ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ: 625ಕ್ಕೆ 625 ಅಂಕ ಪಡೆದ ಅಂಕಿತಾ ರಾಜ್ಯಕ್ಕೆ ಟಾಪರ್, ಉಡುಪಿ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ಶೇ 73.40 ಮಂದಿ ತೇರ್ಗಡೆಯಾಗಿದ್ದಾರೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 2,87,416 (65.90%) ಬಾಲಕರು ಪಾಸ್ ಆಗಿದ್ದು 3,43,788 (81.11%) ಬಾಲಕಿಯರು ಪಾಸ್​ ಆಗಿದ್ದಾರೆ. ಫಲಿತಾಂಶದಲ್ಲಿ ಕಳೆದ ಬಾರಿಗಿಂತ ಶೇ 10ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಶೇ 83.89ರಷ್ಟು ಫಲಿತಾಂಶ ದಾಖಲಾಗಿತ್ತು.
ಈ ಬಾರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ 94% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 92.12% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿವಮೊಗ್ಗ (88.67%) ಉತ್ತೀರ್ಣರಾಗುವ ಮೂಲಕ ಮೂರನೇ ಸ್ಥಾನ ಪಡೆದಿದೆ. ಕೊನೆಯ ಸ್ಥಾನ ಗಳಿಸಿದ ಯಾದಗಿರಿ ಜಿಲ್ಲೆಯಲ್ಲಿ ಶೇ 50.59 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ಮತ್ತು kseab.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು.

ಓರ್ವ ವಿದ್ಯಾರ್ಥಿನಿ ಮಾತ್ರ ಈ ಬಾರಿ 625ಕ್ಕೆ 625 ಅಂಕಗಳನ್ನು ತೆಗೆದುಕೊಂಡಿದ್ದಾರೆ .ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿಯವರಾಗಿದ್ದಾರೆ. ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದರ್ಶನ ಭಟ್ ಹಾಗೂ ಶಿರಸಿ ತಾಲೂಕಿನ ಗೋಳಿ ಪ್ರೌಢಶಾಲೆಯ ಚಿನ್ಮಯಿ ಶ್ರೀಪಾದ ಹೆಗಡೆ  ಹಾಗೂ ಭೈರುಂಬೆಯ ಶ್ರೀರಾಮ ಕೆ.ಎಂ.625ಕ್ಕೆ 624 ಅಂಕಗಳಿಸಿದ್ದಾರೆ. ರಾಜ್ಯದಲ್ಲಿ ಒಟ್ಟು ಏಳು ಜನ ದ್ವಿತೀಯ ಸ್ಥಾನ ಪಡೆದಿದ್ದು ಅದರಲ್ಲಿ ಮೂವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವರಾಗಿದ್ದಾರೆ.

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ
ಅಂಕಿತಾ ಬಸಪ್ಪ ಕೊನ್ನೂರು (ಬಾಗಲಕೋಟೆ) 625/625 (ಪ್ರಥಮ)
ಮೇದಾ ಪಿ. ಶೆಟ್ಟಿ (ಬೆಂಗಳೂರು) 625ಕ್ಕೆ 624 ಅಂಕ
ಹರ್ಷಿತಾ ಡಿಎಂ (ಮಧುಗಿರಿ) 625ಕ್ಕೆ 624 ಅಂಕ
ಚಿನ್ಮಯ್ (ದಕ್ಷಿಣ ಕನ್ನಡ) 625ಕ್ಕೆ 624 ಅಂಕ
ಸಿದ್ದಾಂತ್ (ಚಿಕ್ಕೊಡಿ) 625ಕ್ಕೆ 624 ಅಂಕ
ದರ್ಶನ್ ಭಟ್‌ (ಶಿರಸಿ) 625ಕ್ಕೆ 624 ಅಂಕ
ಚಿನ್ಮಯಿ ಶ್ರೀಪಾದ ಹೆಗಡೆ (ಶಿರಸಿ) 625ಕ್ಕೆ 624 ಅಂಕ
ಶ್ರೀರಾಮ ಕೆ.ಎಂ (ಶಿರಸಿ) 625ಕ್ಕೆ 624 ಅಂಕ
623 ಅಂಕಗಳನ್ನು ಪಡೆದವರು
ಸೌರವ್ ಕೌಶಿಕ್
ಅಂಕಿತಾ ಆನಂದ ಅಂಡೇವಾಡಿಕರ
ಧೀರಜ ಪ್ರೀತಮ ರೆಡ್ಡಿ ಬಿ.ಸಿ.
ಮಾನ್ಯತಾ ಎಸ್.
ಮೊನಿಶ ಸೈ ಎಸ್‌ ಎನ್‌
ದರ್ಶಿತಾ ಎ.
ಜಾನವಿ ಎಸ್.
ಡಿ.ಎಸ್. ಧಾನ್ವಿ
ನವನೀತ ಕೆ.ಸಿ.
ಸಹನಾ ಎನ್.
ಅನನ್ಯ ಗೌಡ ವಿ.
ನಿಸರ್ಗ ಎಚ್‌.ಜಿ.
ಪವಿತ್ರ ಮಡಿವಾಲಪ್ಪಗೌಡ ಕೊನ್ನೂರು
ತೃಪ್ತಿ ರಾಮಚಂದ್ರ ಗೌಡ
ಬಾಗಲಕೋಟೆಯ ಅಂಕಿತಾ ಬಸಪ್ಪ ಕೊನ್ನೂರು 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮಪಡೆದಿದ್ದಾರೆ.. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.  ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದರ್ಶನ ಭಟ್ ಹಾಗು ಇದೇ ತಾಲೂಕಿನ ಗೋಳಿ ಪ್ರೌಢಶಾಲೆಯ ಚಿನ್ಮಯಿ ಶ್ರೀಪಾದ ಹೆಗಡೆ 625ಕ್ಕೆ 624 ಅಂಕಗಳಿಸಿಸಿದ್ದಾರೆ.ಒಟ್ಟು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ಶಾಸಕ ಹರೀಶ ಪೂಂಜಾ ವಿರುದ್ಧ ಪ್ರಕರಣ ದಾಖಲು

ಈ ಬಾರಿಯ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 73.40 ರಷ್ಟು ಫಲಿತಾಂಶ ದಾಖಲಾಗಿದೆ. ಮಾ.25ರಿಂದ ಏ.6ರವರೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿತ್ತು.

ಈ ಸಲ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 4.41 ಲಕ್ಷ ಬಾಲಕರು, 4.28 ಬಾಲಕಿಯರು. ಅಲ್ಲದೆ, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 5,424 ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಕರ್ನಾಟಕದ 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.
ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3ಕ್ಕೆ ಅವಕಾಶ: ವಿದ್ಯಾರ್ಥಿಗಳು ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.

ಜಿಲ್ಲಾವಾರು ಫಲಿತಾಂಶ
ಉಡುಪಿ ಜಿಲ್ಲೆಗೆ (94%) ಫಲಿತಾಂಶ-ಪ್ರಥಮ ಸ್ಥಾನ
ದಕ್ಷಿಣ ಕನ್ನಡ ಜಿಲ್ಲೆ (92.12%) ದ್ವಿತೀಯ
ಶಿವಮೊಗ್ಗ ಜಿಲ್ಲೆ (88.67%)-ತೃತೀಯ
ಕೊಡಗು ಜಿಲ್ಲೆಗೆ (88.67%)- ನಾಲ್ಕನೇ ಸ್ಥಾನ
ಉತ್ತರ ಕನ್ನಡ ಜಿಲ್ಲೆ (86.54%) ಐದನೇ ಸ್ಥಾನ
ಹಾಸನ ಜಿಲ್ಲೆ (86.28%)- ಆರನೇ ಸ್ಥಾನ
ಮೈಸೂರು ಜಿಲ್ಲೆ (85.5%)-ಏಳನೇ ಸ್ಥಾನ
ಶಿರಸಿ ಜಿಲ್ಲೆ (84.64%)-ಎಂಟನೇ ಸ್ಥಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ (83.67%)-ಒಂಬ್ತತೇ ಸ್ಥಾನ
ಚಿಕ್ಕಮಗಳೂರು ಜಿಲ್ಲೆ (83.39%)-ಹತ್ತನೇ ಸ್ಥಾನ
ವಿಜಯಪುರ ಜಿಲ್ಲೆ (79.82%)- 11ನೇ ಸ್ಥಾನ
ಬೆಂಗಳೂರು ದಕ್ಷಿಣ ಜಿಲ್ಲೆ (79%)- 12ನೇ ಸ್ಥಾನ
ಬಾಗಲಕೋಟೆ ಜಿಲ್ಲೆ (77.92%)- 13ನೇ ಸ್ಥಾನ
ಬೆಂಗಳೂರು ಉತ್ತರ ಜಿಲ್ಲೆ (77.09%)- 14ನೇ ಸ್ಥಾನ
ಹಾವೇರಿ ಜಿಲ್ಲೆ (75.85%)- 15ನೇ ಸ್ಥಾನ
ತುಮಕೂರು ಜಿಲ್ಲೆ (75.16%)- 16ನೇ ಸ್ಥಾನ
ಗದಗ ಜಿಲ್ಲೆ (74.76%)-17ನೇ ಸ್ಥಾನ
ಚಿಕ್ಕಬಳ್ಳಾಪುರ ಜಿಲ್ಲೆ (73.61%)-18ನೇ ಸ್ಥಾನ
ಮಂಡ್ಯ ಜಿಲ್ಲೆ (73.59%)-19ನೇ ಸ್ಥಾನ
ಕೋಲಾರ ಜಿಲ್ಲೆ (73.57%) 20ನೇ ಸ್ಥಾನ
ಚಿತ್ರದುರ್ಗ ಜಿಲ್ಲೆ (72.85%)- 21ನೇ ಸ್ಥಾನ
ಧಾರವಾಡ ಜಿಲ್ಲೆ (72.67%)- 22ನೇ ಸ್ಥಾನ
ದಾವಣಗೆರೆ ಜಿಲ್ಲೆ (72.49%)-23ನೇ ಸ್ಥಾನ
ಚಾಮರಾಜನಗರ ಜಿಲ್ಲೆ (71.59%)-24ನೇ ಸ್ಥಾನ
ಚಿಕ್ಕೋಡಿ ಜಿಲ್ಲೆ (69.82%)-25ನೇ ಸ್ಥಾನ
ರಾಮನಗರ ಜಿಲ್ಲೆ (69.53%)-26ನೇ ಸ್ಥಾನ
ವಿಜಯನಗರ ಜಿಲ್ಲೆ (65.61%)- 27ನೇ ಸ್ಥಾನ
ಬಳ್ಳಾರಿ ಜಿಲ್ಲೆ (64.99%)- 28ನೇ ಸ್ಥಾನ
ಬೆಳಗಾವಿ ಜಿಲ್ಲೆ (64.93%)-29ನೇ ಸ್ಥಾನ
ಮಧುಗಿರಿ ಜಿಲ್ಲೆ (62.44%)-30ನೇ ಸ್ಥಾನ
ರಾಯಚೂರು ಜಿಲ್ಲೆ (61.2%)- 31ನೇ ಸ್ಥಾನ
ಕೊಪ್ಪಳ ಜಿಲ್ಲೆ (61.16%)-32ನೇ ಸ್ಥಾನ
ಬೀದರ್ ಜಿಲ್ಲೆ (57.52%)-33ನೇ ಸ್ಥಾನ
ಕಲಬುರಗಿ ಜಿಲ್ಲೆ (53.04%)- 34ನೇ ಸ್ಥಾನ
ಯಾದಗಿರಿ ಜಿಲ್ಲೆ- 50.59%-35ನೇ

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶವನ್ನು ಹೀಗೆ ನೋಡಬಹುದು..
– ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ವೆಬ್‌ ವಿಳಾಸ https://karresults.nic.in ಕ್ಕೆ ಭೇಟಿ ನೀಡಿ.
– ತೆರೆದ ವೆಬ್‌ಪೇಜ್‌ನಲ್ಲಿ ‘ SSLC 2024 Examination -1 Result Sheet’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. ರಿಜಿಸ್ಟರ್‌ ನಂಬರ್ ನಮೂದಿಸಿ.
– ವ್ಯೂ (View) ಎಂದು ಇರುವಲ್ಲಿ ಕ್ಲಿಕ್ ಮಾಡಿ.
– ಫಲಿತಾಂಶ ಪ್ರದರ್ಶಿತವಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ ತೆಗೆದುಕೊಳ್ಳಬಹುದು..

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement