರ್ತರು ವೈರಲ್ ಮಾಡಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

ನನಗೆ ಕಾರ್ತಿಕ್ ಪರಿಚಯವೇ ಇಲ್ಲ, ಒಮ್ಮೆ ಮಾತ್ರ ಭೇಟಿಯಾಗಿದ್ದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಹೇಳಿಕೆ ನೀಡಿದ್ದರು. ಆದರೆ ಶ್ರೇಯಸ್ ಜೊತೆಗಿರುವ ಫೋಟೋಗಳು ವೈರಲ್ ಆಗುತ್ತಿದೆ.
ಎಸ್‌ಐಟಿ ಈ ಪ್ರಕರಣದ ತನಿಖೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಎಚ್‌.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ವಕೀಲ ದೇವರಾಜೇಗೌಡಗೆ ವಿಚಾರಣೆಗೆ ಹಾಜರಾಗಲು ಮೇಲಿಂದ ಮೇಲೆ ನೋಟಿಸ್ ನೀಡಲಾಗುತ್ತದೆ. ಆದರೆ ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಡ್ರೈವರ್ ಕಾರ್ತಿಕ್ ಎಲ್ಲಿ? ಆತನಿಗೆ ಯಾಕೆ ನೋಟಿಸ್‌ ನೀಡಿಲ್ಲ..? ಆತನನ್ನು ಯಾಕೆ ಹುಡುಕುತ್ತಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement